ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ
ಮೈಸೂರು

ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ

December 18, 2021

ಮೈಸೂರು, ಡಿ. ೧೭(ಆರ್‌ಕೆ)- ನಂದಿನಿ ಹೆಸರಲ್ಲಿ ನಕಲಿ ತುಪ್ಪ ತಯಾರಿಕೆಯಲ್ಲಿ ಮೈಮುಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವುದು ದೃಢಪಟ್ಟಲ್ಲಿ ಅವರ ವಿರುದ್ಧ ನಿರ್ಧಾ ಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.
ಮೈಸೂರಿನ ಹೊರವಲಯದ ಹೊಸಹುಂಡಿ ಗ್ರಾಮದ ಬಳಿ ಗೋದಾಮೊಂದರಲ್ಲಿ ವಿಶ್ವಾಸಾರ್ಹ ನಂದಿನಿ ತುಪ್ಪವನ್ನು ಕಲಬೆರಕೆ ಮಾಡುತ್ತಿದ್ದ ಘಟಕ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸಿಬ್ಬಂದಿ, ನೌಕರರು ಅಥವಾ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿ ರುವುದು ಕಂಡುಬAದಲ್ಲಿ ಅವರು ಎಷ್ಟೇ

ಪ್ರಭಾವ ಶಾಲಿಯಾಗಿದ್ದರೂ, ಕರ್ತವ್ಯದಿಂದ ವಜಾಗೊಳಿಸಿ, ಜೈಲಿಗೆ ಕಳಿಸುವುದು ಖಚಿತ ಎಂದರು.
ನAದಿನಿ ಹೆಸರಲ್ಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ಗೋದಾಮಿಗೆ ಇಂದು ಭೇಟಿ ನೀಡಿ ಪರಿಶೀಲಿಸಿ ದ್ದೇವೆ. ಸ್ಥಳದಲ್ಲಿ ನಂದಿನಿ ತುಪ್ಪದ ಟಿನ್, ಸ್ಯಾಚೆಟ್, ಸ್ಯಾಚೆಟ್ ತಯಾರಿಕಾ ಯಂತ್ರ, ಅಸಲಿ ನಂದಿನಿ ತುಪ್ಪ, ತೂಕದ ಯಂತ್ರಗಳು ಪತ್ತೆಯಾಗಿದ್ದು, ಅಲ್ಲಿಯ ವಸ್ತುಗಳನ್ನು ನೋಡಿದಾಗ ಮೈಮುಲ್ ಸಿಬ್ಬಂದಿಯ ಕೈವಾಡವಿರುವ ಶಂಕೆ
ಮೇಲ್ನೋಟಕ್ಕೆ ಮೂಡುತ್ತದೆಯಾದರೂ, ತನಿಖೆಯಿಂದ ದೃಢಪಡಬೇಕಾಗಿದೆ ಎಂದು ಅಧ್ಯಕ್ಷರು ನುಡಿದರು. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ಕ್ರೆöÊಂ ತಂಡವು ತನಿಖೆ ಕೈಗೊಂಡಿದೆ. ಗೋದಾಮಿಗೆ ಬೀಗಮುದ್ರೆ ಮಾಡಲಾಗಿದೆ. ಸ್ಥಳದಲ್ಲಿ ಲಭ್ಯವಾದ ದಾಖಲಾತಿಗಳ ಆಧಾರದ ಮೇಲೆ ಮುರುಗೇಶ, ಪತ್ನಿ ಅಶ್ವಿನಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಪ್ರಸನ್ನ ತಿಳಿಸಿದರು.

ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರದ ಮಟ್ಟದಲ್ಲಿ ಉನ್ನತ ತನಿಖೆ ಮಾಡಬೇಕೆಂದು ಮನವಿ ಮಾಡಲಾಗಿದೆ. ಆಹಾರ ಸಂರಕ್ಷಣಾ ಪ್ರಾಧಿಕಾರಕ್ಕೂ ನಕಲಿ ತುಪ್ಪದ ಮಾದರಿ ಕಳುಹಿಸಿ ಪರೀಕ್ಷೆ ಮಾಡಿಸುತ್ತಿದ್ದೇವೆ. ಅಲ್ಲಿ ತಯಾರಾದ ತುಪ್ಪ ಎಲ್ಲೆಲ್ಲಿ ಸಪ್ಲೆöÊ ಆಗುತ್ತಿತ್ತು? ಬಳಕೆ ಯಾರು ಮಾಡುತ್ತಿದ್ದರು ಎಂಬುದರ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಮೇಲ್ನೋಟಕ್ಕೆ ಅಸಲಿ ನಂದಿನಿ ತುಪ್ಪಕ್ಕೆ ಪಾಮ್ ಆಯಿಲ್, ಡಾಲ್ಡಾ, ಸುವಾಸನೆಗಾಗಿ ಇನ್ನಿತರ ರಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಿ, ನಕಲಿ ತುಪ್ಪ ತಯಾರಿಸಿ ಬಲ್ಕ್ ಆಗಿ ಖರೀದಿಸುವ ಸ್ವೀಟ್ ಅಂಗಡಿ, ಬೇಕರಿ, ದೊಡ್ಡ ದೊಡ್ಡ ದಿನಸಿ ಅಂಗಡಿಗಳು, ಕೆಲ ಕೇಟರಿಂಗ್ ಯೂನಿಟ್ ಮತ್ತು ಅಡುಗೆ ಕಂಟ್ರಾö್ಯಕ್ಟರ್‌ಗಳಿಗೂ ಪೂರೈಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಪ್ರಸನ್ನ ತಿಳಿಸಿದರು.

ಈ ಪ್ರಕರಣ ಬೆಳಕಿಗೆ ಬಂದ ನಂತರ ಮೈಮುಲ್‌ನಲ್ಲಿ ಒಂದು ವಿಚಕ್ಷಕ ದಳ (ವಿಜಿಲೆನ್ಸ್ ಟೀಂ) ರಚಿಸಿ ಎಲ್ಲಾ ನಂದಿನಿ ಹಾಲಿನ ಬೂತ್‌ಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ತಾಕೀತು ಮಾಡಿದ್ದೇವೆ. ನಂದಿನಿ ಉತ್ಪನ್ನಗಳ ಮೇಲೆ ಜನರಿಗಿರುವ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಸಂಸ್ಥೆಯು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು. ರೈತರು, ಗ್ರಾಹಕರು ಮೈಮುಲ್‌ನ ಎರಡು ಕಣ್ಣುಗಳಿದ್ದಂತೆ. ಎಂದಿಗೂ ಅವರಿಗೆ ವಂಚನೆಯಾಗಬಾರದು, ಹಿಂದಿನಿAದ ಉಳಿಸಿಕೊಂಡು ಬಂದಿರುವ ಗುಣಮಟ್ಟ, ಸಮಯ ಪಾಲನೆ, ಕ್ಷಿಪ್ರ ಸೇವೆಯಂತಹ ಕಾರ್ಯ ಚಟುವಟಿಕೆಗಳು ಮುಂದೆಯೂ ಮುಂದುವರೆಯಲಿದೆ. ಸಾರ್ವಜನಿಕರು ಮೈಮುಲ್ ಉತ್ಪನ್ನಗಳ ಬಗ್ಗೆ ಅನುಮಾನ ಪಡದೇ ಎಂದೆAದಿಗೂ ಅದೇ ವಿಶ್ವಾಸವಿರಿಸಿ ಕೊಳ್ಳಬೇಕೆಂದೂ ಪ್ರಸನ್ನ ಇದೇ ವೇಳೆ ಮನವಿ ಮಾಡಿದ್ದಾರೆ.

Translate »