ಮೈಸೂರಲ್ಲಿ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ ಇಂದು 3ನೇ ದಿನಕ್ಕೆ
ಮೈಸೂರು

ಮೈಸೂರಲ್ಲಿ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ ಇಂದು 3ನೇ ದಿನಕ್ಕೆ

December 16, 2020

ಮೈಸೂರು, ಡಿ.15(ಆರ್‍ಕೆಬಿ)- ನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 231 ಜನ ಒಳಚರಂಡಿ ಕಾರ್ಮಿಕರನ್ನು (ಸಹಾ ಯಕ) ಖಾಯಂ ಮಾಡಬೇಕು. ಬೆಳಗಿನ ಉಪಾಹಾರ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರ ಕಾರ್ಮಿಕರು ನಡೆಸುತ್ತರುವ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಮಂಗಳವಾರ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬುಧವಾರ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮೇಯರ್ ತಸ್ನೀಂ, ಆಯುಕ್ತ ಗುರುದತ್ತ ಹೆಗಡೆ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಅವರೊಂದಿಗೆ ನಮ್ಮ ಬೇಡಿಕೆಗಳನ್ನು ಮುಂದಿಡಲಿದ್ದೇವೆ ಎಂದರು. ಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಒಳಚರಂಡಿ ಕಾರ್ಮಿಕರಿಗೆ ಬೆಳಗಿನ ಉಪಾಹಾರ ಹಣ ಮಂಜೂರಾಗಿದ್ದರೂ, ಅದು ಬಿಡುಗಡೆ ಆಗಿಲ್ಲ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿ, ನಮ್ಮನ್ನು ಖಾಯಂ ಮಾಡಿ, ನೇರ ವೇತನ ನೀಡಿ ಎಂದು ಸೋಮ ವಾರದಿಂದ ಮಹಾನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಕಾರ್ಯಾಧ್ಯಕ್ಷ ಕುಮಾರ ಸ್ವಾಮಿ, ಉಸ್ತುವಾರಿ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಗಣೇಶ್, ಇನ್ನಿತರ ಪದಾಧಿಕಾರಿ ಗಳಾದ ಶಂಕರ್, ಹನುಮಂತು, ಹನುಮೇಶ್, ಮಹ ದೇವ, ಗೋಪಾಲ, ಪಿ.ಮುರುಗ, ಸುಬ್ರಮಣಿ, ಲಕ್ಷ್ಮಣ, ನರಸಿಂಹ, ಲೋಕೇಶ್, ಸೋಮು, ಪ್ರಕಾಶ್, ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »