ಮೈಸೂರು, ಮೇ 28(ಎಂಟಿವೈ)- ಲಾಕ್ ಡೌನ್ ಸಂತ್ರಸ್ತರು ಹಾಗೂ ವಲಸೆ ಕಾರ್ಮಿ ಕರ ಹಿತಕಾಯುವುದರೊಂದಿಗೆ ಅಗತ್ಯ ನೆರವು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲ ವಾಗಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಮುಖಂಡರು ಕಳೆದ 60 ದಿನಗಳಿಂದ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಕೆಪಿ ಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಯಾಗಿ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಿಸು ವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿವೆ. ಪ್ರಧಾನಿ ಮೋದಿ ಮಾತಿನ ಮಲ್ಲರಾಗಿದ್ದು, ಸುಳ್ಳು ಹೇಳುವುದ ರಲ್ಲಿ ನಿಸ್ಸೀಮರಾಗಿದ್ದಾರೆ. ಕೊರೊನಾ ಸಂತ್ರ ಸ್ತರಿಗಾಗಿ 20 ಲಕ್ಷ ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಹೇಳಿ ಬೋಗಸ್ ಪ್ಯಾಕೇಜ್ ನೀಡಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸÀರ್ಕಾರ 50 ಸಾವಿರ ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದರೂ ಹಣ ಸದ್ಬಳಕೆ ಆಗುತ್ತಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಆರೋಗ್ಯ ಸಚಿವರು ಒಂದು ಹೇಳಿದರೆ, ವೈದ್ಯಕೀಯ ಶಿಕ್ಷಣ ಸಚಿವರ ಮತ್ತೊಂದು ಹೇಳಿಕೆ ನೀಡು ತ್ತಾರೆ. ಹಾಗಾಗಿಯೇ ಕೊರೊನಾ ಮಾಹಿತಿ ನೀಡಲು ಸಚಿವ ಸುರೇಶ್‍ಕುಮಾರ್ ಅವ ರನ್ನು ನಿಯೋಜಿಸಿದ್ದಾರೆ. ಲಾಕ್‍ಡೌನ್ ಸಂತ್ರ ಸ್ತರಿಗೆ ನೆರವು ನೀಡಲು ಮೀಸಲಿಟ್ಟ ಹಣ ದುರ್ಬಳಕೆಯಾಗುತ್ತಿದ್ದು, ಈ ವಿಚಾರವಾಗಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು.
ಪಕ್ಷದ ನೆರವು: ಲಾಕ್‍ಡೌನ್ ಸಂತ್ರಸ್ತರಿಗೆ ಕಾಂಗ್ರೆಸ್ ಮುಖಂಡರು, ಮಾಜಿ ಶಾಸ ಕರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು 2 ತಿಂಗಳಿನಿಂದ ಒಟ್ಟು 1.6 ಕೋಟಿ ಆಹಾರ ಪೆÇಟ್ಟಣ, 35 ಲಕ್ಷ ಮಾಸ್ಕ್, 7 ಲಕ್ಷ ಸ್ಯಾನಿ ಟೈಸರ್, 75 ಲಕ್ಷ ಮಂದಿಗೆ ದಿನಸಿ ಕಿಟ್ ನೀಡುವ ಮೂಲಕ ನೆರವಾಗಿದ್ದಾರೆ. ರಾಜ್ಯ, ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಸಂತ್ರಸ್ತರಿಗೆ ಸಹಾಯ ಮಾಡಲಾಗಿದೆ ಎಂದು ವಿವರಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಜೂ.7ರಂದು ಬೆಂಗಳೂರಲ್ಲಿ ಪದಗ್ರಹಣ ಮಾಡಲಿದ್ದಾರೆ. ಸದ್ಯ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ಆಗುತ್ತಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನ ಮಾತನಾಡಿ, 7 ವರ್ಷಗಳಿಂದ ಪ್ರಧಾನಿ ಯಾಗಿರುವ ಮೋದಿ ವಿರುದ್ಧ ಅಸಮಾ ಧಾನ ಹೆಚ್ಚಾಗುತ್ತಿದೆ. ಕಟುಶಬ್ದಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಈ ಸಂದರ್ಭ ಬಳಸಿಕೊಂಡು ಪಕ್ಷ ಸಂಘಟನೆ ಮಾಡು ವಲ್ಲಿ ಕಾಂಗ್ರೆಸ್ ಎಡವಿದೆ ಎಂದರು.
ಕೇಂದ್ರದ ಭರವಸೆಗಳೆಲ್ಲಾ ಹುಸಿಯಾಗಿದ್ದು, ಜನ ಭ್ರಮನಿರಸನಗೊಂಡಿದ್ದಾರೆ. ಸಮೀಕ್ಷೆ ಗಳಲ್ಲಿ ಮೋದಿಗಿಂತ ವಿರೋಧ ಪಕ್ಷಗಳಿಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿಲ್ಲ. ಆದ್ದರಿಂದ ಪಕ್ಷದ ಸೋಷಿ ಯಲ್ ಮೀಡಿಯಾ ಘಟಕದಿಂದ ಜನ ರಿಗೆ ತಿಳಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಪದ ಗ್ರಹಣ ಕಾರ್ಯಕ್ರಮವನ್ನು ಜೂಮ್ ಆ್ಯಪ್ ಮೂಲಕ ಮೈಸೂರಿನ 4 ವಿಧಾನಸಭಾ ಕ್ಷೇತ್ರ ಗಳ 65 ವಾರ್ಡ್‍ಗಳಲ್ಲೂ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ. ನಾಲ್ಕೂ ಕ್ಷೇತ್ರಗಳ ಮುಖಂಡರ ಸಭೆ ಕರೆದು ಚರ್ಚಿಸಲಾಗಿದೆ. ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕಾರ್ಯಕ್ರಮ ವೀಕ್ಷಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದರು. ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಉಪಮೇಯರ್ ಶ್ರೀಧರ್, ಮಾಜಿ ಮೇಯರ್‍ಗಳಾದ ಪುಷ್ಪ ಲತಾ ಟಿ.ಬಿ.ಚಿಕ್ಕಣ್ಣ, ರಾಜೇಶ್ವರಿ ಪುಟ್ಟಸ್ವಾಮಿ, ಪುಷ್ಪಲತಾ ಜಗನ್ನಾಥ್, ಬಿ.ಕೆ.ಪ್ರಕಾಶ್, ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಕೆ.ಹರೀಶ್‍ಗೌಡ, ಪಿ.ರಾಜು, ವೀಣಾ, ಭಾಸ್ಕರ್, ಶ್ರೀನಾಥ್ ಬಾಬು, ಡೈರಿ ವೆಂಕಟೇಶ್, ಈಶ್ವರ್ ಚಕ್ಕಡಿ, ಅಶೋಕ್, ಇನ್ನಿತರರು ಸಭೆಯಲ್ಲಿದ್ದರು.
ಬಿಜೆಪಿಗೆ ತಂತ್ರಗಾರಿಕೆಯೇ ಪ್ರಮುಖ ಬಂಡವಾಳ: ವಾಸು ಟೀಕೆ
ಮೈಸೂರು: ಕಳೆದ ಚುನಾವಣೆಯಲ್ಲಿ ಪುಲ್ವಾಮ ದಾಳಿ ಯನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಂಡಿ ರುವ ಬಿಜೆಪಿ ಇದೀಗ ತನ್ನೆಲ್ಲಾ ವೈಫಲ್ಯ ಮರೆಮಾಚಲು ಚೀನಾ ಮೇಲೆ ದಾಳಿ ಮಾಡುವುದಾಗಿ ಹೇಳುವ ಮೂಲಕ ಮತ್ತಷ್ಟು ರಾಜಕೀಯವಾಗಿ ಗಟ್ಟಿಗೊಳ್ಳುವ ಸಂಚು ನಡೆಸುತ್ತಿದೆ ಎಂದು ಮಾಜಿ ಶಾಸಕ ವಾಸು ಆರೋಪಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಬರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೆ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಿಯೋಜನೆಗೊಂಡಿರುವುದರಿಂದ ಕಾರ್ಯ ಕರ್ತರಲ್ಲಿ ಹುಮ್ಮಸ್ಸು ಹೆಚ್ಚಿದೆ. ಪಕ್ಷ ಹಾಗೂ ಪಕ್ಷದ ಮುಖ್ಯ ಮಂತ್ರಿಗಳಿಗೆ ತೊಂದರೆಯಾದಾಗೆಲ್ಲಾ ಸಮರ್ಥವಾಗಿ ತಡೆಯಲು ಡಿಕೆಶಿ ಮುಂದೆ ಬಂದಿರುವುದು ಎಲ್ಲರಿಗೂ ತಿಳಿದಿದೆ. ಅಂತಹ ನಾಯಕನಿಗೆ ತೊಂದರೆ ನೀಡಿದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಅವರಿಗೆ ಶಕ್ತಿ ತುಂಬಬೇಕು. ಪ್ರಸ್ತುತ ಅಧಿಕಾರ ದಲ್ಲಿರುವ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ಸಲಹೆ ನೀಡಿದರು.
ಬಿಜೆಪಿಗೆ ತಂತ್ರಗಾರಿಕೆಯೇ ಪ್ರಮುಖ ಬಂಡವಾಳ. ಚುನಾ ವಣೆ ಸಮೀಪಿಸುತ್ತಿದ್ದಂತೇ ಭಾವನಾತ್ಮಕ ವಿಚಾರ ಇಟ್ಟುಕೊಂಡು ಜನರ ಸಹಾನುಭೂತಿ ಪಡೆದು ಲಾಭ ಮಾಡಿಕೊಳ್ಳುತ್ತದೆ. ಕಳೆದ ಚುನಾವಣೆ ವೇಳೆ ಪುಲ್ವಾಮ ದಾಳಿ ಹಾಗೂ ಅದರಲ್ಲಿ ಮಡಿದ ಯೋಧರನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಂಡಿತು. ದುರಾಡಳಿತ ಹಿನ್ನೆಲೆಯಲ್ಲಿ ಕೊರೊನಾ ಕಾಣಿಸಿಕೊಂಡ ಮೊದಲೇ ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿತ್ತು. ಇದೀಗ ಕೊರೊನಾದಿಂದ ಸಮಸ್ಯೆ ಆಗಿದೆ ಎಂದು ಹೇಳಿಕೊಳ್ಳಲು ಅವರಿಗೆ ಅವಕಾಶ ಸಿಕ್ಕಂತಾಗಿದೆ. ಅಲ್ಲದೆ ಚೀನಾ ಮೇಲೆ ದಾಳಿ ಮಾಡುವುದಾಗಿ ಹೇಳಿ ಜನರನ್ನು ಭಾವನಾತ್ಮಕವಾಗಿ ವಂಚಿಸುವ ಹುನ್ನಾರ ನಡೆಸುತ್ತಾರೆ. ಇದರ ವಿರುದ್ಧ ಜನರು ಜಾಗೃತರಾಗಬೇಕು ಎಂದರು.