ಇಂದು ಮೈಸೂರು ನಗರದ ವಿವಿಧ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ
ಮೈಸೂರು

ಇಂದು ಮೈಸೂರು ನಗರದ ವಿವಿಧ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ

January 19, 2021

ಮೈಸೂರು, ಜ.18(ಪಿಎಂ)- ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಮೈಸೂರು ನಗರದಲ್ಲಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 9ಕ್ಕೆ ವಿಜಯನಗರ ಬಡಾವಣೆಯಲ್ಲಿ ವಾಟರ್ ಟ್ಯಾಂಕ್‍ಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಬಡಾವಣೆ ವೀಕ್ಷಣೆ ಮಾಡುವರು. ಬೆಳಗ್ಗೆ 10ಕ್ಕೆ ವಿಜಯ ನಗರ ಬಡಾವಣೆ ನಿವಾಸಿಗಳೊಂದಿಗೆ ಸಂವಾದ ನಡೆಸುವರು. ಬೆಳಗ್ಗೆ 10.30ಕ್ಕೆ ಆರ್.ಟಿ.ನಗರ ಬಡಾವಣೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಬೆಳಗ್ಗೆ 11.30ಕ್ಕೆ ಇಲ್ಲಿನ ನಾಗರಿಕರೊಂದಿಗೆ ಸಂವಾದ ನಡೆಸುವರು.

ಬೆಳಗ್ಗೆ 12.30ಕ್ಕೆ ಶಾಂತವೇರಿ ಗೋಪಾಲಗೌಡನಗರ ಬಡಾವಣೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುವರು. ಮಧ್ಯಾಹ್ನ 01.15ಕ್ಕೆ ಈ ಬಡಾವಣೆ ನಾಗರಿಕರೊಂದಿಗೆ ಸಂವಾದ ನಡೆಸುವರು. ಮಧ್ಯಾಹ್ನ 2.30ಕ್ಕೆ ಮೈಸೂರು ನಿರ್ಗಮಿಸುವ ಸಚಿವರು, ಮಧ್ಯಾಹ್ನ 3ಕ್ಕೆ ಟಿ.ನರಸೀಪುರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಶಾಖೆಗೆ ಭೇಟಿ ನೀಡುವರು. ಸಂಜೆ 4ಕ್ಕೆ ಟಿ.ನರಸೀಪುರ ಬಿಜೆಪಿ ಕಚೇರಿಗೆ ಭೇಟಿ ನೀಡುವರು. ಸಂಜೆ 5ಕ್ಕೆ ಮಳವಳ್ಳಿ, ಕೆ.ಎಂ. ದೊಡ್ಡಿ, ಮದ್ದೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

 

Translate »