ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ
ಮೈಸೂರು

ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ

November 25, 2021

ಮೈಸೂರು,ನ.೨೪(ಪಿಎಂ)- ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಮನಸ್ಸು ನಮ್ಮ ೬ನೇ ಇಂದ್ರಿಯ ಎಂದು ಉಲ್ಲೇಖಿಸಿದ್ದು, ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ ಎಂದು ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ.ಮಂಜಪ್ಪ ಡಿ.ಹೊಸಮನೆ ಹೇಳಿದರು.

ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾಲೇಜು ಸಹಾಯಕ ಪ್ರಾಧ್ಯಾ ಪಕರ ಹುದ್ದೆಗಳ ನೇಮಕಾತಿ ಪರೀಕ್ಷೆ ಸಂಬAಧ ಮುಕ್ತ ವಿವಿಯಲ್ಲಿ ಹಮ್ಮಿಕೊಂಡಿರುವ ಉಚಿತ ತರಬೇತಿ ಶಿಬಿರಕ್ಕೆ ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಚಾಲನೆ ನೀಡಿ, ಮಾತನಾಡಿದರು.

ಕಲಿಕಾ ಪ್ರಕ್ರಿಯೆಯಲ್ಲಿ ಮನಸ್ಸಿನ ನಿಯಂತ್ರಣ ಮುಖ್ಯ. ನಮ್ಮ ಮನಸ್ಸಿನಲ್ಲಿ ಯಾವಾಗಲೂ ಆಲೋಚನೆಗಳು ಇರುತ್ತವೆ. ಒಂದು ಅಧ್ಯಯನದ ಅಂದಾಜಿನ ಪ್ರಕಾರ ಮಾನವನ ಮನಸ್ಸಿನಲ್ಲಿ ಪ್ರತಿದಿನ ೩೦ ಸಾವಿರ ಆಲೋ ಚನೆಗಳು ಬರುತ್ತವೆ. ಯಾವುದನ್ನು ಮಾಡಿದರೆ ಪ್ರಯೋಜನವಿಲ್ಲವೋ ಅದನ್ನೇ ಮಾಡುವಂತೆ ಪ್ರಚೋದಿಸುವುದು ಮನಸ್ಸಿನ ಸಹಜ ಗುಣ. ಆದ್ದ ರಿಂದ ಮನಸ್ಸಿನ ಅನಗತ್ಯ ಆಲೋಚನೆಗಳನ್ನು ನಿಯಂ ತ್ರಿಸುವುದು ಮುಖ್ಯ. ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಮನಸ್ಸು ನಮ್ಮ ೬ನೇ ಇಂದ್ರಿಯ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ನಾವು ಹುಟ್ಟುತ್ತಲೇ ಎಲ್ಲಾ ಜ್ಞಾನ ಹೊಂದಿರುವುದಿಲ್ಲ. ಪೋಷಕರು ಬಾಲ್ಯ ಜೀವನದಲ್ಲಿ ಅಂದಿಗೆ ಅಗತ್ಯ ಜ್ಞಾನ ವನ್ನು ನೀಡುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ಬಾಲ್ಯ ಜೀವನದಲ್ಲಿ ತಾಯಿ-ತಂದೆ, ಪ್ರಕೃತಿ-ಪರಿಸರದಿಂದಲೇ ತರಬೇತಿ ಲಭ್ಯವಾಗಿರುತ್ತದೆ. ಬೆಂಕಿಗೆ ಕೈ ಹಾಕಿದರೆ ಅದು ಸುಡುತ್ತದೆ ಎಂದು ತಾಯಿ ಹೇಳಿದ್ದನ್ನು ಯಾರೂ ಮರೆಯುವುದಿಲ್ಲ. ಇಂತಹ ಹಲವು ವಿಚಾರಗಳನ್ನು ಪ್ರತಿಯೊಬ್ಬರು ಇಂದಿಗೂ ಪಾಲನೆ ಮಾಡುತ್ತಾರೆ. ಆದರೆ ಬೆಳೆಯುತ್ತಿದ್ದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾದ ಬಳಿಕ ಪರೀಕ್ಷೆಗಾಗಿ ಕಲಿತ ವಿಚಾರಗಳನ್ನು ಬಹುತೇಕರು ಮರೆಯುತ್ತಾರೆ. ಆದರೆ ಇದು ಆಗಬಾರದು ಎಂದು ಸಲಹೆ ನೀಡಿದರು.
ನೀವು ನಿಮ್ಮ ಮನಸ್ಸು ನಿಯಂತ್ರಿಸಿದರೆ, ನಕಾರಾ ತ್ಮಕ ಚಿಂತನೆಗಳಿAದ ದೂರವಿರಬಹುದು. ಮನಸ್ಸಿನ ನಿಯಂತ್ರಣ ತಂತಾನೆ ಬರುವುದಿಲ್ಲ. ಅದನ್ನು ತರ ಬೇತಿಗೊಳಿಸಬೇಕು. ಮನಸ್ಸಿಗೆ ಸೂಕ್ತ ತರಬೇತಿ ಬೇಕು. ಮನಃಪೂರ್ವಕ ಅಭ್ಯಾಸ ಮಾಡಿದರೆ ಕಲಿಕೆಯಲ್ಲಿ ತೃಪ್ತಿ ಹೊಂದಬಹುದು. ಮನಸ್ಸಿಗೆ ಕೌಶಲ್ಯ ನೀಡದಿ ದ್ದರೆ ಪ್ರಯೋಜನವಿಲ್ಲ. ಮನಸ್ಸು ಪ್ರಕ್ರಿಯೆಯ ಮೂಲ ಶಕ್ತಿ. ಅರ್ಥ ಮಾಡಿಕೊಳ್ಳುವುದು, ವಿಮರ್ಶೆ ಮಾಡು ವುದು ಮತ್ತು ನಿರ್ಧರಿಸುವುದು ಮನಸ್ಸಿನ ಕೆಲಸ. ಈ ಮೂರು ಅಂಶಗಳು ಸೂಕ್ತವಾಗಿರುವುದು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಮಾತನಾಡಿ, ಸುದ್ದಿ ಪತ್ರಿಕೆಗಳನ್ನು ಪ್ರತಿ ದಿನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎಲ್ಲಾ ರಂಗದ ಸುದ್ದಿಗಳನ್ನು ಅವಲೋಕಿಸಬೇಕು. ಪ್ರತಿಯೊಬ್ಬ ಪ್ರಜೆಗೂ ಇದು ಅವಶ್ಯಕ. ಈ ರೀತಿಯಲ್ಲಿ ಸಾಮಾನ್ಯ ಜ್ಞಾನ ಪಡೆಯಬೇಕೇ ಹೊರತು ಅದು ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ. ಇಂದು ಪಡೆಯುವ ತರಬೇತಿ ಪ್ರಯೋಜನವಾಗಲಿದೆ. ಸೂಕ್ತ ರೀತಿಯಲ್ಲಿ ಪರೀಕ್ಷೆ ಎದುರಿಸುವ ವಿಧಾನ ತರಬೇತಿಯಿಂದ ಲಭ್ಯ ವಾಗಲಿದೆ. ಭಾವಿ ಶಿಕ್ಷಕರಾಗಲು ಹೊರಟಿರುವ ತಾವು ಜ್ಞಾನ ಮತ್ತು ಮಾಹಿತಿ ನವೀಕರಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಂದು ತಿಂಗಳ ಈ ತರಬೇತಿ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ ೧೦೦ಕ್ಕೂ ಅಭ್ಯರ್ಥಿಗಳು ಪಾಲ್ಗೊಂಡಿ ದ್ದಾರೆ. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿವಿ ಕುಲಸಚಿವ ಪ್ರೊ. ಆರ್.ರಾಜಣ್ಣ, ಹಣಕಾಸು ಅಧಿಕಾರಿ ಎ.ಖಾದರ್‌ಪಾಷ, ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಜರಿದ್ದರು.

Translate »