ಮೇಯರ್ ಆನ್‍ಲೈನ್ ಅದಾಲತ್
ಮೈಸೂರು

ಮೇಯರ್ ಆನ್‍ಲೈನ್ ಅದಾಲತ್

February 9, 2023

ಮೈಸೂರು, ಫೆ. 8 (ಆರ್‍ಕೆ)- ವಲಯವಾರು ಪಾಲಿಕೆ ಅದಾಲತ್ ಅಂತ್ಯಗೊಳ್ಳುತ್ತಿದ್ದಂತೆಯೇ ಇದೀಗ ಆನ್‍ಲೈನ್ ಅದಾಲತ್ ಆರಂಭಿಸುವ ಮೂಲಕ ಮೇಯರ್ ಶಿವಕುಮಾರ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಈ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೇ ಸೇವೆ ಒದಗಿಸುತ್ತಿರುವುದು ಇಡೀ ಕರ್ನಾಟಕ ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ. ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮೇಯರ್ ಶಿವಕುಮಾರ್ ಕ್ಯೂಆರ್ ಕೋಡ್ ಅನ್ನು ಬಿಡು ಗಡೆ ಮಾಡಿದರು. ಮೈಸೂರಲ್ಲಿ ನಡೆದ ವಲಯ ವಾರು ಅದಾಲತ್‍ನಲ್ಲಿ ಖುದ್ದಾಗಿ ಹಾಜರಾಗ ಲಾರದ ಹಾಗೂ ಹೊರಗಡೆ ವಾಸಿಸುತ್ತಿರುವವರು ತಾವಿರುವಲ್ಲೇ ಈ ಕ್ಯೂಆರ್ ಕೋಡ್ ಅನ್ನು ತಮ್ಮ ಮೊಬೈಲ್‍ನಿಂದ ಸ್ಕ್ಯಾನ್ ಮಾಡಿ hಣಣಠಿ://biಣ.iಥಿ/mಛಿಛಿmಚಿಥಿoಡಿ ವೆಬ್‍ಸೈಟ್ ತೆರೆದು ಕೊಂಡು ದೂರುಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗಿ ಸೇವೆಯನ್ನು ಪಡೆಯಬಹುದು. ಮೈಸೂರಿನಲ್ಲಿ ಆಸ್ತಿ ಹೊಂದಿದ್ದು, ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ವಾಸವಾಗಿರುವವರು ಆನ್ ಲೈನ್‍ನಲ್ಲೇ ಅರ್ಜಿ ಸಲ್ಲಿಸಿ ಸೇವೆಯನ್ನು ಪಡೆಯ ಬಹುದಾಗಿದೆ. ಲಂಚಕ್ಕಾಗಿ ಬೇಡಿಕೆ ಇಟ್ಟು ಸಾರ್ವ ಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುವುದು, ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ದವರಿಗೆ ಈ ಆನ್‍ಲೈನ್ ಅದಾಲತ್ ಕಾರ್ಯ ಕ್ರಮದಿಂದ ಕೈ ಕಟ್ಟಿದಂತಾಗಿದೆ. ತೊಂದರೆ ಉಂಟಾಗಿದೆ. ಆದರೆ ಹೊರ ಊರುಗಳಲ್ಲಿರು ವವರು, ಅಂಗವಿಕಲರು, ರೋಗಿಗಳು, ಹಿರಿಯ ನಾಗರಿಕರ ಪಾಲಿಗೆ ಆನ್‍ಲೈನ್ ಅದಾಲತ್ ವರವಾಗಿ ಪರಿಣಮಿಸಿದೆ.

ಇಂದಿನಿಂದ ಫೆಬ್ರವರಿ 22 ರವರೆಗೆ ಆನ್‍ಲೈನ್ ಪಾಲಿಕೆ ಅದಾಲತ್ ನಡೆಯುವುದರಿಂದ ವಲಯ ವಾರು ಅದಾಲತ್‍ನಲ್ಲಿ ಭಾಗವಹಿಸಲಾಗದವರು ಈ ಮೂಲಕ ತಮ್ಮ ಸೇವೆಗಳಿಗಾಗಿ ಅರ್ಜಿ ಸಲ್ಲಿಸ ಬಹುದಾಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು. ಪ್ರತಿಪಕ್ಷದ ನಾಯಕಿ ಅಶ್ವಿನಿ ಅನಂತು, ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಮಧುಸೂದನ್ ಹಾಗೂ ಮುಖ್ಯ ಲೆಕ್ಕಾಧಿಕಾರಿ ಕವಿತಾ ಹಾಗೂ ಇತರರು ಮೇಯರ್ ಆನ್‍ಲೈನ್ ಅದಾಲತ್‍ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »