ಮೆಟ್ರೋ ಪ್ರಯಾಣ: ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ
ಮೈಸೂರು

ಮೆಟ್ರೋ ಪ್ರಯಾಣ: ಸೀಮಿತ ಪ್ರಯಾಣಿಕರು, ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ

August 31, 2020

ನವದೆಹಲಿ: ಕೊರೊನಾ ಸೋಂಕು ನಿವಾರಣೆಗೆ ಸರ್ಕಾರ ದೇಶಾದ್ಯಂತ ಕಳೆದ ಮಾರ್ಚ್‍ನಲ್ಲಿ 3 ವಾರಗಳ ಬಿಗಿ ಲಾಕ್‍ಡೌನ್ ಘೋಷಿಸಿ ನಂತರ ಹಂತಹಂತವಾಗಿ ಸಡಿಲ ಮಾಡುತ್ತಾ ಬಂದಿತು. ಇದೀಗ 5 ತಿಂಗಳ ನಂತರ ಬಹುತೇಕ ಚಟುವಟಿಕೆಗಳು ಹಿಂದಿನ ಸಹಜ ಸ್ಥಿತಿಗೆ ಬರುತ್ತಿದ್ದು, ಹಲವು ಸೇವೆಗಳು ಪುನರಾ ರಂಭಗೊಂಡಿವೆ. ದೇಶಾದ್ಯಂತ ಮೆಟ್ರೋ ಸೇವೆ ಸೆ.7ರಂದು ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕುರಿತು ದೆಹಲಿ ಮೆಟ್ರೋ ಮಾರ್ಗಸೂಚಿ ಹೊರಡಿಸಿದೆ.

ಮಾರ್ಗಸೂಚಿಯಲ್ಲಿ ಏನೇನಿದೆ?: ಸೆ.7ರಂದು ಮೆಟ್ರೋ ಸೇವೆ ಪುನರಾರಂಭಗೊಂಡ ನಂತರ ಮೆಟ್ರೋದಲ್ಲಿ ಪ್ರಯಾಣಿ ಸುವ ಪ್ರಯಾಣಿಕರಿಗೆ ಮಾಸ್ಕ್, ಸ್ಮಾರ್ಟ್ ಕಾರ್ಡ್ ಕಡ್ಡಾಯ ವಾಗಿರುತ್ತದೆ. ಟೋಕನ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ, ಪ್ರಯಾ ಣಿಕರು ಹಣ ನೀಡಲು ಸ್ಮಾರ್ಟ್ ಕಾರ್ಡ್ ಮತ್ತು ಇತರ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಪ್ರತಿ ಬೋಗಿ ಯಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಾರೆ. ಬೋಗಿಗಳ ಒಳಗೆ ಹೊರಗಿನ ಗಾಳಿ ಸಿಗಬೇಕಾಗಿರುವುದರಿಂದ ಹವಾನಿಯಂ ತ್ರಿತ ವ್ಯವಸ್ಥೆಯನ್ನು ಬಂದ್ ಮಾಡಲಾಗುತ್ತದೆ. ಪ್ರಮುಖ ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗುವುದಿಲ್ಲ. ಹಂತಹಂತ ವಾಗಿ ಮೆಟ್ರೋ ಸೇವೆ ಪುನರಾರಂಭವಾಗುತ್ತದೆ. ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗುತ್ತದೆ. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್‍ನ್ನು ಪಾಲಿಸಲಾಗು ತ್ತದೆ. ಕೈಗೆ ಸ್ಯಾನಿಟೈಸರ್ ಕೂಡ ಕಡ್ಡಾಯ. ಕಂಟೈನ್‍ಮೆಂಟ್ ವಲಯಗಳಲ್ಲಿನ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿ ಸುವುದಿಲ್ಲ. ಸದ್ಯಕ್ಕೆ ಕಾರ್ಯನಿರ್ವಹಿಸದ ಮೆಟ್ರೋ ನಿಲ್ದಾಣಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ತಿಳಿಸಿದ್ದಾರೆ.

Translate »