ಪಾರಂಪರಿಕ ತೆರಿಗೆ ಸಂಗ್ರಹಿಸಲು ಮೈಸೂರು ಪಾಲಿಕೆ ಚಿಂತನೆ
ಮೈಸೂರು

ಪಾರಂಪರಿಕ ತೆರಿಗೆ ಸಂಗ್ರಹಿಸಲು ಮೈಸೂರು ಪಾಲಿಕೆ ಚಿಂತನೆ

August 27, 2020

ಮೈಸೂರು,ಆ.26(ಆರ್‍ಕೆ)- ಮೈಸೂರು ನಗರದ ಪಾರಂಪರಿಕ ಕಟ್ಟಡ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸಲು ಪಾರಂಪರಿಕ ತೆರಿಗೆ (ಊeಡಿiಣಚಿge ಛಿess) ಸಂಗ್ರಹಿಸಲು ಮೈಸೂರು ಮಹಾ ನಗರ ಪಾಲಿಕೆ ಮುಂದಾಗಿದೆ.

ಇದು ಸಾಕಾರಗೊಂಡಲ್ಲಿ ಹೆರಿಟೇಜ್ ಕಟ್ಟಡಗಳ ಸಂರಕ್ಷಣೆಗಾಗಿ ಆರ್ಥಿಕ ಸಂಪ ನ್ಮೂಲ ಕ್ರೂಢೀಕರಣಕ್ಕೆ ಹೊಸ ವಿಧಾನ ಅನುಸರಿಸಿದ ಕೀರ್ತಿಗೆ ಮೈಸೂರು ಮಹಾನಗರ ಪಾಲಿಕೆ ಪಾತ್ರವಾಗಲಿದೆ. ಈಗಾಗಲೇ ಪಾರಂಪರಿಕ ತೆರಿಗೆ ಸಂಗ್ರ ಹಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮೈಸೂರಿಗೆ 200ಕ್ಕೂ ಹೆಚ್ಚು ಪಾರಂ ಪರಿಕ ಕಟ್ಟಡಗಳನ್ನು ರಾಜವಂಶಸ್ಥರು ಕೊಡುಗೆ ನೀಡಿದ್ದಾರೆ. ಆದರೆ ಆರ್ಥಿಕ ಸಂಪನ್ಮೂಲ ಕೊರತೆಯಿಂದ ಆ ಸ್ಮಾರಕ ಗಳನ್ನು ಸಂರಕ್ಷಿಸಲಾಗುತ್ತಿಲ್ಲ. ಪಾರಂಪರಿಕ ತೆರಿಗೆ ಸಂಗ್ರಹಿಸಲು ಕರ್ನಾಟಕ ರಾಜ್ಯ ಪೌರಾಡಳಿತ ಕಾಯ್ದೆಯಲ್ಲಿ ಅವಕಾಶವಿದೆ ಯಾದರೂ, ಅದಕ್ಕೆ ಸರ್ಕಾರದ ಅನುಮತಿ ಬೇಕಾಗಿದೆ ಎಂದು ಅವರು ತಿಳಿಸಿದರು.

ಮೈಸೂರು ಅರಮನೆ, ಮೃಗಾಲಯ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ 1 ಅಥವಾ 2 ರೂ. ಹೆಚ್ಚುವರಿ ಶುಲ್ಕ ಸಂಗ್ರಹಿಸಿದರೂ ಒಂದು ಪ್ರವಾಸಿ ತಾಣದಿಂದ ವಾರ್ಷಿಕ ಕನಿಷ್ಠ 50 ಲಕ್ಷ ರೂ. ಆರ್ಥಿಕ ಸಂಪನ್ಮೂಲ ಕ್ರೂಢೀಕರಣವಾಗಲಿದೆ. ಇದರಿಂದ ಪಾರಂ ಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರದ ಅನುದಾನ ಅವಲಂಬಿಸುವುದು ತಪ್ಪುತ್ತದೆ ಎಂದು ಗುರುದತ್ ಹೆಗ್ಡೆ ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆಯೇ ಮೈಸೂ ರಿನ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ ಡೌನ್ ಕಟ್ಟಡ ಮತ್ತು ದೇವರಾಜ ಮಾರು ಕಟ್ಟೆ ಕಟ್ಟಡದ ಕೆಲ ಭಾಗ ಕುಸಿದು ಬಿದ್ದು, ಪ್ರಾಣಹಾನಿಯೂ ಆಗಿತ್ತು. ಮೈಸೂರು ಅಗ್ನಿಶಾಮಕ ಕಚೇರಿಯ ಪಾರಂಪರಿಕ ಕಟ್ಟಡದ ಪೋರ್ಟಿಕೋ ಸಹ ಮಳೆ ಯಿಂದಾಗಿ ನೆಲಸಮಗೊಂಡಿತ್ತು. ದೇವ ರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಅನ್ನು ರಿಪೇರಿ ಮಾಡಿಸಲು ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದ್ದ 5 ಕೋಟಿ ರೂ. ಅನುದಾನವನ್ನೂ ಹಲವು ಕಾರಣಗಳಿಂ ದಾಗಿ ಖರ್ಚು ಮಾಡಲು ಸಾಧ್ಯವಾಗಿಲ್ಲ.

ಇಂತಹ ಪಾರಂಪರಿಕ ಕಟ್ಟಡಗಳನ್ನು ಸುಸ್ಥಿತಿಗೆ ತಂದು ಸಂರಕ್ಷಿಸಲು ನಮ್ಮದೇ ಆದ ಸಂಪನ್ಮೂಲವನ್ನು ಕ್ರೂಢೀಕರಿಸಲು ಅವಕಾಶವಿದ್ದು, ಈ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯವನ್ನೂ ಸರ್ಕಾ ರಕ್ಕೆ ಕಳುಹಿಸುತ್ತೇವೆ. ಈ ಕುರಿತು ಮೇಯರ್, ಜನಪ್ರತಿನಿಧಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಪುರಾತತ್ವ, ಮ್ಯೂಸಿಯಂ ಮತ್ತು ಹೆರಿಟೇಜ್ ಇಲಾಖೆಯು ಪಾರಂ ಪರಿಕ ಕಟ್ಟಡಗಳ ಸ್ಥಿತಿ-ಗತಿ ಬಗ್ಗೆ ಅಧ್ಯ ಯನ ನಡೆಸಿ ಅವುಗಳ ಆಧುನೀಕರಣ ಮತ್ತು ಸಂರಕ್ಷಣೆ ಬಗ್ಗೆ ಮಾಹಿತಿ ನೀಡ ಬೇಕು. ಪಾರಂಪರಿಕ ತಜ್ಞರು ಸಹ ಈ ಕುರಿತು ಆಲೋಚಿಸಬೇಕು ಎಂದು ಗುರುದತ್ ಹೆಗ್ಡೆ ಅವರು ತಿಳಿಸಿದರು.

Translate »