ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿ ಯನ್ನು ಇಂದು ನಗರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ನಗರದ ಜೆ.ಎಚ್.ಪಟೇಲ್ ಸಭಾಂ ಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಉದ್ಘಾಟಿಸಿದರು. ಇದೇ ಸಂದ ರ್ಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯಮೇವ ಜಯತೇ ಎಂಬುದನ್ನು ಪ್ರತಿಪಾದಿಸಿದ. ಮಾನವೀಯ ಮೌಲ್ಯ ಗಳನ್ನು ಸಾರುವಲ್ಲಿ ಶ್ರೀಕೃಷ್ಣ ಅದರ್ಶ ವಾಗಿದ್ದಾನೆ ಎಂದರು.
ಶ್ರೀ ಕೃಷ್ಣನ ಕುರಿತು ಹೆಚ್ಚು ಓದಬೇಕು. ಮಕ್ಕಳಿಗೂ ಸಹ ಕೃಷ್ಣನ ಕುರಿತು ತಿಳಿಸಿ ಕೊಡಬೇಕು. ಶ್ರೀಕೃಷ್ಣನ ಬಾಲ್ಯ, ತುಂಟ ತನ, ಅರ್ಜುನನಿಗೆ ಸತ್ಯ ಕುರಿತು ಮಾಡಿದ ಉಪದೇಶ ಸೇರಿದಂತೆ ಹಲವಾರು ಮಹ ತ್ವದ ವಿಷಯಗಳನ್ನು ಹೇಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ, ಶ್ರೀಕೃಷ್ಣ ಜೀವ ನೋತ್ಸಾಹದ ಸಂಕೇತ. ಶ್ರೀಕೃಷ್ಣನ ಪ್ರಬು ದ್ಧತೆ, ಮುತ್ಸಧಿತನ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಯುದ್ಧ ಕಾಲ ದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ. ಶ್ರೀ ಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದರು.
ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರದೀಪ್‍ಕುಮಾರ್ ದೀಕ್ಷಿತ್ ಅವರು, ಧರ್ಮದ ಏಕಮೇವ ಉದ್ದಾರವೇ ಶ್ರೀಕೃಷ್ಣನ ಜನ್ಮಕ್ಕೆ ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃಷ್ಣನ ವ್ಯಕ್ತಿತ್ವ ಮಾದ ರಿಯಾಗಿದೆ ಎಂದರು.
ಶ್ರೀಕೃಷ್ಣ ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿ ಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆ ಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ ತಿಳಿ ಸಿದ್ದ. ಧರ್ಮ, ಪರಂಪರೆ, ಸಾತ್ವಿಕ ರಕ್ಷಣೆಗೆ ಶ್ರೀಕೃಷ್ಣ ಕಾರಣರಾದರು ಎಂದು ಪ್ರದೀಪ್ ಕುಮಾರ್ ದೀಕ್ಷಿತ್ ತಿಳಿಸಿದರು.
ಇದೇ ವೇಳೆ ಚಿಕ್ಕ ಮಕ್ಕಳು ಶ್ರೀಕೃಷ್ಣನ ವೇಷಧಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಎಲ್ಲಾ ಕೃಷ್ಣ ವೇಷಧಾರಿ ಮಕ್ಕಳಿಗೆ ಜಿಲ್ಲಾಧಿಕಾರಿ, ಇತರೇ ಗಣ್ಯರು ನೆನಪಿನ ಕಾಣಿಕೆ, ಪ್ರಶಂಸ ಪತ್ರವನ್ನು ನೀಡಿ ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.