ಮೈಸೂರು ಮಾನಸ ಗಂಗೋತ್ರಿಯ ಅಂದದ ಅರಮನೆ `ಜಯಲಕ್ಷ್ಮಿ ವಿಲಾಸ್’ ಮೇಲ್ಛಾವಣ ಕುಸಿತ
ಮೈಸೂರು

ಮೈಸೂರು ಮಾನಸ ಗಂಗೋತ್ರಿಯ ಅಂದದ ಅರಮನೆ `ಜಯಲಕ್ಷ್ಮಿ ವಿಲಾಸ್’ ಮೇಲ್ಛಾವಣ ಕುಸಿತ

November 17, 2021

ಕಬ್ಬಿಣದ ಶೀಟ್ ಅಳವಡಿಸಿ ತಾತ್ಕಾಲಿಕ ರಕ್ಷಣಾ ಕ್ರಮ
ಶೀಟ್ ಮುಚ್ಚಿ ಕಟ್ಟಡ ಸಂರಕ್ಷಣೆ ಮಾಡಲಾಗದು; ತಜ್ಞರ ಅಭಿಮತ ಶೀಘ್ರ ಸೂಕ್ತ ಸಂರಕ್ಷಣೆ ಕ್ರಮ ವಹಿಸದಿದ್ದರೆ ಕಟ್ಟಡಕ್ಕೆ ಮತ್ತಷ್ಟು ಹಾನಿ ಶಿಥಿಲಗೊಂಡ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಇದೂ ಸೇರುವ ಆತಂಕ ಇನ್‌ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಅವರ ನೆರವಿಂದ ಪುನರುಜ್ಜೀವನಗೊಂಡಿತ್ತು ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡದ ಸಾಲಿಗೆ ಸೇರುವುದೇ ಜಯಲಕ್ಷಿö್ಮ ವಿಲಾಸ ಪ್ಯಾಲೇಸ್

ಮೈಸೂರು, ನ.೧೬(ಪಿಎಂ)- ಮೈಸೂರು ವಿವಿ ಮಾನಸ ಗಂಗೋತ್ರಿಯ ಆವರಣದ ಪಾರಂಪರಿಕ ಕಟ್ಟಡ `ಜಯ ಲಕ್ಷಿö್ಮ ವಿಲಾಸ ಅರಮನೆ’ಯ ಮೊದಲ ಅಂತಸ್ತಿನಲ್ಲಿರುವ ಜಾನಪದ ವಿಭಾಗದ ಮೇಲ್ಛಾವಣ (ಮಡ್ರಾಸ್ ಆರ್‌ಸಿಸಿ) ಕುಸಿ ದಿದ್ದು, ಶೀಘ್ರವೇ ಕಾಯಕಲ್ಪ ನೀಡದಿದ್ದರೆ, ಶಿಥಿಲಗೊಂಡು ಮೈಸೂರಿನ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿ ಇದೂ ತನ್ನ ವೈಭವ ಕಳೆದುಕೊಳ್ಳುವ ಆತಂಕ ಮೂಡಿದೆ.

ಕಳೆದ ವರ್ಷವೇ ಈ ಮೇಲ್ಛಾವಣ ಕುಸಿದಿದೆ ಎನ್ನಲಾಗಿದ್ದು, ತಾತ್ಕಾಲಿಕ ಸಂರಕ್ಷಣೆಗಾಗಿ ಶೀಟ್ ಹಾಕಲಾಗಿದೆ. ಕುಸಿದ ಜಾಗದಲ್ಲಿ ಮಳೆ ನೀರು ಬೀಳದಂತೆ ಸಣ್ಣ ಪಿಲ್ಲರ್ ಗಳನ್ನು ನಿರ್ಮಿಸಿ ಶೀಟ್‌ನಿಂದ ಮುಚ್ಚಿ ಟೆಂಟ್ ಮಾದರಿ ರಕ್ಷಣೆ ನೀಡಲಾಗಿದೆ. ಆದರೆ ಇದು ಸೂಕ್ತವಲ್ಲ. ಇದರಿಂದ ಕಟ್ಟಡಕ್ಕೆ ಮತ್ತಷ್ಟು ಹಾನಿ ಆಗಲಿದೆ ಎಂಬುದು ತಜ್ಞರ ವಾದವಾಗಿದೆ. ಮೇಲ್ಛಾವಣ ಕುಸಿದ ಸಂಬAಧ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ವಿವಿ ಕುಲಪತಿಗಳು ಭೇಟಿ ನೀಡಿ ಪರಿಶೀಲಿಸಿ ದ್ದರು. ಅಲ್ಲದೆ, ಕಟ್ಟಡ ನವೀಕರಣಕ್ಕೆ ೧೫ರಿಂದ ೨೦ ಕೋಟಿ ರೂ. ವೆಚ್ಚವಾಗ ಲಿದೆ ಎಂದು ಅಂದಾಜಿಸಲಾಗಿದೆ. ೧೯೦೭ ರಲ್ಲಿ ಈ ಅರಮನೆ ನಿರ್ಮಿಸಿದ್ದು, ೧೧೪ ವರ್ಷಗಳ ಈ ಕಟ್ಟಡಕ್ಕೆ ಕಾಯಕಲ್ಪ ನೀಡಲು ಶೀಘ್ರ ಕ್ರಮ ವಹಿಸಬೇಕೆಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ೧೦ನೇ ಚಾಮರಾಜ ಒಡೆಯರ್ ಅವರ ಮೊದಲ ಪುತ್ರಿಯೂ ಆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಕ್ಕ ಜಯಲಕ್ಷö್ಮಮ್ಮಣ ್ಣಯವರ ನಿವಾಸಕ್ಕೆಂದು ಈ ಅರಮನೆ ನಿರ್ಮಿಸಲಾಗಿತ್ತು.

ಕೆಲ ವರ್ಷಗಳ ಹಿಂದೆ ಕಟ್ಟಡ ಎಡ ಭಾಗ (ಕಟ್ಟಡದ ಎದುರು ಮುಖ ಮಾಡಿ ನಿಂತರೆ ಎಡಭಾಗ) ಕುಸಿತ ಉಂಟಾಗುವ ಹಂತ ತಲುಪಿತ್ತು. ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರಾದ ಸುಧಾಮೂರ್ತಿ ಅವರು ೧.೧೭ ಕೋಟಿ ರೂ.
ಕಲ್ಪಿಸಿ ಇದರ ನವೀಕರಣಕ್ಕೆ ನೆರವಾಗಿದ್ದರು. ಆದರೆ ಇದೀಗ ಮೇಲ್ಛಾವಣ ಕುಸಿದಿರುವ ಸುದ್ದಿ ಆತಂಕ ಮೂಡಿಸಿದೆ. ಈ ಸಂಬAಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆ ತಜ್ಞರ ಸಮಿತಿ ಸದಸ್ಯ ಪ್ರೊ.ಎನ್.ಎಸ್.ರಂಗರಾಜು, ಅಭಿರಾಮ್ ಜಿ.ಶಂಕರ್ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಅವರ ಅನುಮತಿ ಮೇರೆಗೆ ನಮ್ಮ ಸಮಿತಿ ವತಿಯಿಂದ ಜಯಲಕ್ಷಿö್ಮ ವಿಲಾಸ ಅರಮನೆ ಪರಿಶೀಲನೆ ನಡೆಸಲಾಯಿತು. ವಿವಿಗೆ ವರದಿ ನೀಡಿ, ದುರಸ್ತಿ ಕಾರ್ಯಕ್ಕೆ ಸಲಹೆ ನೀಡಲಾಗಿತ್ತು ಎಂದು ತಿಳಿಸಿದರು.

ಇದಾದ ಬಳಿಕವೂ ವಿವಿಯಿಂದ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ಅದರಲ್ಲಿ ನಾನೂ ಇದ್ದೆ. ಸಮಿತಿ ವತಿಯಿಂದ ಪರಿಶೀಲಿಸಿ, ನವೀಕರಣ ಸಂಬAಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು. ಇದಕ್ಕೆ ೨೧ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ವರದಿಯನ್ನು ವಿವಿಗೆ ಸಲ್ಲಿಸಿ, ಶೀಘ್ರ ಕ್ರಮಕ್ಕೆ ಸಲಹೆ ನೀಡಲಾಗಿತ್ತು. ಆದರೆ ವಿವಿಯಲ್ಲಿ ಅಷ್ಟು ಹಣ ಲಭ್ಯವಿಲ್ಲವೆಂದು ಈ ಸಂಬAಧ ಕ್ರಮ ವಹಿಸಲಿಲ್ಲ. ಈಗಲಾದರೂ ವಿವಿ ಸರ್ಕಾರದ ಮುಂದೆ ಇದರ ಸಂರಕ್ಷಣೆಯ ಅಗತ್ಯತೆ ಮನವರಿಕೆ ಮಾಡಿ, ಅನುದಾನ ಕೋರುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಕಳೆದ ವರ್ಷವೇ ಕುಸಿದ ಮೇಲ್ಛಾವಣ ಗೆ ಸೀಟ್ ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊAಡಿರುವುದೂ ಸೂಕ್ತವಲ್ಲ. ಈ ರೀತಿಯ ತಾತ್ಕಾಲಿಕ ಸಂರಕ್ಷಣೆ ವ್ಯವಸ್ಥೆಯನ್ನು ಇಡೀ ಅಂತಸ್ತಿಗೆ ಮಾಡಲು ಸಾಧ್ಯವಿಲ್ಲ. ೧೨೩ ಕೊಠಡಿ ಇರುವ ಅರಮನೆ ಇದು. ವೈಜ್ಞಾನಿಕ ನೆಲೆಯಲ್ಲಿ ಸಂರಕ್ಷಣೆ ಕ್ರಮಗಳನ್ನು ಕೈಗೊಂಡು ನವೀಕರಣ ಮಾಡಬೇಕಾಗುತ್ತದೆ ಎಂದರು. ೧೯೭೨ರಲ್ಲಿ ಜನಪದ ವಸ್ತು ಸಂಗ್ರಹಾಲಯ ಮತ್ತು ೧೯೭೩ರಲ್ಲಿ ಪುರಾತತ್ವ ವಸ್ತು ಸಂಗ್ರಹಾಲಯವನ್ನು ಇಲ್ಲಿ ಆರಂಭಿಸಲಾಯಿತು. ಅಂತಾರಾಷ್ಟಿçÃಯ ಗಮನ ಸೆಳೆಯುವ ಪಾರಂಪರಿಕ ವಸ್ತುಗಳು ಇಲ್ಲಿವೆ. ೬೦೦ರಿಂದ ೮೦೦ ಪುರಾತತ್ವ ವಸ್ತುಗಳಿದ್ದರೆ, ನಾಲ್ಕೂವರೆ ಸಾವಿರ ಜನಪದ ವಸ್ತುಗಳು ಇವೆ. ಇನ್ಫೋಸಿಸ್ ಫೌಂಡೇಷನ್‌ನಿAದ ನೆರವು ನೀಡಿ ನವೀಕರಿಸಿದ ಬಳಿಕ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟನೆ ನೆರವೇರಿಸಿದ್ದರು. ಮೈಸೂರಿನಲ್ಲಿ ಮೈಸೂರು ವಿವಿ ಅಧೀನದಲ್ಲಿ ೨೫ ಪಾರಂಪರಿಕ ಕಟ್ಟಡಗಳು ಇದ್ದು, ಅವುಗಳ ಪೈಕಿ ಜಯಲಕ್ಷಿö್ಮ ವಿಲಾಸ ಅರಮನೆ ಪ್ರಮುಖ ಕಟ್ಟಡವಾಗಿದೆ ಎಂದು ಹೇಳಿದರು.
ಜಾಲರಿಯಲ್ಲಿ ಸೋರುವಂತೆ ತೊಟ್ಟಿಕ್ಕುತ್ತಿದ್ದ ನೀರು: ಕುಲಸಚಿವರು ಕರೆ ಮಾಡಿ, ಪರಿಶೀಲಿಸಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿದ್ದೆ. ನೋಡಿದರೆ ನಿಜಕ್ಕೂ ಆಘಾತವಾಯಿತು. ಅರಮನೆ ೧೦ರಿಂದ ೧೫ ಕೊಠಡಿಗಳಲ್ಲಿ ಮೇಲ್ಛಾವಣ ಯಲ್ಲಿ ಜಾಲರಿಯಲ್ಲಿ ನೀರು ಬಿಟ್ಟರೆ ಸೋರುವಂತೆ ಸೋರಿಕೆ ಉಂಟಾಗಿತ್ತು ಎಂದು ಪ್ರೊ.ರಂಗರಾಜು ಬೇಸರ ವ್ಯಕ್ತಪಡಿಸಿದರು.

ಒಡೆದಿರುವ ಮೇಲ್ಛಾವಣ ಬಣ್ಣದ ಗಾಜು: ಅರಮನೆಯ ಕಲ್ಯಾಣ ಮಂಟಪ ಮತ್ತು ನೃತ್ಯ ಶಾಲೆ ಎರಡರಲ್ಲೂ ಮೇಲ್ಛಾವಣ ಯಲ್ಲಿ ಅಳವಡಿಸಿರುವ ಬಣ್ಣ ಬಣ್ಣದ ಅಲಂಕಾರಿಕ ಗಾಜು ಒಡೆದು, ಅಲ್ಲಿಂದ ನೀರು ಸೋರಿಕೆ ಆಗುತ್ತಿರುವುದನ್ನು ಸೋಮವಾರ ಕಂಡಿತು. ಕಲ್ಯಾಣ ಮಂಟಪದಲ್ಲಿ ಕೆಳಗೆ ಹಾಸಿರುವ ಮರದ ಹಾಸು ನೀರು ಕುಡಿದಿತ್ತು. ಜೊತೆಗೆ ಇಲ್ಲಿನ ಮೇಲ್ಛಾವಣ ಯ ಮುಖ್ಯ ತೊಲೆ ಮತ್ತು ಸಣ್ಣ ತೊಲೆಗಳು ತಮ್ಮ ಸ್ಥಾನಗಳಲ್ಲಿ ಇರದೇ ಅತ್ತಿತ್ತ ಜಾರಿಗೊಂಡಿವೆ. ಇವು ತೇಗದ ಮರದ ತೊಲೆಗಳಾಗಿದ್ದು, ಅವುಗಳು ಜರುಗಿರುವ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸ ಬೇಕು. ಜೊತೆಗೆ ಅದೇ ಗುಣಮಟ್ಟದ ತೇಗದ ಮರವನ್ನು ಹೊಂದಿಸಬೇಕಾಗುತ್ತದೆ ಎಂದು ಪ್ರೊ.ರಂಗರಾಜು ತಿಳಿಸಿದರು. ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆ ತಜ್ಞರ ಸಮಿತಿ ಸದಸ್ಯರೂ ಆದ ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಕಳೆದ ವರ್ಷ ಸಮಿತಿಯಿಂದ ನೀಡಿದ್ದ ವರದಿಯಂತೆ ಶೀಘ್ರ ನವೀಕರಣಕ್ಕೆ ಕ್ರಮ ವಹಿಸದೇ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿರುವುದು ತಮಗೆ ಅತೀವ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನಪದರ ಬದುಕು, ಸಂಸ್ಕೃತಿ ಬಿಂಬಿಸುವ ಜಯಲಕ್ಷಿö್ಮ ವಿಲಾಸ ಅರಮನೆ…
ಕುವೆಂಪು ಅವರು ಮೈಸೂರು ವಿವಿಯ ಕುಲಪತಿಯಾಗಿದ್ದ ಸಂದರ್ಭದಲ್ಲಿ ಜಯಲಕ್ಷಿö್ಮ ವಿಲಾಸ ಅರಮನೆ ಸೇರಿದಂತೆ ೩೦೦ ಎಕರೆ ಭೂಮಿಯನ್ನು ೧೯೫೯ರಲ್ಲಿ ರಾಜಮನೆತನದಿಂದ ೧೦ ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಹಾ.ಮಾ.ನಾಯಕ್, ದೇ.ಜವರೇಗೌಡ ಹಾಗೂ ಜಿ.ಶಂ.ಪರಮಶಿವಯ್ಯ ಅವರ ಪರಿಶ್ರಮದಿಂದ ೧೯೬೭ರಲ್ಲಿ ಜಯಲಕ್ಷಿö್ಮ ಅರಮನೆಯ ಕೆಲ ಭಾಗದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಆರಂಭಗೊAಡಿತು. ಬಳಿಕ ಪೂರ್ಣ ಪ್ರಮಾಣದಲ್ಲಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಜನಪದರು ನಿತ್ಯ ಬಳಸುತ್ತಿದ್ದ ಪಾತ್ರೆ, ಪಡಗ, ವಸ್ತçಗಳು, ಕರಕುಶಲ ವಸ್ತುಗಳು, ಮರದ ರಥಗಳು ಸೇರಿದಂತೆ ಜನಪದರ ಬದುಕು ಮತ್ತು ಸಂಸ್ಕೃತಿ ಬಿಂಬಿಸುವ ವಸ್ತುಗಳು ಇಲ್ಲಿವೆ. ಮೈಸೂರನ್ನು `ಪಾರಂಪರಿಕ ನಗರ’ ಎಂದು ಘೋಷಣೆ ಮಾಡಲಾಗಿದೆ. ಆದರೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ೨೦೦೪ರಿಂದ ಈವರೆಗೆ ಸರ್ಕಾರ ನೀಡಿರುವ ಅನುದಾನ ತೀರ ಕಡಿಮೆ. ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕನಿಷ್ಠ ೫೦೦ ಕೋಟಿ ರೂ. ಹಣ ಅಗತ್ಯವಿದೆ. -ಪ್ರೊ.ರಂಗರಾಜು

Translate »