ನಾಳೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ
ಮೈಸೂರು

ನಾಳೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ

November 25, 2021

ಮೈಸೂರು, ನ.೨೪(ಎಂಟಿವೈ)-ಮೈಸೂರು ವಿಶ್ವವಿದ್ಯಾನಿಲಯದ ರಾಣ ಬಹ ದ್ದೂರ್ ಸಭಾಂಗಣದಲ್ಲಿ ನ.೨೬ರಂದು ಸಂಜೆ ೪ಕ್ಕೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿ ಗಳ ಜಾಗತಿಕ ಸಮಾವೇಶ ಹಾಗೂ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಸಂತಕುಮಾರ್ ತಿಮಕಾಪುರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಸಮಾವೇಶ ದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪದ್ಮಶ್ರೀ ಡಾ.ವಿ.ಪ್ರಕಾಶ್(ವಿಜ್ಞಾನ ಮತ್ತು ತಂತ್ರಜ್ಞಾನ), ಪ್ರೊ. ಚಿದಾನಂದಗೌಡ(ಆಡಳಿತ), ಡಾ.ಸಿ.ಎಲ್.ಲಕ್ಷಿ÷್ಮÃಪತಿಗೌಡ(ಕೃಷಿ ವಿಜ್ಞಾನ), ಡಾ. ಸಿ.ಡಿ.ಶ್ರೀನಿವಾಸಮೂರ್ತಿ(ವೈದ್ಯಕೀಯ), ಪ್ರೊ.ಡಿ.ವಿ.ರವಿಶಂಕರ್(ಸಾಹಿತ್ಯ), ರವಿ ಕುಮಾರ್ ಜೋಶಿ(ವಿದೇಶ ಸೇವೆ), ಅಬ್ಬಾಸ್ ಸಾಲೇಬಾಯ್ ವಾಘ್(ಕೈಗಾರಿಕೆ), ಹೆಚ್.ಆರ್.ಲೀಲಾವತಿ(ಸಂಗೀತ ಮತ್ತು ಕಲೆ) ಅವರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ನೀಡಲಾಗುವುದು ಎಂದರು. ಗೋಷ್ಠಿಯಲ್ಲಿ ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕ ರಾದ ಪ್ರೊ.ಕೆ.ಟಿ.ವೀರಪ್ಪ, ಪ್ರೊ.ಆರ್.ಎನ್.ಪದ್ಮನಾಭ, ರೆಜಿನಾಲ್ಡ್ ವೆಸ್ಲಿ ಇದ್ದರು.

Translate »