ಮಂಡ್ಯದಲ್ಲಿ ಮೆಗಾ ಲೋಕ್ ಅದಾಲತ್; 21 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ
ಮಂಡ್ಯ

ಮಂಡ್ಯದಲ್ಲಿ ಮೆಗಾ ಲೋಕ್ ಅದಾಲತ್; 21 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ

August 20, 2021

ಮಂಡ್ಯ, ಆ.19(ಮೋಹನ್‍ರಾಜ್)- ಆಗಸ್ಟ್ 14ರಂದು ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‍ನಲ್ಲಿ ಒಟ್ಟು 30, 904 ಕೇಸ್‍ಗಳನ್ನು ಇತ್ಯರ್ಥಕ್ಕೆ ತೆಗೆದುಕೊಂ ಡಿದ್ದು, ಅವುಗಳಲ್ಲಿ 21 ಸಾವಿರಕ್ಕೂ ಹೆಚ್ಚು ಕೇಸುಗಳನ್ನು ಬಗೆಹರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ ರದ ಅಧ್ಯಕ್ಷ ಎಸ್.ಬಿ.ವಸ್ತ್ರಮಠ ಹೇಳಿದರು.

ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಟ್ಟಡದಲ್ಲಿ ಮೆಗಾ ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕುವಾರು ಕೋರ್ಟ್ ಗಳಲ್ಲಿ ಇದುವರೆಗೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 492 ಸಿವಿಲ್ ಪ್ರಕ ರಣಗಳು, 20,030 ಕ್ರಿಮಿನಲ್ ಕೇಸ್‍ಗಳು ಸೇರಿದಂತೆ ಇತರೆ ಪ್ರಕರಣಗಳನ್ನು ಬಗೆ ಹರಿಸಲಾಗಿದೆ ಎಂದರು.

ಮಂಡ್ಯ ನಗರ-11,963, ಮದ್ದೂರು-3014, ಮಳವಳ್ಳಿ-2020, ಶ್ರೀರಂಗಪಟ್ಟಣ- 2047, ಕೆ.ಆರ್ ಪೇಟೆ-2565, ನಾಗ ಮಂಗಲ-1242 ಹಾಗೂ ಪಾಂಡವಪುರ- 759 ಪ್ರಕರಣಗಳು, ಇವುಗಳೊಂದಿಗೆ ವಿಶೇಷ ಭೂಸ್ವಾಧೀನ ಪ್ರಕರಣಗಳು, ನೀರಿನ ಬಿಲ್, ಬ್ಯಾಂಕ್ ಸಾಲ ಮರುಪಾ ವತಿ, ಬಿಎಸ್‍ಎನ್‍ಎಲ್ ಬಿಲ್ ಪಾವತಿ ಇತ್ಯಾದಿಗಳನ್ನು ಕೂಡ ಇತ್ಯರ್ಥಗೊಳಿಸ ಲಾಗಿದೆ ಎಂದು ತಿಳಿಸಿದರು.

ನೀರಿನ ಬಿಲ್ ಪಾವತಿ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 11,000 ಜನರು ನೀರಿನ ಬಿಲ್ ಪಾವತಿಸಿಲ್ಲ. ಒಂದು ದಿನದಲ್ಲಿ 1000 ಜನರಿಗೆ ನೋಟಿಸ್ ನೀಡು ವಂತೆ 11 ದಿನದಲ್ಲಿ 11,000 ಜನರಿಗೆ ನೋಟಿಸ್ ನೀಡಲಾಗಿದ್ದು, ಅವರಿಗೆ ಬಿಲ್ ಪಾವತಿಸು ವಂತೆ ತಿಳುವಳಿಕೆ ನೀಡಲಾಗಿದೆ. ನೀರಿನ ವ್ಯಾಜ್ಯ ಸಂಬಂಧ ಬಂದ ದೂರುಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ತಿಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶೆ ಎ.ಎಂ. ನಳಿನಕುಮಾರಿ ಹಾಗೂ ವಾರ್ತಾಧಿಕಾರಿ ಟಿ.ಕೆ. ಹರೀಶ್ ಹಾಗೂ ಇತರರು ಉಪಸ್ಥಿತರಿದ್ದರು.

 

Translate »