ಮೈಸೂರು ಕೈಗಾರಿಕೆಯಿಂದ ವೈದ್ಯಕೀಯ ಆಮ್ಲಜನಕ ಪೂರೈಕೆ
ಮೈಸೂರು

ಮೈಸೂರು ಕೈಗಾರಿಕೆಯಿಂದ ವೈದ್ಯಕೀಯ ಆಮ್ಲಜನಕ ಪೂರೈಕೆ

April 25, 2021

ಮೈಸೂರು,ಏ.24(ಎಸ್‍ಪಿಎನ್)-ಮೈಸೂರಿನ ಕೈಗಾರಿಕೆಗಳಿಗೆ ಮಾಮೂಲಿ ದಿನಗಳಲ್ಲಿ ನಿತ್ಯ 40-50 ಆಕ್ಸಿಜನ್ ಸಿಲಿಂಡರ್‍ಗಳ ಬೇಡಿಕೆ ಇರುತ್ತದೆ. ರಾಜ್ಯಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲೂ ಆಸ್ಪತ್ರೆಗಳಿಂದ ನಿತ್ಯ 50-60 (ಕೆ.ಬಿ) ಮೆಡಿಕಲ್ ಆಕ್ಸಿಜನ್ ಸಿಲಿಂಡರ್‍ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಪೀಣ್ಯಾ ಇಂಡಸ್ಟ್ರಿ ಯಲ್ ಗ್ಯಾಸ್ ಸಪ್ಲೈಯರ್ಸ್‍ನÀ ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ ಹರೀಶ್ ತಿಳಿಸಿದರು.

ಬೆಂಗಳೂರಿನ ಪೀಣ್ಯಾ ಕೈಗಾರಿಕೆ ಪ್ರದೇಶದಲ್ಲಿ ಕೇಂದ್ರ ಕಚೇರಿ, ಮೈಸೂರಿನಲ್ಲಿ ಶಾಖೆ ಇದೆ. ಸರ್ಕಾ ರದ ನಿರ್ದೇಶನದಂತೆ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ತಾತ್ಕಾಲಿಕವಾಗಿ ವಿತರಣೆ ಮಾಡ ಲಾಗುತ್ತಿದೆ. ಈ ಮೊದಲು ನಮ್ಮ ಕೇಂದ್ರದಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಕೆ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ಇನ್ನೂ ನಾಲ್ಕೈದು ವಿತರ ಕರು ಆಕ್ಸಿಜನ್ ಸಿಲಿಂ ಡರ್‍ಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಮೈಸೂರಲ್ಲಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್‍ಗೆ ಕೊರತೆಯಾಗಿಲ್ಲ ಎಂದರು.

ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿ ನಿಂದ ಬಂದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮೆಡಿಕಲ್ ಆಕ್ಸಿಜನ್ ಸಿಲಿಂಡರ್‍ಗೆ ಬೇಡಿಕೆ ಹೆಚ್ಚಾಗಿರಬಹುದು. ಆದರೆ, ಬೆಂಗಳೂರಿನಲ್ಲಿರುವಷ್ಟು ಇಲ್ಲ ಎಂದು ಹರೀಶ್ ಮಾಹಿತಿ ನೀಡಿದರು.

 

Translate »