ವೈದ್ಯಕೀಯ ಮೂಲಸೌಕರ್ಯ  ಕಲ್ಪಿಸಲು ಕೈಗಾರಿಕೆಗಳಿಗೆ ಡಿಸಿ ಮನವಿ
ಮೈಸೂರು

ವೈದ್ಯಕೀಯ ಮೂಲಸೌಕರ್ಯ ಕಲ್ಪಿಸಲು ಕೈಗಾರಿಕೆಗಳಿಗೆ ಡಿಸಿ ಮನವಿ

May 4, 2021

ಮೈಸೂರು, ಮೇ3(ಎಂಕೆ)- ಕೋವಿಡ್-19 ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಮತ್ತು ತಾಂತ್ರಿಕ ಸಲಕರಣೆ ಒದಗಿಸಲು ಸಿ.ಎಸ್.ಆರ್.ಯೋಜನೆಯಡಿ ಕೈಗಾರಿಕೆಗಳು ನೆರವಾಗುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಕೈಗಾರಿಕಾ ಪ್ರತಿನಿಧಿ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸಿ.ಎಸ್.ಆರ್. ಯೋಜನೆಯಡಿ ಹಲವು ಕೈಗಾರಿಕೆಗಳು ಮಾಸ್ಕ್, ಸ್ಯಾನಿಟೈಸರ್‍ಗಳನ್ನು ನೀಡಿವೆ. ಆದರೆ, ಈ ವರ್ಷ ಮಾಸ್ಕ್, ಸ್ಯಾನಿಟೈಸರ್‍ಗೆ ಬೇಡಿಕೆ ಇಲ್ಲ. ಬದಲಿಗೆ ವೈದ್ಯಕೀಯ ಮೂಲಸೌಕರ್ಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಮೈಸೂರಿನಲ್ಲಿ ಮೂರು ಕಡೆ ಆರಂಭಿಸಲಾಗುತ್ತಿರುವ ‘ಕೋವಿಡ್ ಮಿತ್ರ’ ಸಲಹಾ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್. ಮಂಜುನಾಥಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

Translate »