ಕಟ್ಟಡ, ರಸ್ತೆ ನಿರ್ಮಾಣಕ್ಕೆ ರಾಜ್ಯದಲ್ಲಿ ಏಕರೂಪ ದರಪಟ್ಟಿ
News

ಕಟ್ಟಡ, ರಸ್ತೆ ನಿರ್ಮಾಣಕ್ಕೆ ರಾಜ್ಯದಲ್ಲಿ ಏಕರೂಪ ದರಪಟ್ಟಿ

March 29, 2022

ಬೆಂಗಳೂರು, ಮಾ. 28(ಕೆಎಂಶಿ)- ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ ರಾಜ್ಯಾದ್ಯಂತ ಏಕರೂಪ ದರಪಟ್ಟಿ ಜಾರಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಗೆ ಇಂದು ತಿಳಿಸಿದರು.

2022-23ನೇ ಸಾಲಿನ ಲೋಕೋ ಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತ ರಿಸಿದ ಅವರು, ವಿವಿಧ ಇಂಜಿನಿ ಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರಪಟ್ಟಿ ಇತ್ತು, ರಾಜ್ಯದಲ್ಲಿ 32 ದರಪಟ್ಟಿಗಳಿದ್ದವು, ಎಲ್ಲ ಎಂಜಿನಿ ಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ದರ ಪಟ್ಟಿಗೆ ಬದಲಾಗಿ ಏಕರೂಪ ದರಪಟ್ಟಿ ಜಾರಿಗೆ ತರಲಾ ಗಿದೆ, ಇದರಿಂದ ಹಣವೂ ಉಳಿತಾಯವಾಗಿದೆ ಎಂದರು.

ಟೋಲ್‍ಗಳಲ್ಲಿ ಸಮಸ್ಯೆ ಇರುವುದು ನಿಜ, ಸುಧಾರಣೆ ತರಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಟೋಲ್ ಏಜೆನ್ಸಿ ಗಳ ಜೊತೆ ಸಭೆ ನಡೆಸಿದರೂ ಪೂರ್ಣ ಪ್ರಯೋಜನ ವಾಗಿಲ್ಲ. ಕೇಂದ್ರ ಸರ್ಕಾರದ ಟೋಲ್ ಆಗಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು, ರಾಜ್ಯ ಸರ್ಕಾರದ ಟೋಲ್ ಇದ್ದರೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಲಿದೆ ಎಂದರು. ರೈಲ್ವೆ ಕೆಳಸೇತುವೆ-ಮೇಲ್ಸೇತುವೆ ಮಾಡಿಕೊಡುವ ಭರವಸೆ ನೀಡಿದ ಸಚಿವರು, ವಿಳಂಬ ವಾಗಿರುವ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳ ಲಾಗುವುದು. 2018-19ರಲ್ಲಿ ಆಗಿರುವ ಹೊರೆ ತಗ್ಗಿಸುವ ಉದ್ದೇಶದಿಂದ ಸಾಕಷ್ಟು ಅನುದಾನ ಕೊಡಲು ಸಾಧ್ಯವಾ ಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಅನುದಾನ ಒದಗಿಸ ಲಾಗುವುದು, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗು ವುದು. ಮಲೆನಾಡು ಭಾಗದಲ್ಲಿ ಸಣ್ಣ-ಸಣ್ಣ ಹಳ್ಳ, ತೊರೆ ಗಳಿಗೆ ಕಾಲುಸಂಕ ಅಥವಾ ಗ್ರಾಮಬಂಧು ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಒದಗಿಸಲಾಗಿದೆ, ರಾಜ್ಯದ ಪ್ರಮುಖ ನಗರಗಳಿಗೆ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುವುದು, ಉತ್ತಮ ಗುಣಮಟ್ಟದ ರಸ್ತೆ ಜಾಲ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯದಲ್ಲಿ 91,120 ಕಿ.ಮೀ ರಸ್ತೆ ಜಾಲವಿದ್ದು 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿದೆ, ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ 4 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಒದ ಗಿಸಲಾಗಿದೆ. ಟೆಂಡರ್ ಕರೆಯುವಾಗ ನಿಗದಿತ ದರಕ್ಕಿಂತ ಕಡಿಮೆ ಮೊತ್ತ ನಮೂದಿಸುವ ಗುತ್ತಿಗೆಗಾರರ ಕಾಮಗಾರಿ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು, ಕಡಿಮೆ ಮೊತ್ತ ನಮೂದಿಸುವುದನ್ನು ತಡೆಯಲು ಆಗದು. ಇನ್ನು ಮುಂದೆ ರಾಜ್ಯದಲ್ಲಿ ಅತಿಥಿಗೃಹವನ್ನು ಅವಶ್ಯಕತೆ ಇರುವ ಕಡೆ ಮಾತ್ರ ಮಾಡಲಾಗುವುದು, ಯಾರೋ ಒಬ್ಬರಿಗೆ ಅನುಕೂಲವಾಗುವಂತೆ ಮಾಡುವುದಿಲ್ಲ, ಚಿತ್ರದುರ್ಗದ ಅತಿಥಿ ಗೃಹವನ್ನು ಮಾದರಿಯಾಗಿ ಪರಿಗಣಿಸಲಾಗುವುದು. ಅನುದಾನ ಹಂಚಿಕೆ ತಾರತಮ್ಯಕ್ಕೆ ಉತ್ತರಿಸಿದ ಸಚಿವರು, 2014ರಿಂದ 2018ರವರೆಗೆ ಕಾಂಗ್ರೆಸ್ ಶಾಸಕರಿಗೆ ಸರಾಸರಿ 156 ಕೋಟಿ, ಜೆಡಿಎಸ್ ಶಾಸಕರಿಗೆ ಸರಾಸರಿ 148 ಕೋಟಿ, ಬಿಜೆಪಿ ಶಾಸಕರಿಗೆ 122 ಕೋಟಿ ರೂ. ಅನುದಾನ ಲೋಕೋಪಯೋಗಿ ಇಲಾಖೆಯಲ್ಲಿ ದೊರೆತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಶಾಸಕರಿಗೆ 19 ಕೋಟಿ ರೂ, ಜೆಡಿಎಸ್ ಶಾಸಕರಿಗೆ ಲೋಕೋಪ ಯೋಗಿ ಇಲಾಖೆಯ ಅಂಕಿ-ಅಂಶಗಳ ಸಹಿತ ಉತ್ತರ ನೀಡಿದ ಸಚಿವರು, ಮುಂದು ವರೆದ ಕಾಮಗಾರಿಗಳಲ್ಲಿ ವಿಳಂಬ ತಪ್ಪಿಸಲು ವೇಗ ಹೆಚ್ಚಿಸುವ ಭರವಸೆ ನೀಡಿದರು. ನಂತರ 2022-23ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಂದಾಯ ವಾಗುವ ವೆಚ್ಚವನ್ನು ಭರಿಸಲು ಅನುಮತಿ ನೀಡಬೇಕೆಂದು ಕೋರಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಲೋಕೋಪಯೋಗಿ ಇಲಾಖೆಯ ಅನುದಾನ ಬೇಡಿಕೆಯನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಒಪ್ಪಿಗೆ ದೊರೆಯಿತು. ಈ ಸಂದರ್ಭದಲ್ಲಿ ಶಾಸಕರಾದ ವೆಂಕಟರಾಮಯ್ಯ, ಶಿವಣ್ಣ ಅವರು ಸಚಿವರ ಉತ್ತರದಿಂದ ತೃಪ್ತರಾಗದೆ ಸಭಾಧ್ಯಕ್ಷರ ಪೀಠದ ಮುಂದಿನ ಜಾಗಕ್ಕೆ ಧಾವಿಸಿ ಧರಣಿಗೆ ಮುಂದಾದರು. ಶಾಸಕರು ತಮ್ಮ ಸ್ವಸ್ಥಾನಗಳಿಗೆ ಮರಳುವಂತೆ ಮನವೊಲಿಸುವಲ್ಲಿ ಸಭಾಧ್ಯಕ್ಷರು ಯಶಸ್ವಿಯಾದರು.

Translate »