ಸಾಮಾಜಿಕ ಸೇವೆಯಲ್ಲಿ ಧರ್ಮಸ್ಥಳ ಸಂಸ್ಥೆ ಸೇವೆ ಅನನ್ಯ
ಮಂಡ್ಯ

ಸಾಮಾಜಿಕ ಸೇವೆಯಲ್ಲಿ ಧರ್ಮಸ್ಥಳ ಸಂಸ್ಥೆ ಸೇವೆ ಅನನ್ಯ

April 29, 2021

ಕೆ.ಆರ್.ಪೇಟೆ, ಏ.28(ಶ್ರೀನಿವಾಸ್)- ಗುಡಿ-ಗೋಪುರಗಳು ನಮ್ಮ ಸಂಸ್ಕøತಿ-ಪರಂಪರೆಯ ಪ್ರತೀಕಗಳಾಗಿದ್ದು, ಇವುಗಳನ್ನು ಪುನರುಜ್ಜೀವನಗೊಳಿಸಿ ಅಭಿವೃದ್ದಿಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ತಿಳಿಸಿದರು.

ತಾಲೂಕಿನ ಬೆಡದಹಳ್ಳಿಯಲ್ಲಿ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಪಾರ್ವತಿ-ಪರಮೇಶ್ವರರ ದೇವಾಲಯದ ಅಭಿವೃದ್ಧಿಗೆ ಧರ್ಮಸ್ಥಳದ ಧÀರ್ಮಾಧಿಕಾರಿಗಳಾದ ಪದ್ಮವಿಭೂಷಣ ಶ್ರೀ ವೀರೇಂದ್ರ ಹೆಗ್ಗಡೆ ಕೊಡುಗೆಯಾಗಿ ನೀಡಿ ರುವ ಎರಡು ಲP್ಷÀ ರೂಪಾಯಿಗಳ ಅನುದಾನದ ಮಂಜೂರಾತಿ ಆದೇಶ ಪತ್ರವನ್ನು ಶ್ರೀಮಠದ ಪೀಠಾಧ್ಯಕ್ಷ ರುದ್ರಮುನಿ ಗುರೂಜಿ ಅವರಿಗೆ ವಿತರಿಸಿ ಮಾತನಾಡಿದರು.
ಶ್ರೀ ಕ್ಷೇತ್ರದ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಲು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅಲ್ಲದೇ ಪ್ರತೀ ವರ್ಷ ತಾಲೂಕಿಗೆ ಒಂದು ಕೆರೆ ಅಭಿ ವೃದ್ದಿ ಮಾಡುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ. ತಾಲ್ಲೂ ಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ಮಾಡುತ್ತಿದ್ದಾರೆ. ದೇವಾಲಯಗಳ ಅಭಿವೃದ್ದಿಗೆ ನೆರವು ನೀಡುತ್ತಿದ್ದು, ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಶ್ರೀಕ್ಷೇತ್ರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಚಭೂತೇಶ್ವರÀ ಮಠದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಗುರೂಜಿ ಮಾತನಾಡಿ, 1ಲಕ್ಷ 96ಸಾವಿರ ಪುಟಗಳ ಬ್ರಹ್ಮಜ್ಞಾನ ಗ್ರಂಥವನ್ನು ರಚಿಸಿರುವ ಮಾದೇಶ್ ಗುರೂಜಿ (ವಿದ್ಯಾ ನಂದ ತೀರ್ಥರು) ಅವರ ಮಾರ್ಗ ದರ್ಶದಲ್ಲಿ ಶ್ರೀ ಕ್ಷೇತ್ರ ಪಂಚಭೂತೇಶ್ವರ ಕ್ಷೇತ್ರದಲ್ಲಿ ನಿತ್ಯ ದಾಸೋಹ ನಡೆಸ ಲಾಗುತ್ತಿದೆ. ಗೋಶಾಲೆ, ನವಗ್ರಹ ವನ, ಶ್ರೀ ಕ್ಷೇತ್ರದಲ್ಲಿ ಸುಮಾರು 30ಲಕ್ಷ ರೂ.ಗಳ ವೆಚ್ಚದಲ್ಲಿ ಶ್ರೀ ಪಂಚಭೂತೇಶ್ವರ ಮಠ ಹಾಗೂ ಪಾರ್ವತಿ ಪರಮೇಶ್ವರರ ದೇವಾಲಯ ನಿರ್ಮಿಸಲಾಗುತ್ತಿದ್ದು, ಧರ್ಮಸ್ಥಳ ಸಂಸ್ಥೆ 2ಲಕ್ಷ ಕೊಡುಗೆ ನೀಡಿದೆ. ಧರ್ಮಾಧಿಕಾರಿ ಶ್ರೀ ವೀರೇಂದ್ರಹೆಗ್ಗಡೆಯವರ ಸಹಕಾರಕ್ಕೆ ಪಂಚಭೂತೇಶ್ವರ ಟ್ರಸ್ಟ್ ಯಾವತ್ತಿಗೂ ಚಿರಋಣಿಯಾಗಿರುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಮತಾಶೆಟ್ಟಿ, ಭಾರತೀ ಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಬೆಡದಹಳ್ಳಿ ಸುನಿಲ್, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ತಾಲ್ಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರು ಕಾಡು ಮೆಣಸ, ಟ್ರಸ್ಟಿನ ಕಾರ್ಯದರ್ಶಿ ಕಾಂತರಾಜು, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಕೆ.ಎಸ್.ರವಿ ಚಂದ್ರ ಸೇರಿದಂತೆ ಬೆಡದಹಳ್ಳಿ ಶ್ರೀ ಕ್ಷೇತ್ರದ ಹಲವಾರು ಹಿತೈಷಿಗಳು ಭಾಗವಹಿಸಿದ್ದರು.

Translate »