ಪ.ಮಲ್ಲೇಶ್ ಹೇಳಿಕೆ ವಿರೋಧಿಸಿ, ಕಾನೂನು ಕ್ರಮಕ್ಕೆ ಆಗ್ರಹಿಸಿ ಮೈಸೂರಲ್ಲಿ ಬ್ರಾಹ್ಮಣ ಸಮುದಾಯದ ಬೃಹತ್ ಪ್ರತಿಭಟನಾ ರ್ಯಾಲಿ
ಮೈಸೂರು

ಪ.ಮಲ್ಲೇಶ್ ಹೇಳಿಕೆ ವಿರೋಧಿಸಿ, ಕಾನೂನು ಕ್ರಮಕ್ಕೆ ಆಗ್ರಹಿಸಿ ಮೈಸೂರಲ್ಲಿ ಬ್ರಾಹ್ಮಣ ಸಮುದಾಯದ ಬೃಹತ್ ಪ್ರತಿಭಟನಾ ರ್ಯಾಲಿ

November 22, 2022

ಮೈಸೂರು, ನ.21(ಆರ್‍ಕೆಬಿ)- ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದಿಸಿ ಮಾತನಾಡಿದರೆಂದು ಆರೋಪಿಸಿ ವಿಚಾರ ವಾದಿ ಪ.ಮಲ್ಲೇಶ್ ವಿರುದ್ಧ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದ್ದು, ಸೋಮವಾರ ಬೃಹತ್ ರ್ಯಾಲಿ ನಡೆಸಿದರು. ಮಲ್ಲೇಶ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಪ್ರ ಪೆÇ್ರಫೆಷನಲ್ ಫೆÇೀರಂ, ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯ, ವಿಪ್ರ ಮಹಿಳಾ ಸಂಘಗಳು, ಬ್ರಾಹ್ಮಣ ಯುವ ಸಂಘಟನೆಗಳ sಸಾವಿರಾರು ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ದ್ದರು. ಉತ್ತರಾದಿ ಮಠ ರಸ್ತೆಯಲ್ಲಿರುವ ಶಂಕರ ಸಮುದಾಯ ಭವನದ ಆವ ರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಮಲ್ಲೇಶ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಮಾತಿಗೆ ಮಿತಿ ಇರಲಿ-ಸಮಾಜಕ್ಕೆ ಇದು ಹಿತ, ದೇಶಪ್ರೇಮಿಗಳೇ ದುಷ್ಟರನ್ನ ದೂರವಿಡಿ, ಬ್ರಾಹ್ಮಣ್ಯ ಉಳಿಯಲಿ-ಬ್ರಾಹ್ಮಣ ವಿರೋಧಿ ಅಳಿಯಲಿ, ಬ್ರಾಹ್ಮಣ ನಿಂದನೆ ತೊಲಗಲಿ- ಶಾಂತಿ ಸಾಮರಸ್ಯ ಮೂಡಲಿ ಇತ್ಯಾದಿ ಘೋಷಣಾ ಫಲಕ ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿ ದರು. ಶಾಸಕ ಎಸ್.ಎ.ರಾಮದಾಸ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅದ್ಯಕ್ಷ ಸಚ್ಚಿದಾನಂದಮೂರ್ತಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಎಂಎಲ್‍ಸಿ ಗೋ.ಮಧುಸೂದನ್ ಇನ್ನಿತರರ ನೇತೃತ್ವ ವಹಿಸಿದ್ದರು. ಶಂಕರ ಸಮುದಾಯ ಭವನದ ಆವರಣದಿಂದ ಆರಂಭವಾದ ಮೆರವಣಿಗೆ ಗನ್‍ಹೌಸ್ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ಅಲ್ಲಿ ಬ್ರಾಹ್ಮಣ ಮುಖಂಡರು ಇನ್ನಿತರರು ಮಾತನಾಡಿದರು. ಬ್ರಾಹ್ಮಣ ರನ್ನು ನಿಂದಿಸಿರುವ ಪ.ಮಲ್ಲೇಶ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮ ದಾಸ್ ತಮ್ಮ ಸಮ್ಮುಖದಲ್ಲಿಯೇ ಬ್ರಾಹ್ಮಣರನ್ನು ನಿಂದಿಸಿದ ಪ.ಮಲ್ಲೇಶ್ ಅವರಿಗೆ ಬ್ರಾಹ್ಮಣರ ಬಗ್ಗೆ ಮಾತನಾಡಬೇಡಿ ಎಂದು ಸಿದ್ದರಾಮಯ್ಯ ವೇದಿಕೆಯಲ್ಲೇ ಬುದ್ಧಿ ಹೇಳಬಹುದಿತ್ತು. ಆದರೆ ಮಲ್ಲೇಶ್ ಬ್ರಾಹ್ಮಣರನ್ನು ನಿಂದಿಸು ತ್ತಿದ್ದರೆ ಅವರು ಮೌನವಾಗಿರುವುದು ನೋಡಿದರೆ, ಸಿದ್ದರಾಮಯ್ಯ ಅವರ ಭಾವನೆ ಏನು? ಉದ್ದೇಶವೇನು? ಬೇರೆ ಪ್ರಮುಖ ಸಮಾಜದ ಬಗ್ಗೆ ಮಾತನಾಡಿ ದರೆ ಆ ಸಮಾಜ ತಿರುಗಿ ಬೀಳುತ್ತದೆಂಬ ಭಯ ಇರುತ್ತದೆ. ಆದರೆ ಬ್ರಾಹ್ಮಣರು ಹಾಗೆ ಮಾಡುವುದಿಲ್ಲ ಎಂದು ಬಹಳ ಜನ ಬ್ರಾಹ್ಮಣರ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಅಂಥವರಿಗೆ ಈ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಪರಂಪರೆ, ಧರ್ಮ, ಭಾಷೆ, ಸಂಗೀತ, ಕ್ರೀಡೆ ಇವೆಲ್ಲವನ್ನು ಬೆಳೆಸುತ್ತಾ, ತಮ್ಮ ಪಾಡಿಗೆ ತಾವು ಜೀವನ ನಡೆಸಿ ಕೊಂಡು ಹೋಗುತ್ತಿರುವ ಬ್ರಾಹ್ಮಣರ ಬಗ್ಗೆ ಕೆಲವರು ಆಡಿದ ಅವಹೇಳನಕಾರಿ ಮಾತಿಗೆ ಬುದ್ಧಿ ಹೇಳಲು ಬ್ರಾಹ್ಮಣರು ಸಿಡಿದೆದ್ದಿದ್ದಾರೆ. ಯಾವುದೇ ಜಾತಿಗಳ ಜಾತಿ ಹೆಸರಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಇಂಥ ವ್ಯಕ್ತಿಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವಿಪ್ರ ಸÀಮುದಾಯ ಇಂದು ಬೀದಿಗಿಳಿದಿದೆ.

ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂಚನ್ ಮಾತನಾಡುತ್ತಾ, ದೇಶವನ್ನು ಪಾನ್ ಇಸ್ಲಾಮಿಕ್ ಮಾಡುವ ಷಡ್ಯಂತ್ರ ನಡೆದಿದೆ. ಅದಕ್ಕೆ ಪೂರಕವಾಗಿ ಬಿಟ್ಟಿರುವ ಏಜೆಂಟ್‍ಗಳ ಪೈಕಿ ಪ.ಮಲ್ಲೇಶ್ ಒಬ್ಬರು. ಪ.ಮಲ್ಲೇಶ್ ಯಾರ ದುಡ್ಡು ಪಡೆದು, ಏಜೆಂಟಾಗಿ ಯಾರ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಏನೂ ಮಾಡದ ಬ್ರಾಹ್ಮಣರ ಬಗ್ಗೆ ಮಾತ ನಾಡುತ್ತಾರಲ್ಲ. ಇನ್ನಾದರೂ ವೃದ್ಧಾಪ್ಯ ಕಾಲದಲ್ಲಿ ಇಂತ ಅಪರಾಧಗಳನ್ನು ಮಾಡದಿರಲಿ. ಅವರು ಬ್ರಾಹ್ಮಣರ ದೇಶದ, ಕ್ಷಮೆ ಕೇಳಬೇಕು. ಜಿಲ್ಲಾ, ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡುತ್ತಾ, ವಿನಾಕಾರಣ ಬ್ರಾಹ್ಮಣರ ವಿರುದ್ಧವಾದ ಅವ ಹೇಳನದ ಮಾತುಗಳನ್ನು ಬ್ರಾಹ್ಮಣರು ಇನ್ನು ಮುಂದೆ ಸಹಿಸುವುದಿಲ್ಲ. ಇಂತಹ ಶಕ್ತಿಗಳ ವಿರುದ್ಧ ನಮ್ಮ ಹೋರಾಟ. ವಿಷಾದ ಹೇಳಿದರೆ ಸಾಲದು, ಬಹಿರಂಗ ಕ್ಷಮೆ ಕೇಳುವವ ರೆಗೂ ಬ್ರಾಹ್ಮಣರ ಹೋರಾಟ ನಿಲ್ಲುವುದಿಲ್ಲ. ಉಪಮೇಯರ್ ಡಾ.ಜಿ.ರೂಪ, ವೇದ ವಿದ್ವಾಂಸ ಡಾ.ಭಾನುಪ್ರಕಾಶ್ ಶರ್ಮಾ, ವಿಜಯನಗರ ಯೋಗನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪೆÇ್ರ.ಭಾಷ್ಯಂ ಸ್ವಾಮೀಜಿ, ಅಮೃತೇಶ್ವರ ದೇವಾಲಯದ ಮೈ.ಕುಮಾರ್, ಬಿ.ಆರ್.ನಟರಾಜ ಜೋಯಿಸ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಕಾಪೆರ್Çರೇಟರ್ ಮಾ.ವಿ.ರಾಮಪ್ರಸಾದ್, ಜಿಎಸ್‍ಎಸ್ ಸಂಸ್ಥೆಯ ಡಿ.ಶ್ರೀಹರಿ, ಸಮುದಾಯದ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯ ಸ್ನೇಕ್‍ಶ್ಯಾಮ್, ಜಯಸಿಂಹ ಶ್ರೀಧರ್, ಎಸ್.ರಂಗನಾಥ್, ಎಂ.ವಿ.ನಾಗೇಂದ್ರಬಾಬು, ಶ್ರೀನಿವಾಸ ಪ್ರಸಾದ್, ಹೆಚ್.ಜಿ.ಗಿರಿಧರ್, ಟಿ.ಎಸ್.ಅರುಣ್ ಇನ್ನಿತರರು ಭಾಗವಹಿಸಿದ್ದರು.

Translate »