ರಾಜ್ಯದ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ
ಮೈಸೂರು

ರಾಜ್ಯದ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ

January 11, 2021

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ
ಮೈಸೂರು,ಜ.10-ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರ ದಿಂದ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯ ದಲ್ಲಿರುವ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ ವಹಿಸ ಲಾಗು ತ್ತಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಯಶಸ್ವಿಯಾಗಿರುವ `ಪ್ರಾಣಿ ದತ್ತು ಸ್ವೀಕಾರ ಯೋಜನೆ’ಯನ್ನು ಈಗಾಗಲೇ ರಾಜ್ಯದ ಎಲ್ಲಾ ಮೃಗಾಲಯ ಗಳ ವ್ಯಾಪ್ತಿಗೂ ವಿಸ್ತರಿಸಲಾಗಿದೆ. ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಮೃಗಾಲಯಗಳಲ್ಲಿ ರುವ 5247 ಪ್ರಾಣಿ- ಪಕ್ಷಿ ಮತ್ತು ಸರಿಸೃಪಗಳಲ್ಲಿ ತಮಗಿಷ್ಟ ವಾದುದನ್ನು ದತ್ತು ಪಡೆಯಬಹುದು. `ಜೂಸ್ ಆಫ್ ಕರ್ನಾಟಕ (Zoos oಜಿ ಏಚಿಡಿಟಿಚಿಣಚಿಞಚಿ ಆಪ್ ಮೂಲಕವೂ ದತ್ತು ಸ್ವೀಕರಿಸಿ, ಒಂದು ವರ್ಷಕ್ಕೆ ಅವುಗಳ ಪಾಲನೆಗೆ ವೆಚ್ಚವಾಗುವ ಹಣವನ್ನು ಪಾವತಿಸಬಹುದು. ಮೈಸೂರಿನ ಮೃಗಾಲಯದಲ್ಲಿ 2 ದಶಕದಿಂದ ಈ ಯೋಜನೆ ಜಾರಿಯಲ್ಲಿದ್ದು, ಇತ್ತೀಚೆಗೆ ಹೆಚ್ಚು ಮಂದಿ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಕಳೆದ ವರ್ಷ 806 ಮಂದಿ ದತ್ತು ಪಡೆ ದಿದ್ದು, ಸುಮಾರು 4 ಕೋಟಿ ರೂ. ಸಂಗ್ರಹವಾಗಿದೆ. ಕೊರೊನಾ ಪರಿಣಾಮದಿಂದ ಆದಾಯವಿಲ್ಲದೆ ಸಂಕಷ್ಟದಲ್ಲಿರುವ ರಾಜ್ಯದ ಮೃಗಾಲಯಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾರ್ವಜ ನಿಕರ ಸಹಕಾರ ಸ್ಮರಣೀಯ ಎಂದು ಅವರು ಹೇಳಿದ್ದಾರೆ.

ಮೈಸೂರು ಮೃಗಾಲಯದಲ್ಲಿ ಪ್ರಾಣಿ ದತ್ತು ಸ್ವೀಕರಿಸುವವರು ನಾಲ್ವರೊಂದಿಗೆ 5 ಬಾರಿ ಉಚಿತವಾಗಿ ಮೃಗಾಲಯ ವೀಕ್ಷಿಸಲು ಅವಕಾಶವಿತ್ತು. ಈಗ ದತ್ತು ಸ್ವೀಕಾರ ಯೋಜನೆ ವಿಸ್ತರಣೆ ಯೊಂದಿಗೆ ಭೇಟಿ ನೀಡುವ ಸಂಖ್ಯೆಯನ್ನು 10ಕ್ಕೆ ವಿಸ್ತರಿಸ ಲಾಗಿದೆ. ಯಾವುದಾದರೂ ಒಂದು ಮೃಗಾಲಯದಲ್ಲಿ 25 ಸಾವಿರ ರೂ. ಮೇಲ್ಟಟ್ಟು ಹಣ ನೀಡಿ ದತ್ತು ಸ್ವೀಕರಿಸಿದರೆ, ರಾಜ್ಯದ ಎಲ್ಲಾ ಮೃಗಾಲಯಗಳನ್ನು 10 ಬಾರಿ ಉಚಿತ ವಾಗಿ ವೀಕ್ಷಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಆಫ್ರಿಕನ್ ಮಾದರಿ ಸಫಾರಿಗೆ ಚಿಂತನೆ: ಪ್ರಾಣಿಗಳ ಸಂಖ್ಯೆ, ವೈವಿಧ್ಯತೆ, ಸ್ವಚ್ಛತೆ ಜೀವಿಗಳ ಪಾಲನೆ-ಪೋಷಣೆ ಇನ್ನಿತರೆ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ಮೈಸೂರಿನ ಮೃಗಾಲಯ ಮಾದರಿಯಾಗಿದೆ. ಮೈಸೂರಿಗೆ ಬರುವ ಬಹುತೇಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಶತಮಾನದ ಇತಿಹಾಸ ವಿರುವ ಈ ಮೃಗಾಲಯವನ್ನು ಮತ್ತಷ್ಟು ಆಕರ್ಷಿತಗೊಳಿಸುವ ಆಶಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರ ದ್ದಾಗಿದೆ. ಸ್ಥಳಾವಕಾಶ ಲಭ್ಯವಾದರೆ ಮೃಗಾಲಯ ವಿಸ್ತರಣೆಯೊಂ ದಿಗೆ ಆಫ್ರಿಕನ್ ಮಾದರಿಯಲ್ಲಿ ಸಫಾರಿ ಆರಂಭಿಸುವ ಬಗ್ಗೆ ಪ್ರಾಧಿ ಕಾರದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸರ್ಕಾರದ ಸಹಕಾರದಿಂದ ಮೃಗಾಲಯ ವಿಸ್ತರಿಸಿ, ಪ್ರಾಣಿ-ಪಕ್ಷಿಗಳ ಸಂಖ್ಯೆ ಹೆಚ್ಚಿಸಿ, ಸಫಾರಿ ಆರಂಭಿಸಿದರೆ ಮೃಗಾಲಯದ ಆದಾಯ ಹೆಚ್ಚುವುದರ ಜೊತೆಗೆ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

 

Translate »