ಕನ್ನಡ ನಾಡು-ನುಡಿಯ ಪ್ರಬಲ ದನಿ ಡಾ.ವಿಷ್ಣುವರ್ಧನ್
ಮೈಸೂರು

ಕನ್ನಡ ನಾಡು-ನುಡಿಯ ಪ್ರಬಲ ದನಿ ಡಾ.ವಿಷ್ಣುವರ್ಧನ್

December 31, 2020

ಮೈಸೂರು, ಡಿ.30(ಪಿಎಂ)- ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಡಾ. ವಿಷ್ಣುವರ್ಧನ್ ಚಿತ್ರರಂಗಕ್ಕೆ ಹೊಸ ಆಯಾಮ ಕಲ್ಪಿಸಿ ಕೊಟ್ಟರು. ಜೊತೆಗೆ ನಾಡು-ನುಡಿ ವಿಚಾರದಲ್ಲಿ ಪ್ರಬಲ ದನಿಯಾಗಿದ್ದರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಸ್ಮರಿಸಿದರು.

ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನ ಡಾ.ವಿಷ್ಣುವರ್ಧನ್ ಉದ್ಯಾನವನ ದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ, ವಿಷ್ಣು ಸೇನಾ ಸಮಿತಿ ಹಾಗೂ ಮೈಸೂರು ಗಾಂಧಿವೃತ್ತ ವಿಷ್ಣು ಸಂಘ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಚಿತ್ರ ಪಟಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮೈಸೂರು ಮೂಲದ ಸಾಹಸಸಿಂಹ ವಿಷ್ಣುವರ್ಧನ್ ಜನಪ್ರಿಯತೆ ಇಡೀ ದೇಶದಲ್ಲಿದೆ. ಅವರ ಬಹುತೇಕ ಚಿತ್ರ ಗಳು ಕೌಟುಂಬಿಕ ಪ್ರಧಾನವಾಗಿ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿವೆ. ಮೈಸೂರಿನಲ್ಲಿ `ಚಿತ್ರನಗರಿ’ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ್. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಗುರು-ಹಿರಿಯರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಸರಳ ಜೀವನ ಪ್ರತಿಯೊಬ್ಬರಿಗೂ ಮಾದರಿ. ಎಲ್ಲಾ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನವಿಶ್ವಾಸ ಗಳಿಸಿದ್ದರು ಎಂದು ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರು ತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಆಳವಾಗಿ ಚಿಂತಿಸಬೇಕಿದೆ. ಬೆರಳೆಣಿಕೆಯಷ್ಟು ಒಳ್ಳೆಯ ಸಿನಿಮಾಗಳು ಬಂದರೂ ಪ್ರೇಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ತಂದು ಕೊಡುವುದಿಲ್ಲ. ಅಂತಹ ಚಿತ್ರಗಳು ಕೇವಲ ಪ್ರಶಸ್ತಿಯನ್ನಷ್ಟೇ ಪಡೆದು ಸುಮ್ಮನಾದರೆ ಸಾಕೇ? ಅಂತಹ ಸದಭಿರುಚಿಯ ಚಿತ್ರಗಳ ನಿರ್ಮಿಸುವ ಚಿತ್ರತಂಡಕ್ಕೆ ನೈತಿಕ ಸ್ಥೈರ್ಯ ತುಂಬ ಬೇಕಿರುವ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದರು.

ಕ್ರೌರ್ಯ, ಹಿಂಸೆ, ಲೈಂಗಿಕ ಅಂಶ ಇಂತಹ ವಸ್ತು ವಿಷ ಯದ ಸಿನಿಮಾಗಳೇ ಹೆಚ್ಚಾಗುತ್ತಿವೆ. ಈ ಬಗ್ಗೆ ಚಿತ್ರತಂಡ ಮಾತ್ರವಲ್ಲ ಪ್ರೇಕ್ಷಕರಿಂದಲೂ ಆತ್ಮಾವಲೋಕನ ಆಗಬೇಕಿದೆ. ಸಮಾಜದಲ್ಲಿನ ಒಳ್ಳೆಯ ಅಂಶಗಳನ್ನು ತೆರೆ ಮೇಲೆ ತರುವ ಜವಾಬ್ದಾರಿ ಚಿತ್ರರಂಗಕ್ಕೆ ಬೇಕಿದ್ದು, ಅಂತಹ ಸದಭಿರುಚಿ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವುದು ಪ್ರೇಕ್ಷಕನ ಆದ್ಯತೆ ಆಗಬೇಕಿದೆ ಎಂದರು. ಇದೇ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್. ರಾಜೇಶ್, ಲಲಿತಾದ್ರಿಪುರ ವಿಷ್ಣು ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷ ಮಂಜು, ಸದಸ್ಯ ಮಹದೇವ್, ಮೈಸೂರು ಗಾಂಧಿ ವೃತ್ತ ವಿಷ್ಣು ಸಂಘದ ಅಧ್ಯಕ್ಷ ಮುಬಾ ರಕ್, ಉಪಾಧ್ಯಕ್ಷ ವಾಲೆ ಕುಮಾರ್, ಮುಖಂಡರಾದ ಅಕ್ರಂ, ಅಸ್ಗರ್, ಸುರೇಶ್‍ಬಾಬು, ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು, ನವೀನ್ ಕೆಂಪಿ, ರಂಗನಾಥ್, ಪ್ರಶಾಂತ್ ಭಾರದ್ವಾಜ್ ಮತ್ತಿತರರು ಹಾಜರಿದ್ದರು.

 

Translate »