ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟದಲ್ಲಿ ಎಂಇಪಿ
ಮೈಸೂರು

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟದಲ್ಲಿ ಎಂಇಪಿ

October 5, 2018

ಮೈಸೂರು:  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯು (ಎಐಎಂಇಪಿ) ರಾಜ್ಯದ ಎಲ್ಲಾ ಸಂಸತ್ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ ಎಂದು ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಷರೀಫ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ ಮೂಲದ ಡಾ.ನೌಹೀರಾ ಶೇಕ್ ಎಂಬ ಮಹಿಳೆ ಸ್ಥಾಪಿಸಿದ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿ ಸಿತ್ತು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ ತನ್ನದೇ ಗುರಿ, ಧ್ಯೇಯ ಹೊಂದಿರುವ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ ಎಂದರು. ಮಹಿಳೆಯರಿಗೆ ಶೆ.50ರಷ್ಟು ಮೀಸಲು, ಪ್ರತ್ಯೇಕ ಆಸ್ಪತ್ರೆ, ದೌರ್ಜನ್ಯ ತಡೆ ಕಾಯ್ದೆಗೆ ಸೂಕ್ತ ಕಾನೂನು, ಕೃಷಿಕರಿಗೆ ಕೃಷಿ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪಕ್ಷವನ್ನು ಸದೃಢಗೊಳಿಸ ಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಸೈಯ್ಯದ್ ಗಫಾರ್, ಶ್ರೀನಿವಾಸ್, ಶಾಂತಮ್ಮ, ನಾಜಿಯಾ ಇದ್ದರು.

Translate »