ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

December 17, 2020

ಮೈಸೂರು, ಡಿ.16- ಸೆಸ್ಕ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಡಿ.17ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಗರ್ಗೇಶ್ವರಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಪ್ರದೇಶಗಳಾದ ಯಡ ದೊರೆ, ಕುರಿಸಿದ್ದನಹುಂಡಿ, ಗರ್ಗೇಶ್ವರಿ, ಹಳೆತಿರುಮಕೂಡಲು, ಹೊಸಕೋಟೆ, ಇಂಡುವಾಳು, ರಾಯರಹುಂಡಿ, ಹೊಸಕೆಂಪ ಯ್ಯನ ಹುಂಡಿ, ಹಳೆಕೆಂಪಯ್ಯನಹುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು. ವ್ಯಾಸರಾಜಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ದೊಡ್ಡೆಬಾಗಿಲು, ಕೊಳತ್ತೂರು, ಉಕ್ಕಲಗೆರೆ, ಹೊರಳಹಳ್ಳಿ, ವ್ಯಾಸರಾಜಪುರ ಗ್ರಾಪಂ ವ್ಯಾಪ್ತಿಯ ಪ್ರದೇಶಗಳು ಹಾಗೂ ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಕುಪ್ಯಾ ಗ್ರಾಪಂ ವ್ಯಾಪ್ತಿಯ ಪ್ರದೇಶ ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ಅಲ್ಲದೆ ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಮೇಗಳಾಪುರ, ಕೀಳನ ಪುರ, ಸಿದ್ದರಾಮನಹುಂಡಿ, ಎಂ.ಸಿ.ಹುಂಡಿ, ಇನಾಂ ಉತ್ತನಹಳ್ಳಿ, ಕುಪ್ಪೆಗಾಲ, ಮುದ್ದೇ ಗೌಡನಹುಂಡಿ, ರಂಗನಾಥಪುರ, ಶ್ರೀನಿವಾಸಪುರ, ದೇವೆಗೌಡನ ಹುಂಡಿ, ಯಡಕೊಳ, ಕಡವೆಕಟ್ಟೆಹುಂಡಿ, ಹೊಸಹಳ್ಳಿ, ಗುರುಕಾರಪುರ, ದುದ್ದಗೆರೆ, ಮಹದೇವಿಕಾಲೋನಿ, ಲಕ್ಷ್ಮೀಪುರ, ಮಾಧವಗೆರೆ, ವರಕೋಡು ಪೇಪರ್ ಮಿಲ್, ಕುಪ್ಯ, ಬೊಮ್ಮನಾಯಕನ ಹಳ್ಳಿ, ಕೆ.ಪಿ.ಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ನಂಜನಗೂಡು ವಿಭಾಗ ವ್ಯಾಪ್ತಿಯ ಕುಪ್ಯ ಗ್ರಾಪಂ ವ್ಯಾಪ್ತಿಯ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.

Translate »