ಬಂಡೀಪುರ ವ್ಯಾಪ್ತಿಯ ವಿವಿಧ ಗಿರಿಜನ ಹಾಡಿ, ಕಾಡಂಚಿನ ಗ್ರಾಮಗಳಿಗೆ ಸಚಿವ ಉಮೇಶ ವಿ.ಕತ್ತಿ ಭೇಟಿ
ಚಾಮರಾಜನಗರ

ಬಂಡೀಪುರ ವ್ಯಾಪ್ತಿಯ ವಿವಿಧ ಗಿರಿಜನ ಹಾಡಿ, ಕಾಡಂಚಿನ ಗ್ರಾಮಗಳಿಗೆ ಸಚಿವ ಉಮೇಶ ವಿ.ಕತ್ತಿ ಭೇಟಿ

August 27, 2021

ಚಾಮರಾಜನಗರ, ಆ.೨೬- ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ವಿ.ಕತ್ತಿ ಗುರುವಾರ ಬಂಡೀ ಪುರ ರಾಷ್ಟಿçÃಯ ಉದ್ಯಾನವನದ ವಿವಿಧ ಪ್ರದೇಶ ಗಳು, ಗಿರಿಜನ ಹಾಡಿಗಳು ಹಾಗೂ ಕಾಡಂ ಚಿನ ಗ್ರಾಮಗಳಿಗೆ ಭೇಟಿ ನೀಡಿ, ಜನ ರಿಂದ ಅಹವಾಲುಗಳನ್ನು ಆಲಿಸಿದರು.
ಗುಂಡ್ಲುಪೇಟೆ ತಾಲೂಕಿನ ಮೇಲು ಕಾಮನಹಳ್ಳಿ ಗಿರಿಜನ ಕಾಲೊನಿಗೆ ಭೇಟಿ ನೀಡಿದ ಸಚಿವರು ಸಮರ್ಪಕವಾಗಿ ಪಡಿ ತರ ಪೂರೈಕೆಯಾಗುತ್ತಿದೆಯೇ, ಎಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ವಿತರಣೆ ಯಾಗುತ್ತಿದೆ ಎಂಬ ಬಗ್ಗೆ ಜನರನ್ನು ಪ್ರಶ್ನಿಸಿ ತಿಳಿದುಕೊಂಡರು.

ಇದೇ ವೇಳೆ ಆಧಾರ್ ಲಿಂಕ್ ಸಮಸ್ಯೆಯಿಂ ದಾಗಿ ಕೆಲವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ, ಕೆವೈಸಿ ಇನ್ನೂ ಆಗದ ಕಾರಣದಿಂದ ಪಡಿತರ ಪಡೆದುಕೊಳ್ಳಲು ಸಾಧ್ಯವಾಗದಿರುವ ಕುರಿತು ಸ್ಥಳೀಯರು ಸಚಿವರ ಗಮನ ಸೆಳೆದರು.

ಇದೇ ವೇಳೆ ಸಚಿವರು ತಕ್ಷಣವೇ ಆಧಾರ್ ಲಿಂಕ್‌ಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಆಧಾರ್ ಸೌಲಭ್ಯ ಇಲ್ಲದವರಿಗೆ ಹತ್ತಿರದಲ್ಲೇ ಅಗತ್ಯವಿರುವ ಅನುಕೂಲ ಕಲ್ಪಿಸಬೇಕು. ಆಧಾರ್ ಜೋಡಣೆ, ಕೆವೈಸಿ ಯಾವುದೇ ಪ್ರಕ್ರಿಯೆ ಇರಲಿ ತುರ್ತಾಗಿ ಸ್ಪಂದಿಸಿ ಪಡಿತರ ಪಡೆಯಲು ಎಲ್ಲಾ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿಪಡಿಸಿ ರುವ ಪ್ರಮಾಣದಲ್ಲಿ ಪಡಿತರ ವಿತರಣೆ ಮಾಡಬೇಕು. ಯಾವುದೇ ಲೋಪಕ್ಕೆ ಅವ ಕಾಶವಾಗಬಾರದು ಎಂದು ಸೂಚಿಸಿದರು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ನಿರ್ಮಿಸಲಾಗಿ ರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸ ಬೇಕು ಹಾಗೂ ಶೌಚಾಲಯ ನಿರ್ಮಿಸಿ ಕೊಡಬೇಕು ಎಂದು ಸಚಿವ ಉಮೇಶ ಕತ್ತಿ ಆದೇಶಿಸಿದರು. ಮಗುವಿನಹಳ್ಳಿಗೂ ಭೇಟಿ ನೀಡಿ ಅಲ್ಲಿಯೂ ಸ್ಥಳೀಯರೊಂದಿಗೆ ಮಾತ ನಾಡಿ, ಪಡಿತರ ವಿತರಣೆ ಸಂಬAಧ ಪರಿಶೀ ಲಿಸಿದರು. ಕಂದಾಯ ಇಲಾಖೆ ಅಧಿಕಾರಿ ಗಳು ಆಧಾರ್ ಸಂಬAಧ ಇರುವ ಸಮಸ್ಯೆ ಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.

ಹಗ್ಗದಹಳ್ಳಿ ಗಿರಿಜನರ ಬುಡಕಟ್ಟು ಕಾಲೋ ನಿಗೂ ಭೇಟಿ ನೀಡಿ ಇನ್ನು ಎಷ್ಟು ಮಂದಿಗೆ ಪಡಿತರ ಚೀಟಿ ನೀಡಬೇಕಿದೆ ಎಂಬ ಬಗ್ಗೆ ಪರಿಶೀಲಿಸಿದರು. ಪಡಿತರ ಚೀಟಿ ಒದಗಿಸುವ ಸಂಬAಧ ಅಗತ್ಯ ಕ್ರಮ ತೆಗೆದುಕೊಳ್ಳು ವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ದರು. ಇದೇ ವೇಳೆ ಬುಡಕಟ್ಟು ಗಿರಿ ಜನರು ಕೋವಿಡ್ ಲಸಿಕೆ ಪಡೆದುಕೊಳ್ಳು ವಂತೆ ಸಚಿವರು ಮನವಿ ಮಾಡಿದರು.

ಹಾಡಿ, ಬುಡಕಟ್ಟು ಭೇಟಿಯ ಬಳಿಕ ಮಧ್ಯಾಹ್ನ ಬಂಡೀಪುರ ಅರಣ್ಯ ಇಲಾ ಖೆಯ ಸಭಾಂಗಣದಲ್ಲಿ ಅರಣ್ಯ ಇಲಾಖೆ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾ ಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಶಾಸಕ ಸಿ.ಎಸ್.ನಿರಂಜನ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಶಾಂತಮೂರ್ತಿ ಕುಲಗಾಣ, ವನ್ಯಜೀವಿ ಮಂಡಳಿಯ ಮಲ್ಲೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಬಂಡೀ ಪುರ ಹುಲಿ ಯೋಜನೆ ನಿರ್ದೇಶಕ ನಟೇಶ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿ ಕಾ.ರಾಮೇಶ್ವರಪ್ಪ, ಯೋಗಾ ನಂದ, ತಹಶೀಲ್ದಾರ್ ರವಿಶಂಕರ್, ಇನ್ನಿತರ ಅಧಿಕಾರಿಗಳು ಇದ್ದರು.

 

Translate »