ಶಾಸಕ ಮಹೇಶ್ ಬಿಜೆಪಿ ಸೇರ್ಪಡೆ ಯಳಂದೂರಿನಲ್ಲಿ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ
ಚಾಮರಾಜನಗರ

ಶಾಸಕ ಮಹೇಶ್ ಬಿಜೆಪಿ ಸೇರ್ಪಡೆ ಯಳಂದೂರಿನಲ್ಲಿ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ

August 27, 2021

ಪೊಲೀಸ್ ಇಲಾಖೆ ಅನುಮತಿ ಇಲ್ಲ, ಕೋವಿಡ್ ನಿಯಮ ಉಲ್ಲಂಘನೆ, ಪ್ರಮುಖರ ಅನುಪಸ್ಥಿತಿ
ಯಳಂದೂರು, ಆ.೨೬(ವಿ.ನಾಗರಾಜು)- ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆ ಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ಬಿಜೆಪಿ ಮಂಡಲದಿAದ ಬೈಕ್ ರ‍್ಯಾಲಿ ನಡೆಸಲಾಯಿತು.

ಈ ವೇಳೆ ಶಾಸಕ ಎನ್.ಮಹೇಶ್ ಮಾತ ನಾಡಿ, ಕ್ಷೇತ್ರದ ಶಾಸಕನಾಗಿ ಇಲ್ಲಿನ ಅಭಿವೃದ್ಧಿ ಹಾಗೂ ನನ್ನ ಕಾರ್ಯಕರ್ತರ ಭವಿಷ್ಯಕ್ಕೋ ಸ್ಕರ ನನಗೆ ರಾಷ್ಟಿçÃಯ ಪಕ್ಷದ ಅವಶ್ಯಕತೆ ಇತ್ತು. ಹಾಗಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದೇನೆ. ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣ ಕನಾಗಿ ದುಡಿ ಯುತ್ತೇನೆ. ಮುಂದಿನ ೨೦೨೩ರಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವ ಮೂಲಕ ಅಧಿಕಾರಕ್ಕೆ ತರಲು ಶ್ರಮಪಡು ತ್ತೇನೆ. ಈಗ ಉಳಿದಿರುವ ೨ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಿಸಲಾಗಿ ಟ್ಟಿದ್ದು, ಎಲ್ಲಾ ಸಮುದಾಯದ ಜನರ ಪರವಾಗಿ ಕೆಲಸವನ್ನು ಮಾಡುತ್ತೇನೆ ಎಂದರು.

ನಿಯಮ ಉಲ್ಲಂಘನೆ: ಪಟ್ಟಣದಲ್ಲಿ ನಡೆದ ಬೈಕ್ ರ‍್ಯಾಲಿಗೆ ಪೊಲೀಸ್ ಇಲಾಖೆ ಯಿಂದ ಅನುಮತಿ ಪಡೆದಿರಲಿಲ್ಲ. ಬೆಳಗ್ಗೆ ೧೦ ಗಂಟೆಯಿAದಲೇ ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕ ಮಹೇಶ್ ಬೆಂಬಲಿಗರು ಬೈಕ್‌ಗಳಲ್ಲಿ ಪಟ್ಟಣದ ರಾಷ್ಟಿçÃಯ ಹೆದ್ದಾರಿ ೨೦೯ರಲ್ಲಿ ಸಂಚರಿಸಿದರು.
ಎಸ್‌ಬಿಯ ಸರ್ಕಲ್, ಬಸ್ ನಿಲ್ದಾಣ, ಪ್ರವಾಸಿ ಮಂದಿರ ಸೇರಿದಂತೆ ಹಲವೆಡೆ ಪಟಾಕಿ ಗಳನ್ನು ಸಿಡಿಸಲಾಯಿತು. ಈ ಸಂದರ್ಭ ದಲ್ಲಿ ಸಾಮಾಜಿಕ ಅಂತರ ಮರೆಯಾಗಿತ್ತು. ಬಹುತೇಕರು ಮಾಸ್ಕ್ ಹಾಗೂ ಹೆಲ್ಮೆಟ್ ಗಳನ್ನು ಧರಿಸದೆ ಬೈಕ್ ಸವಾರಿ ಮಾಡಿದರು.

ಮುಖಂಡರ ಅನುಪಸ್ಥಿತಿ: ಮಾಜಿ ಶಾಸಕ ಜಿ.ಎನ್.ನಂಜುAಡಸ್ವಾಮಿ, ಎಸ್‌ಸಿ ಮೋರ್ಚಾ ಘಟಕದ ಅಧ್ಯಕ್ಷ ಹಾಗೂ ತಾಲೂ ಕಿನ ಮುಖಂಡ ಕಿನಕಹಳ್ಳಿ ರಾಚಯ್ಯ ಸೇರಿದಂತೆ ಹಲವು ಮುಖಂಡರ ಅನುಪ ಸ್ಥಿತಿ ರ‍್ಯಾಲಿಯಲ್ಲಿ ಎದ್ದು ಕಾಣುತ್ತಿತ್ತು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್, ಮಂಡಲದ ಅಧ್ಯಕ್ಷ ಮಹೇಶ್, ಪಪಂ ನಾಮನಿರ್ದೇಶಿತ ಸದಸ್ಯರಾದ ರಘು, ಮಹೇಶ್, ನಿಂಗರಾಜು, ಮುಖಂಡರಾದ ಡಾ.ಬಾಬು, ಮಾಂಬಳ್ಳಿ ನಂಜುAಡ ಸ್ವಾಮಿ, ಪಿ.ಮಾದೇಶ್, ಚಂದ್ರಶೇಖರ್, ಮದ್ದೂರು ಶ್ರೀಕಂಠಸ್ವಾಮಿ, ಮಾಂಬಳ್ಳಿ ರಾಮು, ರೇಚಣ್ಣ, ಮಾದೇಶ್, ಶಿವಕುಮಾರ್, ಶಾಂತರಾಜು, ಗೋಪಿ, ಅನಿಲ್, ಅಗರರಾಜು ಇದ್ದರು.

Translate »