ಮೈಸೂರು ಭಾಗದಲ್ಲಿ ನ.2-3 ಹಗುರ ಮಳೆ ಸಾಧ್ಯತೆ
ಮೈಸೂರು

ಮೈಸೂರು ಭಾಗದಲ್ಲಿ ನ.2-3 ಹಗುರ ಮಳೆ ಸಾಧ್ಯತೆ

October 30, 2020

ಮೈಸೂರು,ಅ.29(ಆರ್‍ಕೆಬಿ)- ಮುಂದಿನ 5 ದಿನ (ನ.3 ರವರೆಗೆ) ಮೈಸೂರು, ಮಂಡ್ಯ, ಕೊಡಗು, ಚಾಮ ರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾ ವರಣವಿರಲಿದೆ. ನ.2-3ರಂದು ಚದುರಿದಂತೆ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಮೈಸೂರು, ಚಾ.ನಗರ ಜಿಲ್ಲೆಗಳಲ್ಲಿ ಗರಿಷ್ಠ 30, ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕೊಡಗಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 18-19 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 19-20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ನಾಗನಹಳ್ಳಿ ಕೃಷಿ ಹವಾ ಮಾನ ಕ್ಷೇತ್ರ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

 

Translate »