ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಭಾರೀ ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಭಾರೀ ಪ್ರತಿಭಟನೆ

March 30, 2022

ಚಾಮರಾಜನಗರ, ಮಾ.೨೯(ಎಸ್‌ಎಸ್)- ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಐಟಿಯು, ಎಐಯುಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆ ಗಳು ಹಾಗೂ ಒಕ್ಕೂಟಗಳು ಕರೆ ನೀಡಿರುವ ರಾಷ್ಟçವ್ಯಾಪಿ ಮುಷ್ಕರದ ೨ನೇ ದಿನವಾದ ಮಂಗಳವಾರ ನಗರದಲ್ಲಿ ವಿವಿಧ ಸಂಘ ಟನೆಗಳು ಭಾರೀ ಪ್ರತಿಭಟನೆ ನಡೆಸಿದವು.

ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರ ದಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ನೌಕರರು ಶ್ರೀಚಾಮರಾಜೇಶ್ವರ ದೇವ ಸ್ಥಾನದ ಆವರಣದಲ್ಲಿ ಸಮಾವೇಶಗೊಂಡು, ಅಲ್ಲಿಂದ ಮೆರವಣ ಗೆಯೊಂದಿಗೆ ಭುವನೇ ಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಕಡಿತ ಮಾಡಿರುವ ಶೇ.೪೦ ಅನುದಾನ ಕೊಡಬೇಕು. ೪೫ ಮತ್ತು ೪೬ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಯೋಜನೆ ಗಳಲ್ಲಿ ದುಡಿಯುವವರನ್ನು ನೌಕರರೆಂದು ಎಂದು ಪರಿಗಣ ಸಬೇಕು. ಶಾಸನಬದ್ಧ ಸವಲತ್ತು ನೀಡಬೇಕು. ಆಹಾರ ಭದ್ರತೆಗೆ ಕಡಿತವಾಗಿರುವ ೬೫ ಸಾವಿರ ಕೋಟಿ ಅನುದಾನ ವಾಪಸ್ಸು ಕೊಡಬೇಕು. ಈಗಿರುವ ಸಂಪೂರ್ಣ ಅನುದಾನ ಬಳಸಬೇಕು. ೨೪ ಸಾವಿರ ಕನಿಷ್ಠ ವೇತನದ ಜಾರಿ ಮಾಡಬೇಕು. ಐಸಿಡಿಎಸ್ ಯೋಜನೆಗಳನ್ನು ಖಾಯಂ ಗೊಳಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣ ಮಾಡಬಾರದು. ಎಲ್ಲಾ ಯೋಜನಾ ನೌಕರರಿಗೂ ನಿವೃತ್ತಿ ಸೌಲಭ್ಯ ಕೊಡಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಎನ್‌ಎಂಪಿಯನ್ನು ರದ್ದು ಮಾಡಬೇಕು. ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ೭,೫೦೦ ರೂ. ಆಹಾರ ಹಾಗೂ ಆದಾಯ ಬೆಂಬಲ ನೀಡಬೇಕು. ಗುತ್ತಿಗೆ, ಹೊರ ಗುತ್ತಿಗೆ ಸೇರಿದಂತೆ ಎಲ್ಲಾ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕೊರೊನಾ ನಡುವೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಹಾಗೂ ವಿಮಾ ಸೌಲಭ್ಯ ಒದಗಿಸಬೇಕು. ಬೆಲೆ ಏರಿಕೆಯನ್ನು ನಿಗ್ರಹಿ ಸಲು ದೃಢವಾದ ಪರಿಹಾರ ಕ್ರಮಗಳನ್ನು ಘೋಷಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಬಳಿಕ ಪ್ರತಿಭಟನಾನಿರತರು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಕೆ.ಸುಜಾತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣ , ಖಜಾಂಚಿ ಜೆ.ಭಾಗ್ಯಾ, ರೇವಮ್ಮ, ಶಾಯಿದಾ, ಯಶೋದಾ, ವಿಮಲಾ, ಪಾರ್ವತಮ್ಮ, ಪುಟ್ಟಬಸಮ್ಮ, ಪುಷ್ಪಾ, ಗೌರಿ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಧ್ಯಕ್ಷೆ ಕವಿತಾ, ತಾಲೂಕು ಅಧ್ಯಕ್ಷೆ ರಾಣ , ಗೀತಾ, ಲಕ್ಷಿö್ಮ, ಬಿಸಿಯೂಟದ ಸುಂದ್ರಮ್ಮ, ನಾಗಮ್ಮ, ಶಿವಮ್ಮ, ರತ್ನಮ್ಮ, ಗ್ರಾಪಂ ನೌಕರ ರಾದ ಕೊತ್ತಲವಾಡಿ ಮಹದೇವಸ್ವಾಮಿ, ಸಿದ್ದರಾಜು, ದೊರೆ, ಕಿಟ್ಟಿ ಇತರರಿದ್ದರು.

Translate »