ಗ್ರಾಮೀಣಾಭಿವೃದ್ಧಿಗೆ ಹಲವು ಯೋಜನೆಗಳು ಜಾರಿ
ಮಂಡ್ಯ

ಗ್ರಾಮೀಣಾಭಿವೃದ್ಧಿಗೆ ಹಲವು ಯೋಜನೆಗಳು ಜಾರಿ

August 20, 2021

ಪಾಂಡವಪುರ, ಆ.19- ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿ ಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೂಪಿಸಿ ಅನು ಷ್ಠಾನಗೊಳಿಸುತ್ತಿದ್ದು, ಅದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಹು ಮುಖ್ಯವಾ ಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಪಿ.ಮಹೇಶ್ ತಿಳಿಸಿದರು.

ಪಟ್ಟಣದಲ್ಲಿ ತಾಪಂ ಸಭಾಂಗಣದಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾ ಲಯ, ಜಿಲ್ಲಾ ಪಂಚಾಯತ್ ಸಹಯೋಗ ದೊಂದಿಗೆ ಸ್ವಸಹಾಯ ಸಂಘದ ಮಹಿಳಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿ ಸಿದ್ದ ಸಾಮಾಜಿಕ ಪರಿಶೋಧನೆ ಬಗ್ಗೆ ಎರಡು ದಿನದ ಕಾರ್ಯಾಗಾರದಲ್ಲಿ ಮಾತ ನಾಡಿದ ಅವರು, ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬದ ಸದಸ್ಯರಿಗೆ ಪ್ರತಿ ವರ್ಷ ಗರಿಷ್ಠ 100 ದಿನಗಳ ಉದ್ಯೋಗ ಖಾತರಿ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ವಸತಿ ಸೌಕರ್ಯ ಕಲ್ಪಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿ ಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸುರೇಂದ್ರ, ಸಾಮಾಜಿಕ ಪರಿಶೋಧನಾ ಜಿಲ್ಲಾ ಸಂಯೋಜಕ ಸುರೇಶ್, ತಾಲೂಕು ಸಂಯೋಜಕ ಧರ್ಮರಾಜ್, ನರೇಗಾ ಯೋಜನೆಯ ಸಿಬ್ಬಂದಿಗಳು, ಎನ್‍ಆರ್ ಎಲ್‍ಎಂ ಸಂಯೋಜಕರು ಉಪಸ್ಥಿತರಿದ್ದರು.

Translate »