ಶ್ರೀರಂಗಪಟ್ಟಣ ಕೋವಿಡ್ ಕೇಂದ್ರ ಪರಿಶೀಲಿಸಿದ ಶಾಸಕ
ಮಂಡ್ಯ

ಶ್ರೀರಂಗಪಟ್ಟಣ ಕೋವಿಡ್ ಕೇಂದ್ರ ಪರಿಶೀಲಿಸಿದ ಶಾಸಕ

April 29, 2021

ಶ್ರೀರಂಗಪಟ್ಟಣ, ಏ.28(ವಿನಯ್ ಕಾರೇಕುರ)- ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ವೈಯಕ್ತಿಕವಾಗಿ ಪಿಪಿಇ ಕಿಟ್, ಎನ್95 ಮಾಸ್ಕ್ ಸೇರಿದಂತೆ ಅಗತ್ಯ ಪರಿಕರಗಳನ್ನು ಉಚಿತವಾಗಿ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಸಿಬ್ಬಂದಿ ಗಳು ಹಾಗೂ ವೈದ್ಯರಿಂದ ಕೋವಿಡ್ ನಿಯಂತ್ರಣ ಸಂಬಂಧ ಚರ್ಚೆ ನಡೆಸಿ, ಆಂಬ್ಯುಲೆನ್ಸ್ ಹಾಗೂ ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಸೂಚನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಪರಿಕರಗಳ ಕೊರೆತೆ ಬಗ್ಗೆ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾಹಿತಿ ಪಡೆದಿದ್ದೆ, ಹಾಗಾಗಿ ಇವುಗಳನ್ನು ನೀಡಲಾಗಿದ್ದು, ಕೊರೊನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು, ಅನ ಗತ್ಯವಾಗಿ ಮನೆಯಿಂದ ಹೊರಬಾರದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೋವಿಡ್ ಕೇಂದ್ರಕ್ಕೆ ಭೇಟಿ : ನಂತರ ಪಟ್ಟಣದ ಮುಸ್ಲಿಂ ವಸತಿ ಶಾಲೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಕೊರೊನಾ ಸೋಂಕಿತರೊಂದಿಗೆ ಔಷಧ, ಕುಡಿಯುವ ಬಿಸಿ ನೀರು, ಸ್ವಚ್ಚತೆ ಹಾಗೂ ಊಟೋಪಚಾರ ಕುರಿತು ಮಾಹಿತಿ ಪಡೆದರು. ಸೋಂಕಿತರಿಗೆ ಪ್ರತಿನಿತ್ಯ ಬಿಸಿ ನೀರು, ಮೊಟ್ಟೆ, ಬಾಳೆಹಣ್ಣು, ದಾಳಿಂಬೆ ಹಣ್ಣು ವಾರದಲ್ಲ್ಲಿ ಎರಡು ದಿನ ಮಾಂಸ ಹಾರ ಊಟ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಸೋಂಕಿತರಿಗೆ ನೀಡುತ್ತಿಲ್ಲಾ, ಚಿಕಿತ್ಸೆ ಪಡೆದ ನಂತರ ವಾಪಸ್ ಮನೆಗೆ ತೆರಳಲು ಸೂಕ್ತ ವಾಹನದ ವ್ಯವಸ್ಥೆ ಇಲ್ಲಾ, ಜೊತೆಗೆ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವವರ ಜೊತೆ ನೂತನವಾಗಿ ಕೊಠಡಿಗೆ ಬಂದ ಸೋಂಕಿತರನ್ನು ಬಿಡುತ್ತಿ ದ್ದಾರೆ ಎಂದು ಸೋಂಕಿತರು ದೂರಿದರು. ಈ ವೇಳೆ ಸೋಂಕಿತರಿಗೆ ಸೂಕ್ತಸೌಲಭ್ಯಗಳನ್ನು ನೀಡುವಂತೆ ಆರೋಗ್ಯಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಾಕೀತು ಮಾಡಿದರು.

ನಾನು ಸಹ ಎರಡು ಬಾರಿ ಕೋವಿಡ್-19 ಒಳಗಾಗಿ ಗುಣಮುಖನಾಗಿದ್ದೇನೆ, ಯಾರೂ ಸಹ ಭಯ ಪಡುವ ಅಗತ್ಯವಿಲ್ಲ ಎಂದು ಸೋಂಕಿತರಿಗೆ ಧೈರ್ಯ ತುಂಬಿದರು. ಮುಂಜಾಗೃತ ಕ್ರಮವಾಗಿ ಪಕ್ಕದಲ್ಲಿರುವ ಮತ್ತೊಂದು ಕಟ್ಟಡವನ್ನು ಅಗತ್ಯ ಬೆಡ್‍ಗಳೊಂದಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ನೊಟೀಸ್ ಜಾರಿ ಮಾಡಿ : ಸೋಂಕಿತರು ಊಟ ಮಾಡಿ ಹೊರಗೆ ಹಾಕಿದ್ದ ತ್ಯಾಜ್ಯ ವನ್ನು ಗಮನಿಸಿದ ಶಾಸಕರು, ಪ್ರತಿ ನಿತ್ಯ ಕಸವನ್ನು ವಿಲೇವಾರಿ ಮಾಡಬೇಕು ಎಂದು ದೂರವಾಣಿ ಮೂಲಕ ಪುರಸಭೆ ಅಧಿ ಕಾರಿಗಳಿಗೆ ತಾಕೀತು ಮಾಡಿದರು. ಹಾಗೆಯೇ ಕೋವಿಡ್ ನಿಯಂತ್ರಣಕ್ಕೆ ನಿಯೋಜನೆಗೊಂಡಿ ರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗೈರು ಹಾಜರಾದರೆ ಅಥವ ಕೆಲಸದಲ್ಲಿ ಅಸಡ್ಡೆ ತೋರಿದರೆ ಅಂತವರಿಗೆ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಿ, ನೋಟಿಸ್ ಜಾರಿ ಮಾಡು ವಂತೆ ತಾಲೂಕು ಆಡಳಿತಕ್ಕೆ ಖಡಕ್ ಸೂಚನೆ ನೀಡಿದರು. ಇದೇ ವೇಳೆ ತಾ.ಪಂ ಇಓ ಬೈರಪ್ಪ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಾರುತಿ, ಕ್ಷೇತ್ರ ಆರೋಗ್ಯಾಧಿಕಾರಿ ಬೆನ್ನೂರು, ಹಿರಿಯ ಆರೋಗ್ಯ ಸಹಾಯಕ ಸಲೀಂಪಾಷ ಸೇರಿದಂತೆ ಇತರರು ಇದ್ದರು.

Translate »