ಮುಂದಿನ ಆಗಸ್ಟ್ 20ರೊಳಗೆ ಮೈಸೂರಲ್ಲಿ   ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ 
ಮೈಸೂರು

ಮುಂದಿನ ಆಗಸ್ಟ್ 20ರೊಳಗೆ ಮೈಸೂರಲ್ಲಿ  ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ 

December 16, 2020

ಮೈಸೂರು, ಡಿ.15(ಪಿಎಂ)- ಮುಂದಿನ ಆ.20ರೊಳಗೆ ಮೈಸೂರು ನಗರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಆಗ್ರಹಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ, ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಸಾಮಾಜಿಕ ಚಿಂತನೆಗಳ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ, ದೇವರಾಜ ಅರಸು ಅವರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಲ್ಲಿಯೂ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪನೆ ಮಾಡಿಲ್ಲ. ಹೀಗಾಗಿ ಅವರ ಸ್ವಂತ ಜಿಲ್ಲೆಯಾದ ಮೈಸೂರಿನಲ್ಲಿ ಯಾದರೂ ಅವರ ಪ್ರತಿಮೆ ನಿರ್ಮಾಣ ಆಗಲೇಬೇಕು. ದೇವರಾಜ ಅರಸು ರಸ್ತೆ ಹಾಗೂ ಜೆಎಲ್‍ಬಿ ರಸ್ತೆಯ ಮಹಾರಾಣಿ ಕಾಲೇಜು ಬಳಿಯ ಜಂಕ್ಷನ್‍ನಲ್ಲಿ ಪ್ರತಿಮೆ ನಿರ್ಮಾಣ ಸೂಕ್ತ ಎಂಬ ಆಲೋಚನೆ ಮಾಡಿದ್ದೇವೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ರಿಗೆ ಮನವಿ ಸಲ್ಲಿಸಿದಾಗ ಅವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ. ದೇವರಾಜ ಅರಸು ಅವರ ಮುಂದಿನ ಜನ್ಮ ದಿನಾಚರಣೆ (ಆ.20) ಒಳಗೆ ಮೈಸೂರಿನಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಹಳ್ಳಿಗಾಡಿನ ರೈತರ ಬಗ್ಗೆ ದೇವರಾಜ ಅರಸು ಅತೀವ ಕಾಳಜಿ ಹೊಂದಿದ್ದರು. ಅವರ ರಾಜಕೀಯ ಜೀವನದ ಉದ್ದಕ್ಕೂ ಇದನ್ನು ಕಾಣಬಹುದು. ರೈತ ಸಮುದಾಯ ಕೂಡ ಅರಸು ಅವರಿಗೆ ಬೆಂಬಲ ನೀಡು ತ್ತಿತ್ತು. ತೀರಾ ಕಡಗಣಿಸಲ್ಪಟ್ಟ ಜನ ಸಮು ದಾಯಗಳ ಬಗ್ಗೆ ಅರಸು ವಿಶೇಷ ಗಮನ ನೀಡಿದ್ದಾರೆ. ಅವರು ಕೇವಲ ಒಂದು ರಾಜ್ಯದ ವ್ಯಕ್ತಿಯಾಗಿದೇ ಇಡೀ ರಾಷ್ಟ್ರದ ಶಕ್ತಿಯಾಗಿದ್ದರು ಎಂದು ಸ್ಮರಿಸಿದರು.

ಅಂಬೇಡ್ಕರ್ ಚಿಂತನೆ ಓದುತ್ತಿದ್ದ ಅರಸು: ದೇವರಾಜ ಅರಸು ಓದುವ ಹವ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದರು. ಆದರೆ ಈಗಿನ ಬಹುತೇಕ ರಾಜಕಾರಣಿಗಳು ಈ ಅಭ್ಯಾಸ ಬೆಳೆಸಿಕೊಂಡಿಲ್ಲ. ಓದುವ ಹವ್ಯಾಸ ಬೆಳೆಸಿ ಕೊಳ್ಳದಿದ್ದರೆ ಹೊಸ ಆಲೋಚನೆಗಳು ಬರು ವುದಿಲ್ಲ. ನಾನು ಗಮನಿಸಿದಂತೆ ದೇವರಾಜ ಅರಸರ ಮನೆಯಲ್ಲಿ ಡಾ.ಅಂಬೇಡ್ಕರ್ ವಿಚಾರಧಾರೆಯ ಪುಸ್ತಕಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದವು. ಅಪ್ಪಟ ಜನಪ್ರೇಮಿಯಾಗಿದ್ದ ದೇವರಾಜ ಅರಸು ಅವರಂತಹ ಹೃದಯ ವಂತಿಕೆಯನ್ನು ಇನ್ನಾರಲ್ಲೂ ನಾವು ಕಾಣಲು ಸಾಧ್ಯವಿಲ್ಲ ಅನ್ನಿಸುತ್ತದೆ. ಇತ್ತೀಚೆಗೆ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಜನಪರ ವಾಗಿ ಹೆಚ್ಚಿನ ಕೆಲಸ ಮಾಡಿದರು ಎಂದರು.

ರಾಜ್ಯಸಭೆ, ವಿಧಾನ ಪರಿಷತ್ ಪರಿ ಕಲ್ಪನೆಯ ಮೂಲ ಉದ್ದೇಶಕ್ಕೆ ಈಗ ಆದ್ಯತೆ ನೀಡುತ್ತಿಲ್ಲ: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಪರಿಕಲ್ಪನೆಯ ಮೂಲ ಉದ್ದೇಶಕ್ಕೆ ಈಗ ಆದ್ಯತೆ ನೀಡುತ್ತಿಲ್ಲ. ತಮ್ಮ ಪಕ್ಷದವರು ಹಾಗೂ ಬೇಕಾದವರಿಗೆ ಸ್ಥಾನ ಕಲ್ಪಿಸಲು ಬಳಸಿ ಕೊಳ್ಳಲಾಗುತ್ತಿದೆ ಎಂದು ಪ್ರೊ.ಕೆ.ಎಸ್. ಭಗವಾನ್ ಬೇಸರ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ರಾಜ್ಯಸಭೆ ಹಾಗೂ ರಾಜ್ಯ ಗಳಲ್ಲಿ ವಿಧಾನ ಪರಿಷತ್ ವ್ಯವಸ್ಥೆಯಲ್ಲಿ ಅನುಭವಿಗಳು, ವಿಷಯ ತಜ್ಞರಿಗೆ ಸ್ಥಾನ ಕಲ್ಪಿಸಿ ಸುಗಮ ಆಡಳಿತ ನಡೆಸುವ ಉದ್ದೇಶ ಹೊಂದಲಾಗಿದೆ. ಆದರೆ ಈಗ ಅವರ ಪಕ್ಷದವರು, ಬೇಕಾದವರಿಗೆ ಸ್ಥಾನ ನೀಡಲು ಈ ವ್ಯವಸ್ಥೆಗಳನ್ನು ಬಳಸಿ ಕೊಳ್ಳಲಾಗುತ್ತಿದೆ. ಆ ಮೂಲಕ ಮೂಲ ಉದ್ದೇಶ ಹಾಳಾಗುತ್ತಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಅರಗು ಮತ್ತು ಬಣ್ಣ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮಾತನಾಡಿ, ದೇವರಾಜ ಅರಸು ತಮಗೆ ಸಿಕ್ಕ ಅಧಿಕಾರ ವನ್ನು ಜನತೆಗಾಗಿ ಬಳಸಿದರು. 70ರ ದಶಕ ವನ್ನು ಅರಸು ಯುಗ ಎಂದೇ ಕರೆಯಲಾಗು ತ್ತದೆ. ಅವರು ರಾಜ್ಯದಲ್ಲಿ ಭೂ ಸುಧಾ ರಣಾ ಕಾಯ್ದೆ ತಂದು ಭೂರಹಿತರನ್ನು ಭೂ ಮಾಲೀಕರಾಗಿ ಮಾಡಿದರು. ಅವರು ಸ್ವತಃ ರೈತರಾಗಿ ರೈತರಿಗಾಗಿ ದುಡಿದರೇ ಹೊರತು, ಹಸಿರು ಟವಲ್ ಹಾಕಿಕೊಂಡು ಅಧಿಕಾರ ಸ್ವೀಕರಿಸಿ ರೈತರ ವಿರುದ್ಧವಾಗಿ ನಡೆದವ ರಲ್ಲ ಎಂದು ಹೇಳಿದರು. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸು, ಆರೋಗ್ಯ ಇಲಾಖೆ ನಿವೃತ್ತ ನಿರ್ದೇಶಕ ಡಾ.ಡಿ.ತಿಮ್ಮಯ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರ ಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್, ಅರಸು ಪ್ರತಿಮೆ ಪ್ರತಿ ಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕ ಟೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅರಸು ಮಹಾಸಭಾ ಅಧ್ಯಕ್ಷ ನಂದೀಶ್ ಜೆ.ಅರಸ್, ವಕೀಲ ಕಾಂತರಾಜು, ಮುಖಂಡ ಸುನಂದಕುಮಾರ್, ಪ್ರಾಧ್ಯಾಪಕಿ ಶಬನಾ ಫರೀನಾ ಮತ್ತಿತರರು ಹಾಜರಿದ್ದರು.

 

 

Translate »