ಜ್ಯೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ
ಚಾಮರಾಜನಗರ

ಜ್ಯೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ

August 27, 2021

ಚಾಮರಾಜನಗರ, ಆ.೨೬(ಎಸ್‌ಎಸ್)- ಸಿವಿಲ್ ಕಂಟ್ರಾö್ಯಕ್ಟರ್‌ರೊಬ್ಬರಿAದ ಲಂಚ ಸ್ವೀಕರಿಸುತ್ತಿದ್ದಾಗ ಜ್ಯೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಚಾಮರಾಜನಗರ ತಾಲೂಕಿನ ಯರಗನಹಳ್ಳಿ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯ ಜ್ಯೂನಿಯರ್ ಇಂಜಿನಿಯರ್ ಶಿವರಾಜ್ ಎಸಿಬಿ ಬಲೆಗೆ ಬಿದ್ದವರು.
ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ೩ನೇ ದರ್ಜೆ ಸಿವಿಲ್ ಕಂಟ್ರಾö್ಯಕ್ಟರ್ ವೈ.ಪಿ.ಮಂಜುನಾಥ್ ಎಂಬುವರು ಯರಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಯಣಗುಂಬ ಗ್ರಾಮದಲ್ಲಿ ನರೇಗಾ ಯೋಜನೆಯಡಿ ೨೦೨೦-೨೧ನೇ ಸಾಲಿನಲ್ಲಿ ರಸ್ತೆ ಕಾಮಗಾರಿ ಮತ್ತು ಕೆರೆ ಅಭಿವೃದ್ಧಿ ಕಾಮರಾಗಿ ನಡೆಸಿದ್ದರು. ಈ ಬಿಲ್‌ನ ಎಂಬಿ, ಎಂಐಎಸ್ ಮಾಡಿಕೊಡಲು ಈ ಯೋಜನೆಯಡಿ ನಿಯೋಜಿತರಾಗಿದ್ದ ಇಂಜಿನಿಯರ್ ಶಿವರಾಜ್ ಅವರನ್ನು ಮಂಜುನಾಥ್ ಭೇಟಿ ಮಾಡಿದಾಗ ೯ ಲಕ್ಷ ಬಿಲ್‌ನ ಮೊತ್ತಕ್ಕೆ ಶೇ.೫ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆಗಸ್ಟ್ ೨೧ರಂದು ೧೦ ಸಾವಿರ ರೂ. ಲಂಚದ ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಆ.೨೪ರಂದು ಉಳಿದ ೨೦ ಸಾವಿರ ರೂ. ಹಣವನ್ನು ನೀಡುವಂತೆ ಒತ್ತಾಯಿಸಿದ್ದರು.

ಈ ಬಗ್ಗೆ ಮಂಜುನಾಥ್ ಅವರು ನಗರದ ಎಸಿಬಿ ಪೊಲೀಸ್ ಠಾಣೆಗೆ ಶಿವರಾಜ್ ವಿರುದ್ಧ ದೂರು ಸಲ್ಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ಕಾರ್ಯಾಚರಣೆ ಆರಂಭಿಸಿದರು. ಫಾರೆಸ್ಟ್ ನರ್ಸರಿ ಬಳಿ ಇರುವ ಶಿವರಾಜ್ ಅವರಿಗೆ ಸೇರಿದ ಖಾಸಗಿ ಕಚೇರಿಯಲ್ಲಿ ಮಂಜುನಾಥ್ ಅವರಿಂದ ೨೦ ಸಾವಿರ ರೂ. ಲಂಚ ಪಡೆಯುವಾಗ ಶಿವರಾಜ್‌ಗೆ ಬಲೆ ಬೀಸಲಾಯಿತು.

ಎಸಿಬಿ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್, ಇನ್ಸ್ಪೆಕ್ಟರ್ ಕಿರಣ್‌ಕುಮಾರ್, ಸಿಬ್ಬಂದಿ ಸತೀಶ್, ಮಲ್ಲಿಕಾರ್ಜುನ, ಮಹದೇವಸ್ವಾಮಿ, ಕೃಷ್ಣಕುಮಾರ್, ನಾಗಲಕ್ಷಿö್ಮ, ಚಾಲಕರಾದ ಮಹದೇವಸ್ವಾಮಿ, ನಾಗೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

Translate »