ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 14 ದಿನಗಳ ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ 14 ದಿನಗಳ ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ

December 31, 2020

ಮೈಸೂರು, ಡಿ.30(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 14 ದಿನಗಳ `ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ್’ ಮತ್ತು ‘ವಿಶೇಷ ಕೈಮಗ್ಗ ಮೇಳ; ಸಂಸ್ಕøತಿ-2020’ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಬುಧವಾರ ಆರಂಭವಾಯಿತು. ಜಿಪಂ ಸಿಇಓ ಪರಮೇಶ್ ಅವರು ಮೇಳಕ್ಕೆ ಚಾಲನೆ ನೀಡಿದರು.

ಜೆಎಸ್‍ಎಸ್ ಅರ್ಬನ್ ಹಾತ್, ನವದೆಹಲಿಯ ಜವಳಿ ಮಂತ್ರಾಲಯ, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ಹಾಗೂ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್(ಇನ್ಡೆಕ್ಸ್-ಸಿ) ಜಂಟಿ ಸಹಭಾಗಿತ್ವದ ಈ ಮಾರಾಟ ಮೇಳ 2021ರ ಜ.12ರವರೆಗೂ ನಡೆಯಲಿದೆ. ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜ ರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ರೇಷ್ಮೆ, ಹತ್ತಿಯಿಂದ ತಯಾರಿಸಿದ ಕೈಮಗ್ಗ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟ ಮಾಡಲಿದ್ದಾರೆ.

ಗುಜರಾತ್‍ನ 45ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಮೇಳ ದಲ್ಲಿ ತಮ್ಮ ನೈಪುಣ್ಯದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಗುಜರಾತ್‍ನ ಪ್ರಸಿದ್ಧ ಪಟೋಲ ಸೀರೆಗಳು, ಕಸೂತಿ ಮಾಡಿದ ಬೆಡ್‍ಶೀಟ್‍ಗಳು, ಟವೆಲ್‍ಗಳು, ಕುಶನ್ ಕವರ್ ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ತಮಿಳುನಾಡಿನ ಕಾಂಚಿ ಪುರಂ ಸೀರೆ, ಬಿಹಾರದ ಬಲಚುರಿ ಸೀರೆ, ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಹೊದಿಕೆಗಳು, ನೆಲಹಾಸು ಮತ್ತಿತರೆ ಕೈಮಗ್ಗ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ. 14 ದಿನಗಳ ಮೇಳವು ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿಸಬಹುದಾಗಿದೆ.

ಬುಧವಾರ ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯ ದರ್ಶಿ ಬೆಟಸೂರ್ ಮಠ, ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಬಸಪ್ಪ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇ ಶಕ ಸಿ.ರಂಗನಾಥಯ್ಯ, ಜಂಟಿ ನಿರ್ದೇಶಕ ಹೆಚ್.ಆರ್.ಮಹ ದೇವಸ್ವಾಮಿ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ ತಳವಾರ್, ಗುಜರಾತ್‍ನ ಇಂಡೆಕ್ಸ್-ಸಿ ವ್ಯವಸ್ಥಾಪಕ ಸ್ನೇಹಲ್ ಮಕ್ವಾನ್, ಸಂಯೋಜಕ ರಾಕೇಶ್ ರೈ ಮತ್ತಿತರರಿದ್ದರು.

Translate »