ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ `ಸಖಿ’ ಸಾಂತ್ವ್ವನ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕ ಎಲ್.ನಾಗೇಂದ್ರರಿಂದ ಶಂಕುಸ್ಥಾಪನೆ
ಮೈಸೂರು

ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ `ಸಖಿ’ ಸಾಂತ್ವ್ವನ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕ ಎಲ್.ನಾಗೇಂದ್ರರಿಂದ ಶಂಕುಸ್ಥಾಪನೆ

November 12, 2020

ಮೈಸೂರು, ನ.11(ಎಂಟಿವೈ)- ದೌರ್ಜನ್ಯ ಕ್ಕೊಳಗಾಗುವ ಮಹಿಳೆಯರಿಗೆ ಒಂದೇ ಸೂರಿ ನಡಿ ಕಾನೂನು ಹಾಗೂ ವೈದ್ಯಕೀಯ ನೆರವು ನೀಡುವ ನಿಟ್ಟಿನಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ `ಸಖಿ ಒನ್ ಸ್ಟಾಫ್ ಸೆಂಟರ್’ಗೆ ನೂತನ ಕಟ್ಟಡ ನಿರ್ಮಾ ಣಕ್ಕೆ ಬುಧವಾರ ಶಾಸಕ ಎಲ್.ನಾಗೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.

ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣ ದಲ್ಲಿರುವ ಮಕ್ಕಳ ಆಸ್ಪತ್ರೆ ಹಿಂಭಾಗದಲ್ಲಿ 40ಘಿ40 ಅಳತೆಯ ನಿವೇಶನದಲ್ಲಿ 48 ಕೋಟಿ ರೂ. ವೆಚ್ಚದಲ್ಲಿ `ಸಖಿ ಒನ್ ಸ್ಟಾಫ್ ಸೆಂಟರ್’ಗೆ ನೆಲ ಮಹಡಿ ಹಾಗೂ ಮೊದಲ ಮಹಡಿ ಯುಳ್ಳ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬಳಿಕ ಮಾತನಾಡಿದ ಅವರು, ವಿವಿಧ ಸ್ವರೂಪದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ ಸಣ್ಣ ಕೊಠಡಿ ಯಲ್ಲಿ `ಸಖಿ’ ಕೇಂದ್ರ ಕಾರ್ಯನಿರ್ವಹಿಸು ತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಬಂದಾಗ ಅವರ ಮನಸ್ಸಲ್ಲಿರುವ ಆತಂಕ ಹೋಗಲಾಡಿಸಿ, ಸಾಂತ್ವನ ಹೇಳುವ ಅವಶ್ಯ ಕತೆ ಇದೆ. ಇದಕ್ಕೆ ವಿಶಾಲವಾದ ಕಟ್ಟಡದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯ ಅನು ದಾನದಲ್ಲಿ 48 ಲಕ್ಷ ರೂ. ಬಿಡುಗಡೆಯಾಗಿದ್ದು, ಸುಸಜ್ಜಿತ ಕಟ್ಟಡವನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗುತ್ತಿದೆ. 3-4 ತಿಂಗ ಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು, ಆರೋಗ್ಯ ಸೇವೆ ಯೊಂದಿಗೆ ಆಪ್ತ ಸಮಾಲೋಚನಾ ವ್ಯವಸ್ಥೆ ಒಂದೇ ಸ್ಥಳದಲ್ಲಿ ಉತ್ತಮ ವಾತಾವರಣ ದೊಂದಿಗೆ ದೊರೆಯುವಂತಾಗಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ಪದ್ಮ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಚೆಲು ವಾಂಬ ಆಸ್ಪತ್ರೆಯಲ್ಲಿ 2014ರ ನವೆಂಬರ್ ನಲ್ಲಿ ಚಿಕ್ಕ ಕೊಠಡಿಯಲ್ಲಿ `ಸಖಿ’ ಕೇಂದ್ರ ವನ್ನು ಸ್ಥಾಪಿಸಲಾಗಿತ್ತು. ಅಂದಿನಿಂದ ಸಖಿ ಕೇಂದ್ರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸ್ಥಳಾಭಾವದ ಕೊರತೆ ನೀಗಿಸಲು ಶಾಸಕರು ಹೊಸ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಅಪ್ರಾಸ್ತರ ಮೇಲೆ ನಡೆಯುವ ದೌರ್ಜನ್ಯ, ಪೋಕ್ಸೊ ಕಾಯ್ದೆ ಅಪರಾಧ, ಅಪಹರಣ, ಬಾಲ್ಯವಿವಾಹ, ವರದಕ್ಷಿಣಿ ಕಿರುಕುಳದಿಂದ ಸಂತ್ರಸ್ತರಾದವರು, ಮಾನವ ಸಾಗಾಣಿಕೆ ಯಿಂದ ರಕ್ಷಿಸಲ್ಪಟ್ಟವರು, ಆಸಿಡ್ ದಾಳಿ ಸೇರಿದಂತೆ ವಿವಿಧ ದೌರ್ಜನ್ಯಕ್ಕೆ ಒಳ ಗಾದವರಿಗೆ ಒಂದೇ ಸೂರಿನಡಿ ಆರೋಗ್ಯ ಸೇವೆ, ಕಾನೂನು ನೆರವು, ಆಪ್ತ ಸಮಾ ಲೋಚನೆ ಸೇವೆ ನೀಡಲು ಹೊಸ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾ ಗುತ್ತಿದೆ. ತೊಂದರೆಗೆ ಒಳಗಾದ ಮಹಿಳೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ ಎಂದರು. ಈ ಸಂದರ್ಭ ದಲ್ಲಿ ಚೆಲು ವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ಪ್ರಮೀಳಾ, ಪಾಲಿಕೆ ಸದಸ್ಯ ಎಂ.ಡಿ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಮ್ ಆಫೀಸರ್ ಗೀತಾಲಕ್ಷ್ಮಿ, ನಿರ್ಮಿತಿ ಕೇಂದ್ರದ ಇಂಜಿನಿ ಯರ್ ಲವ, ಎಇಇ ಸತೀಶ್, ಮುಖಂಡ ರಾದ ದಿನೇಶ್ ಗೌಡ, ಪ್ರವೀಣ್ ಕುಮಾರ್ ಹಾಗೂ ಇನ್ನಿ ತರರು ಉಪಸ್ಥಿತರಿದ್ದರು.

Translate »