ಬೆಂಗಳೂರು, ಜ.18 (ಕೆಎಂಶಿ)- ಹಾಲಿನ ದರವನ್ನು ಪ್ರತಿ ಲೀಟರ್‍ಗೆ 3 ರೂ. ಹೆಚ್ಚಳ ಮಾಡಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ತೀರ್ಮಾನಿಸಿದೆ. ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಲು ದರ ಹೆಚ್ಚಳ ಮಾಡಲು ತೆಗೆದುಕೊಂಡಿರುವ ತೀರ್ಮಾ ನಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಾಯಲಾಗಿದೆ. ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಒಕ್ಕೂಟದ ನಿರ್ಧಾರವನ್ನು ತಿಳಿಸಿದ್ದಲ್ಲದೆ, ಪ್ರತಿ ಲೀಟರ್‍ಗೆ 3 ರೂ. ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಹೆಚ್ಚಳ ಮಾಡುವ ಹಣದಲ್ಲಿ ಬಹುಪಾಲು ಹೈನುಗಾರಿಕೆ ಮಾಡುವ ರೈತರಿಗೆ ನೀಡಲಾಗುವುದು ಎಂಬುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ. ರಾಷ್ಟ್ರದ ಇತರೆ ರಾಜ್ಯಗಳಿಗೆ ಹೋಲಿಸಿ ದರೆ, ಹಾಲಿನ ದರ ರಾಜ್ಯದಲ್ಲಿ ಅತೀ ಕಡಿಮೆ ಇದೆ. ಪ್ರತಿ ಲೀಟರ್‍ಗೆ 3 ರೂ. ದರ ಏರಿಕೆ ಮಾಡಿದರೆ ರೈತರಿಗೂ ಅನುಕೂಲ, 14 ಒಕ್ಕೂಟಗಳ ಉಳಿವಿಗೂ ಸಹಕಾರಿ ಯಾಗಲಿದೆ ಎಂದು ತಿಳಿಸಿದ್ದಾರೆ. ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ ಸೇರಿದಂತೆ ಹಲವು ಕಾರಣಗಳನ್ನು ನೀಡಿ, ಬೆಲೆ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿದೆ.