ಜಾಗತಿಕ ಮಟ್ಟದಲ್ಲಿ ಮೈಲ್ಯಾಕ್ ಇನ್ನಷ್ಟು ಖ್ಯಾತಿ ಪಡೆಯಲಿ
ಮೈಸೂರು

ಜಾಗತಿಕ ಮಟ್ಟದಲ್ಲಿ ಮೈಲ್ಯಾಕ್ ಇನ್ನಷ್ಟು ಖ್ಯಾತಿ ಪಡೆಯಲಿ

December 31, 2020

ಮೈಸೂರು, ಡಿ.30(ಎಂಟಿವೈ)- ದೇಶ ಕಂಡ ರಾಜಮನೆತನಗಳಲ್ಲಿ ಸದಾ ಕಾಲ ಸ್ಮರಿಸಲಾಗುವ ಯದುವಂಶ ನೀಡಿದ ಹಲವು ಕೊಡುಗೆಗಳಲ್ಲಿ ಒಂದಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್(ಮೈಲ್ಯಾಕ್) ಸಂಸ್ಥೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಸರು ಗಳಿಸಲಿ ಎಂದು ಹಾರೈಸಿದ ಸಂಸದ ಪ್ರತಾಪ ಸಿಂಹ, ಅದಕ್ಕಾಗಿ ಸೂಕ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದಾರೆ.

`ಮೈಲ್ಯಾಕ್’ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಕಟಿಸಿ ರುವ 2021ನೇ ವರ್ಷದ ಕ್ಯಾಲೆಂಡರ್ ಬಿಡು ಗಡೆ ಮಾಡಿ ಅವರು ಮಾತನಾಡಿದರು.

ದೇಶ ಕಂಡ 525 ರಾಜಮನೆತನಗಳಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಯದು ವಂಶ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವಿಜಯ ನಗರದ ರಾಜರ ಆಳ್ವಿಕೆ ಕಾಲದಲ್ಲಿ ವಜ್ರ, ವೈಡೂರ್ಯ, ಚಿನ್ನವನ್ನು ಸೇರಲ್ಲಿ ಅಳೆದು ಕೊಡುತ್ತಿದ್ದರು ಎಂಬುದನ್ನು ಕೇಳಿ ತಿಳಿದಿ ದ್ದೇವೆ. ವಿಜಯನಗರ ಹೊರತುಪಡಿಸಿದರೆ ಮೈಸೂರು ಸಂಸ್ಥಾನವನ್ನಾಳಿದ ಯದು ವಂಶವನ್ನು ಸದಾ ನೆನೆಯಲಾಗುತ್ತದೆ. ಅಂದಿನ ಮಹಾರಾಜರು ದೂರದೃಷ್ಟಿಯೊಂದಿಗೆ ಸ್ಥಾಪಿಸಿದ ಶಿಕ್ಷಣ ಸಂಸ್ಥೆ, ಕಾರ್ಖಾನೆಗಳು ಇಂದಿಗೂ ಯಶಸ್ವಿಯಾಗಿ ಮುನ್ನಡೆಯು ತ್ತಿವೆ. ಯದುವಂಶಕ್ಕಿದ್ದ ಜನಪರ ಕಾಳಜಿ ಯನ್ನು ತೋರುತ್ತದೆ ಎಂದರು.

ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣವನ್ನು ಮೈಸೂರು ಅರಸರು ಖಾಸಗಿ ಉಪಯೋಗಕ್ಕಾಗಿ ಸ್ಥಾಪಿಸಿದ್ದರು. 2ನೇ ಮಹಾಯುದ್ಧದ ನಂತರ ಜಯಚಾಮ ರಾಜೇಂದ್ರ ಒಡೆಯರ್ ಅವರು 1 ಲಘು ವಿಮಾನ ಖರೀದಿಸಿದ್ದರು. ಸ್ವಾತಂತ್ರ್ಯ ಲಭಿ ಸಿದ ನಂತರ ವಿವಿಧ ರಾಜಮನೆತನಗಳನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಕ್ಕೂಟ ರಾಷ್ಟ್ರದಲ್ಲಿ ವಿಲೀನಗೊಳಿಸಲು ಮೊಟ್ಟ ಮೊದಲು ಮೈಸೂರು ಸಂಸ್ಥಾನವೇ ಒಪ್ಪಿಗೆ ನೀಡಿ ಒಪ್ಪಂದಕ್ಕೆ ಸಹಿ ಹಾಕಿತು. ದೇಶದ ಇತರೆಡೆಯ ಸಾಮ್ರಾಜ್ಯಗಳನ್ನು ಒಕ್ಕೂಟ ದಲ್ಲಿ ವಿಲೀನಗೊಳಿಸಲು ಸಹಕಾರಿಯಾಗಲಿ ಎಂಬ ಕಾರಣಕ್ಕೆ ದೇಶದಾದ್ಯಂತ ಪ್ರಯಾಣ ಬೆಳೆಸಲು ತಮ್ಮದೇ ವಿಮಾನವನ್ನು ಕೊಡುಗೆ ನೀಡಿದ್ದರು ಎಂದು ನೆನಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಗಳೇ ಕಳೆದಿದ್ದರೂ ಯದುವಂಶವನ್ನು ಧನ್ಯತೆಯಿಂದ ನೆನೆಯಲಾಗುತ್ತದೆ. ಇದು ಹೆಮ್ಮೆಯ ಸಂಗತಿ. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣೀಯ ಆಡಳಿತದಲ್ಲಿ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ತಮ್ಮ ಸಂಸ್ಥಾನದಲ್ಲಿನ ಪ್ರಜೆಗಳಿಗೆ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಭದ್ರಾವತಿಯ ಸ್ಟೀಲ್ ಕಾರ್ಖಾನೆ, ಸ್ಯಾಂಡಲ್‍ವುಡ್, ಲ್ಯಾಂಪ್ ಕಾರ್ಖಾನೆ ಮೊದಲಾದವನ್ನು ಸ್ಥಾಪಿಸಿದ್ದಾರೆ. 1916 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ ದರು. 1937ರಲ್ಲಿ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಸ್ಥಾಪಿಸಿದರು. ಪ್ರಸ್ತುತ ಕೆಲವು ಕಾರ್ಖಾನೆಗಳು ಬಂದ್ ಆಗುತ್ತಿದ್ದರೂ `ಮೈಲ್ಯಾಕ್’ ಮಾತ್ರ ಯಶ ಸ್ಸಿನ ಹಾದಿಯಲ್ಲೇ ಸಾಗುತ್ತಿದೆ. ಅಳಿಸ ಲಾಗದ ಶಾಯಿ ತಯಾರಿಸಿ ಉತ್ತಮ ಸಾಧನೆ ಮಾಡಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಮಾತ ನಾಡಿ, ಮಹಾರಾಜರು ದೂರದೃಷ್ಟಿ ಯಿಂದ ಸ್ಥಾಪಿಸಿದ ಮೈಲ್ಯಾಕ್ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ. ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳ ಹಿತರಕ್ಷಣೆಗಾಗಿ, ಸಂಸ್ಥೆಗಾಗಿ ಶ್ರಮಿಸುತ್ತೇನೆ. ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಬಣ್ಣ ಪೂರೈಸಲು ಮೈಲ್ಯಾಕ್‍ಗೆ ಅವಕಾಶ ನೀಡಲು ಸಂಸದ ಪ್ರತಾಪ ಸಿಂಹ ಅವರ ಸಹಕಾರ ಅಗತ್ಯವಿದೆ. ರಾಜ್ಯ ಸರ್ಕಾರದ ಒಡೆತನದ ಸಂಸ್ಥೆಗಳಿಗೂ ಬಣ್ಣ ಒದಗಿಸಲು ಶಾಸಕ ಎಲ್.ನಾಗೇಂದ್ರ ಅವರು ಮೈಲ್ಯಾಕ್‍ಗೆ ಸಹ ಕರಿಸಿದರೆ ಸಂಸ್ಥೆಯ ಉದ್ಯೋಗಿಗಳಿಗೂ ನೆರವಾಗಲಿದೆ ಎಂದರು. ಮೈಲ್ಯಾಕ್ ಎಂಡಿ ಚಂದ್ರಶೇಖರ್ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಹರಕುಮಾರ್ ಇದ್ದರು.

 

 

Translate »