ರಂಗ ಕಾರ್ಯಾಗಾರ ಪೂರ್ಣ: ಇಂದು, ನಾಳೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ
ಮೈಸೂರು

ರಂಗ ಕಾರ್ಯಾಗಾರ ಪೂರ್ಣ: ಇಂದು, ನಾಳೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ

November 25, 2021

ಮೈಸೂರು, ನ.೨೪(ಎಂಟಿವೈ)- ರಂಗ ದಿಗ್ಗಜರಾದ ಸುಬ್ಬಯ್ಯ ನಾಯ್ಡು ಹಾಗೂ ಪದ್ಮಶ್ರೀ ನಾಗರತ್ನಮ್ಮ ಅವರ ಹೆಸರಿನಲ್ಲಿ ಹವ್ಯಾಸಿ ರಂಗಕರ್ಮಿಗಳಿಗೆ ಆಯೋಜಿಸಿದ್ದ ರಂಗ ಕಾರ್ಯಾ ಗಾರ ಪೂರ್ಣಗೊಂಡಿದ್ದು, ನ.೨೫, ೨೬ರಂದು ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ರಂಗಾಯಣದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ಭೂಮಿಗೀತದಲ್ಲಿ ನ.೨೫ರಂದು ಸಂಜೆ ೬.೩೦ಕ್ಕೆ ಸುಬ್ಬಯ್ಯ ನಾಯ್ಡು ರಂಗ ಕಾರ್ಯಾಗಾರದ ಶಿಬಿರಾರ್ಥಿ ಗಳು ಸಾರಾ ಅಬೂಬಕರ್ ಅವರ `ಚಂದ್ರಗಿರಿಯ ತೀರದಲ್ಲಿ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಎಸ್.ರಾಮು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಈ ನಾಟಕಕ್ಕೆ ಮುಖ್ಯ ಅತಿಥಿಯಾಗಿ ರಂಗಕರ್ಮಿ ನಂದಾ ಹಳೆಮನೆ ಭಾಗವಹಿಸುವರು ಎಂದರು.
ನ.೨೬ರAದು ಸಂಜೆ ೬.೩೦ಕ್ಕೆ ಪದ್ಮಶ್ರೀ ಆರ್.ನಾಗರತ್ನಮ್ಮ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಚಿತ್ರಪಟ ನಾಟಕವನ್ನು ಜೀವನ್ ಕುಮಾರ್ ಬಿ.ಹೆಗ್ಗೋಡು ನಿರ್ದೇಶನದಲ್ಲಿ ಪ್ರದರ್ಶಿಸಲಿದ್ದು, ನಟ ಶಿವಾಜಿ ರಾವ್ ಜಾಧವ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಸಕ್ತ ಸಾಲಿನ ಬಹುರೂಪಿ ನಾಟಕೋತ್ಸವದಲ್ಲೂ ಈ ಎರಡು ನಾಟಕ ಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು. ರಂಗಾಯಣವು ಹವ್ಯಾಸಿ ಕಲಾವಿದರಿಗಾಗಿ ಸುಬ್ಬಯ್ಯ ನಾಯ್ಡು ಮತ್ತು ಪದ್ಮಶ್ರೀ ಆರ್.ನಾಗ ರತ್ನಮ್ಮ ರಂಗ ಕಾರ್ಯಾಗಾರವನ್ನು ಕಳೆದ ಸಾಲಿನಲ್ಲಿ ಆರಂಭಿ ಸಿತ್ತು. ಈ ಬಾರಿ ಸೆ.೧ರಿಂದ ನಡೆಸಿದ್ದು, ೩೫ ಮಂದಿ ಭಾಗವಹಿಸಿ ದ್ದರು. ಇದು ೨ನೇ ಬ್ಯಾಚ್ ಎಂದು ತಿಳಿಸಿದರು.
ಪರ್ವ ಪ್ರದರ್ಶನ: ರಂಗಾಯಣ ಭೂಮಿಗೀತದಲ್ಲಿ ನ.೨೮ರಂದು ಬೆಳಗ್ಗೆ ೧೦.೩೦ಕ್ಕೆ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕ ಪ್ರದ ರ್ಶನ ನಡೆಯಲಿದೆ. ಡಿ.೧೦ರಿಂದ ಆರಂಭವಾಗಲಿರುವ ಬಹುರೂಪಿ ನಾಟಕೋತ್ಸವದಲ್ಲಿ ಪುಸ್ತಕ, ಕರಕುಶಲ ಹಾಗೂ ಆಹಾರ ಮಳಿಗೆಗಳು ಭಾಗವಹಿಸಲು ಅರ್ಜಿ ಆಹ್ವಾನಿಸಿದೆ ಎಂದರು. ಗೋಷ್ಠಿಯಲ್ಲಿ ರಂಗಾ ಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಾಟಕದ ನಿರ್ದೇಶಕರಾದ ರಾಮು, ಜೀವನ್‌ಕುಮಾರ್ ಹೆಗ್ಗೋಡು ಇದ್ದರು.

Translate »