ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮೈಸೂರಲ್ಲಿ ಜನರ ನೂಕು-ನುಗ್ಗಲು
ಮೈಸೂರು

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮೈಸೂರಲ್ಲಿ ಜನರ ನೂಕು-ನುಗ್ಗಲು

December 31, 2020

ಮೈಸೂರು,ಡಿ.30(ಆರ್‍ಕೆ)- ಕೋವಿಡ್ -19 ಸೋಂಕಿನ ಭೀತಿಯಿಂದಾಗಿ ಎಚ್ಚೆತ್ತ ನಾಗರಿಕರು ಉಚಿತವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಮುಗಿಬೀಳು ತ್ತಿದ್ದಾರೆ. ಜ.1ರಿಂದ 6ರಿಂದ 9ನೇ ತರಗತಿ ವರೆಗೆ ವಿದ್ಯಾಗಮ, 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗು ತ್ತಿರುವುದರಿಂದ ಹಾಗೂ ರೂಪಾಂತರಗೊಂಡ ಕೊರೊನಾ ಸೋಂಕು ಅತೀ ವೇಗವಾಗಿ ಹರಡಲಿದೆ ಎಂಬ ಆತಂಕದಿಂದಾಗಿ ವಿದ್ಯಾರ್ಥಿ ಗಳು, ಪೋಷಕರು ಹಾಗೂ ಶಿಕ್ಷಕರು, ಜಿಲ್ಲಾ ಡಳಿತ ಹಾಗೂ ಸಂಘ-ಸಂಸ್ಥೆಗಳು ನಡೆಸು ತ್ತಿರುವ ಶಿಬಿರಗಳಲ್ಲಿ ಉಚಿತವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.

ಜಿಲ್ಲಾ ಲಯನ್ಸ್ ಸೇವೆಗಳ ಪ್ರತಿಷ್ಠಾನ, ಜಿಲ್ಲೆ-317ಎ ಸಂಸ್ಥೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಜೆಕೆ ಮೈದಾನ ದಲ್ಲಿ ಏರ್ಪಡಿಸಿರುವ ಉಚಿತ ಶಿಬಿರಕ್ಕೆ ಎರಡನೇ ದಿನವಾದ ಇಂದೂ ವಿದ್ಯಾರ್ಥಿ ಗಳು, ಶಿಕ್ಷಕರು, ಪೋಷಕರು ಹೆಚ್ಚಿನ ಸಂಖ್ಯೆ ಯಲ್ಲಿ ಧಾವಿಸಿದ್ದರಿಂದ ಸ್ಥಳದಲ್ಲಿ ನೂಕು -ನುಗ್ಗಲು ಉಂಟಾಯಿತು. ಮಂಗಳವಾರ ಟೋಕನ್ ಪಡೆದಿದ್ದವರಿಗೆ ಆದ್ಯತೆ ಮೇಲೆ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತಾ ದರೂ ಅಧಿಕ ಮಂದಿ ಆಗಮಿಸಿದ್ದ ಕಾರಣ ನಾಳೆ(ಡಿ.31)ಗೂ ಶಿಬಿರವನ್ನು ವಿಸ್ತರಿಸಲಾ ಗಿದ್ದು, ಆದರೆ ಗುರುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ಡಿಹೆಚ್‍ಓ ಡಾ.ಟಿ.ಅಮರನಾಥ್ ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ಕೆಆರ್‍ಎಸ್ ರಸ್ತೆ ಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ, ಕೆಆರ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಗಳು, ಚಿಕ್ಕಗಡಿಯಾರ ಬಳಿ ಪುರ ಭವನ ಆವರಣದಲ್ಲೂ ಉಚಿತವಾಗಿ ಆರ್‍ಟಿಪಿ ಸಿಆರ್ ಟೆಸ್ಟ್ ಮಾಡುತ್ತಿದ್ದು, ಜನರು ಈಗ ತಾವೇ ಮುಂದೆ ಬಂದು ಪರೀಕ್ಷೆ ಮಾಡಿಸಿ ಕೊಳ್ಳುತ್ತಿದ್ದಾರೆ. ಆ ಪೈಕಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿದ್ದು, ಶಿಕ್ಷಕರು, ಪೋಷ ಕರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ತಾವು ವಾಸಿಸುತ್ತಿರುವ ಸ್ಥಳಕ್ಕೆ ಹತ್ತಿರವಿರುವ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್‍ಟಿ ಪಿಸಿಆರ್ ಮಾಡಿಸಿಕೊಳ್ಳಬಹುದಾಗಿದ್ದು, ಅನಗತ್ಯವಾಗಿ ನಗರದ ಹೃದಯಭಾಗಕ್ಕೆ ಬಂದು ಗಂಟೆಗಟ್ಟಲೆ ಕಾಯಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

 

 

Translate »