ಗಾಳಿ-ಮಳೆಗೆ ಬಾಳೆ ನಾಶ
ಚಾಮರಾಜನಗರ

ಗಾಳಿ-ಮಳೆಗೆ ಬಾಳೆ ನಾಶ

March 30, 2022

ಚಾಮರಾಜನಗರ, ಮಾ.೨೯(ಎಸ್‌ಎಸ್)-ತಾಲೂಕಿನ ಲಿಂಗನಪುರ, ಅರಕಲವಾಡಿ, ವಡ್ಡಗಲಪುರ ಹಾಗೂ ವಡ್ಡಗಲಪುರ ಹುಂಡಿ ಗ್ರಾಮಗಳಲ್ಲಿ ಸೋಮವಾರ ಸಯಂಕಾಲ ಸುರಿದ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಾಳೆ, ತೆಂಗು ಫಸಲು, ಮನೆಗಳು ಹಾನಿಗೀಡಾ ಗಿದ್ದು, ವಿದ್ಯುತ್‌ಕಂಬಗಳು ಧರೆಗುರುಳಿವೆ. ಸಾಯಂಕಾಲ ೪ ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದ ಲಿಂಗನಪುರ ಗ್ರಾಮದ ಮಲ್ಲು, ಚೆನ್ನಪ್ಪ, ಪ್ರಸಾದ್ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನಾಶವಾಗಿದೆ. ಸ್ವಾಮಿ ಅವರ ಮನೆಯ ಮೇಲ್ಛಾವಣ ಹಾರಿ ಹೋಗಿದೆ. ಮಂಜು ಅವರಿಗೆ ಸೇರಿದ ತೆಂಗಿನ ಮರಗಳು ನೆಲಕ್ಕುರುಳಿವೆ. ಇದಲ್ಲದೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಗಾಳಿ-ಮಳೆಯಿಂದ ಆದ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ.

Translate »