ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಹಾಯಹಸ್ತ ಚಾಚಲು
ಮೈಸೂರು

ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಹಾಯಹಸ್ತ ಚಾಚಲು

April 29, 2021
  • ಆಕ್ಸಿಜûóನ್, ವೆಂಟಿಲೇಟರ್ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಸಹಾಯಹಸ್ತ 
  • ಒಂದೇ ನಂಬರ್‍ಗೆ ಏಕಕಾಲಕ್ಕೆ 20 ಮಂದಿ ಕರೆ ಮಾಡಬಹುದಾದ ಹೆಲ್ಪ್‍ಲೈನ್ ಆರಂಭ 
  • ಸೋಂಕಿತರೊಂದಿಗೆ ಸಂವಹನಕ್ಕೆ ಇದ್ದ ತೊಡಕು ನಿವಾರಿಸಲು ಪಣ 
  • 3 ಪಾಳಿಯಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ಸೇವೆ
    ಎಂ.ಟಿ.ಯೋಗೇಶ್‍ಕುಮಾರ್

ಮೈಸೂರು,ಏ.28- ಕೋವಿಡ್ ಸೋಂಕಿ ತರಿಗೆ ವೆಂಟಿಲೇಟರ್, ಆಮ್ಲಜನಕ ಸೇರಿ ದಂತೆ ವೈದ್ಯಕೀಯ ಸೇವೆಯ ಸೌಲಭ್ಯ ದಲ್ಲಿ ಉಂಟಾಗುವ ಕೊರತೆ ನೀಗಿಸಲು ಜಿಲ್ಲಾಡಳಿತ `ಕೋವಿಡ್ ವಾರ್ ರೂಮ್’ ಪುನರಾರಂಭಿಸಿದೆ. ವಾರ ಪೂರ್ತಿ ಪ್ರತಿದಿನ 24 ಗಂಟೆ ಅವಧಿಯಲ್ಲಿ ವಾರ್ ರೂಮ್ ಸಹಾಯಹಸ್ತ ನೀಡಲಿದೆ.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ದಲ್ಲಿ ಆರಂಭವಾಗಿರುವ `ಕೋವಿಡ್ ವಾರ್ ರೂಮ್’ ಪರಿಣಾಮಕಾರಿ ಕಾರ್ಯನಿರ್ವ ಹಣೆಗೆ ಶ್ರಮಿಸುತ್ತಿದೆ. ದಿನದ 24 ಗಂಟೆಯಲ್ಲೂ 3 ಪಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುವ ಮೂಲಕ ಸೋಂಕಿತರ ಆರೋಗ್ಯ ವಿಚಾರಣೆಯಲ್ಲಿ ಅವಿರತ ಶ್ರಮಿಸುತ್ತಿದ್ದಾರೆ.

ಕಳೆದ ಬಾರಿ ಅತ್ಯುತ್ತಮ ಸೇವೆಯಿಂದ ರಾಜ್ಯದಲ್ಲಿಯೇ ಪ್ರಶಂಸೆಗೆ ಪಾತ್ರವಾಗಿದ್ದ ಮೈಸೂರಿನ `ಕೋವಿಡ್ ವಾರ್ ರೂಮ್’ ಎರಡನೇ ಅಲೆಯ ತೀವ್ರ ಸ್ವರೂಪಕ್ಕೆ ತಕ್ಕಂತೆ ಹಲವು ಮಾರ್ಪಾಡಿನೊಂದಿಗೆ ಮತ್ತಷ್ಟು ಪರಿಣಾಮಕಾರಿ ಕಾರ್ಯನಿರ್ವಹಿಸಲಿದೆ. ಈ ಬಾರಿ ಹಲವು ನೂತನ ವ್ಯವಸ್ಥೆ ಯೊಂದಿಗೆ ಆರಂಭಿಸಿರುವ ವಾರ್ ರೂಮ್ ಹಾಗೂ ಹೆಲ್ಪ್‍ಲೈನ್ ಸಂಕಷ್ಟದಲ್ಲಿರುವ ಹಾಗೂ ತೀವ್ರ ಸ್ವರೂಪದ ಸ್ಥಿತಿಯಲ್ಲಿರುವ ಸೋಂಕಿತರನ್ನು ಗುರುತಿಸಿ ತ್ವರಿತಗತಿಯಲ್ಲಿ ಅಗತ್ಯ ಆರೋಗ್ಯ, ಚಿಕಿತ್ಸಾ ಸೌಲಭ್ಯ ದೊರಕಿಸಿಕೊಡಲು ಸೇತುವೆಯಾಗಿದೆ.

ಒಂದೇ ನಂಬರ್‍ಗೆ ಏಕಕಾಲಕ್ಕೆ 20 ಕರೆ: ಕೊರೊನಾ ಸೋಂಕಿತರ ನೆರವಿಗಾಗಿ ವಿವಿ ಧೆಡೆ ಇದ್ದ ಹೆಲ್ಪ್‍ಲೈನ್ ಸೇವೆಯನ್ನು ಒಂದೇ ಸೂರಿನಡಿಗೆ ತಂದಿದ್ದು, ಆ ಮೂಲಕ ಹೊಸ ಹೆಲ್ಪ್‍ಲೈನ್ ಹೆಚ್ಚು ಉಪಯುಕ್ತವಾಗಿದೆ. ಒಟ್ಟು 3 ದೂರವಾಣಿ ಸಂಖ್ಯೆಯನ್ನೊ ಳಗೊಂಡ ಹೆಲ್ಪ್‍ಲೈನ್ ವ್ಯವಸ್ಥೆ ಇದೆ. ಈ ಹಿಂದೆ ಹೆಲ್ಪ್‍ಲೈನ್‍ಗೆ ಯಾರಾದರೂ ಸೋಂಕಿ ತರು ಅಥವಾ ಸೋಂಕಿತರ ಪೋಷಕರು ಕರೆ ಮಾಡಿ ಕನಿಷ್ಠ 10 ನಿಮಿಷ ಮಾತ ನಾಡಿ ತಮ್ಮ ಸಮಸ್ಯೆ ವಿವರಿಸುತ್ತಿದ್ದರು. ಇದರಿಂದ ಬೇರೊಬ್ಬರು ಕರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ನಿವಾರಿಸಲು ಇದೀಗ ನೂತನ ತಂತ್ರಜ್ಞಾನ ಅಳವಡಿಸ ಲಾಗಿದ್ದು, ಒಂದೇ ನಂಬರ್‍ಗೆ ಏಕಕಾಲದಲ್ಲಿ 20 ಮಂದಿ ಕರೆ ಮಾಡಲು ಸಾಧ್ಯವಾಗಿದೆ.

ವಾರ್ ರೂಮ್‍ನಲ್ಲಿ ಆರಂಭಿಸಿರುವ ಹೆಲ್ಪ್‍ಲೈನ್‍ನಲ್ಲಿ ಕಾರ್ಯನಿರ್ವಹಿಸಲು ಇನ್ನಷ್ಟು ಸಿಬ್ಬಂದಿ ಸೇರ್ಪಡೆಗೊಳ್ಳಲಿ ದ್ದಾರೆ. ಕೆಎಎಸ್ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಡಾ.ಎಸ್.ಯು.ಅಶೋಕ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾ ಲಕ್ಷ್ಮಿ ನೋಡಲ್ ಅಧಿಕಾರಿಯಾಗಿರುವ ಕೋವಿಡ್ ವಾರ್ ರೂಮ್‍ನಲ್ಲಿ ಶಿಕ್ಷಕರು, ಸರ್ಕಾರಿ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೇವೆ ಒದಗಿಸುತ್ತಿದ್ದಾರೆ.

ಹೆಲ್ಪ್‍ಲೈನ್ ಸಿಬ್ಬಂದಿಯಿಂದ ಕರೆ ಮಾಡಿದ ಸೋಂಕಿತರ ಮೊಬೈಲ್ ನಂಬರ್, ವಿಳಾಸ ಪಡೆಯಲಾಗುತ್ತದೆ. ನಂತರ ಸೋಂಕಿತರ ವಯಸ್ಸು, ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಕೆಲ ಹಾಕಲಾಗುತ್ತದೆ. ಬಳಿಕ ಅವರ ಉಸಿ ರಾಟದ(ಸ್ಯಾಚುರೇಷನ್)ಪ್ರಮಾಣ, ಬಿಪಿ, ಶುಗರ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳ ವಿವರ ಕ್ರೂಢೀಕರಿಸಲಾಗುತ್ತದೆ.

ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಂ: ಸೋಂಕಿ ತರಿಗೆ ವೆಂಟಿಲೇಟರ್ ಬೇಕೋ, ಆಕ್ಸಿಜûóನ್ ಬೆಡ್ ಬೇಕೋ, ಕೋವಿಡ್ ಕೇರ್ ಸೆಂಟರ್ ಹಾಗೂ ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆದರೇ ಸಾಕೇ ಎಂಬುದನ್ನು ನಿರ್ಧರಿಸಿ, ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ತಂಡಕ್ಕೆ ಮಾಹಿತಿ ರವಾನಿಸಲಾಗುತ್ತದೆ. ಆ ತಂಡದ ಸದಸ್ಯರು ತಮ್ಮಲ್ಲಿರುವ ಪಟ್ಟಿ ಅವಲೋ ಕಿಸಿ ಯಾವ ಆಸ್ಪತ್ರೆಯಲ್ಲಿ ಹಾಸಿಗೆ, ವೆಂಟಿ ಲೇಟರ್, ಆಕ್ಸಿಜûóನ್‍ವುಳ್ಳ ಹಾಸಿಗೆಯನ್ನು ಒದಗಿಸಲು ಸಿದ್ಧತೆ ನಡೆಸಲಿದ್ದಾರೆ.

ಶಿಫ್ಟಿಂಗ್: ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ತಂಡವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ(ಸರ್ಕಾರಿ ಸಂಸ್ಥೆ) ಆರೋಗ್ಯ ಮಂತ್ರ ಸಿಬ್ಬಂದಿಯೊಂದಿಗೆ ಚರ್ಚಿಸಲಿ ದ್ದಾರೆ. ಆ ಬಳಿಕ ತುರ್ತಾಗಿ ಆಸ್ಪತ್ರೆಗೆ ದಾಖ ಲಿಸಬೇಕಾದ ಸೋಂಕಿತರಿಗೆ ಬೆಡ್ ನಿಗದಿ ಗೊಳಿಸಿರುವ ಆಸ್ಪತ್ರೆಗೆ ದಾಖಲಿಸಲು ಶಿಫ್ಟಿಂಗ್ ತಂಡಕ್ಕೆ ಸಂದೇಶ ರವಾನಿಸಲಿದ್ದಾರೆ.

ಕೇಂದ್ರೀಕೃತ ವ್ಯವಸ್ಥೆ: ಕೋವಿಡ್ ವಾರ್ ರೂಮ್‍ನಲ್ಲಿ ಕೇಂದ್ರೀಕೃತ ವ್ಯವಸ್ಥೆ ಜಾರಿ ಗೊಳಿಸಲಾಗಿದೆ. `ಸೆಂಟ್ರಲೈಜ್ಡ್ ಹಾಸ್ಪಿಟಲ್ ಬೆಡ್ ಮ್ಯಾನೇಜ್‍ಮೆಂಟ್ ಸಿಸ್ಟಮ್’ ಎಂಬ ಸಾಫ್ಟ್‍ವೇರ್ ಹೊಂದಿರುವ ಈ ವ್ಯವಸ್ಥೆ ಯಲ್ಲಿ ಸೋಂಕಿತರ ಸಮಸ್ಯೆಗೆ ತುರ್ತು ಸ್ಪಂದನೆ ದೊರೆಯಲಿದೆ. ಈ ಹಿಂದೆ ಸೋಂಕಿತರ ಅಳಲು ಕೇಳಲು ಡಿಸಿ ಕಚೇರಿ, ವಾಣಿವಿಲಾಸ ಕೇಂದ್ರ ಸೇರಿದಂತೆ ವಿವಿಧೆಡೆ ತೆರೆದಿದ್ದ ಹೆಲ್ಪ್‍ಲೈನ್‍ಗಳಲ್ಲಿ ಸಂವಹನದ ಕೊರತೆಯಿಂದ ಸಕಾಲಕ್ಕೆ ನೆರವು ನೀಡಲು ಸಾಧ್ಯವಾಗುತ್ತಿ ರಲಿಲ್ಲ. ಆದರೆ ಇದೀಗ ಒಂದೇ ಸ್ಥಳದಲ್ಲಿ ವಾರ್ ರೂಮ್, ಹೆಲ್ಪ್‍ಲೈನ್ ಇರುವುದ ರಿಂದ ಸಕಾಲಕ್ಕೆ ನೆರವು ದೊರೆಯಲಿದೆ.

Translate »