ಕೆ.ಜಿ.ಕೊಪ್ಪಲು ಒಳಚರಂಡಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು

ಕೆ.ಜಿ.ಕೊಪ್ಪಲು ಒಳಚರಂಡಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

June 19, 2020

ಮೈಸೂರು, ಜೂ.18(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಮೈಸೂರು ಮಹಾ ನಗರ ಪಾಲಿಕೆಯ 42ನೇ ವಾರ್ಡ್ ವ್ಯಾಪ್ತಿಯ ಕೆ.ಜಿ.ಕೊಪ್ಪಲಿನಲ್ಲಿ 50 ಲಕ್ಷ ರೂ. ಅಂದಾಜು ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಶಾಸಕರ ಎಸ್‍ಎಫ್‍ಸಿ ವಿವೇಚನಾ ಅನು ದಾನದಡಿ ಕೆ.ಜಿ.ಕೊಪ್ಪಲಿನಲ್ಲಿ 1100 ಮೀ. ಉದ್ದದ 34 ಆಳಗುಂಡಿಗಳನ್ನು ಒಳಗೊಂಡ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗು ತ್ತಿದೆ. ಈ ಸಂದರ್ಭ ವಾರ್ಡ್‍ನ ಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ಚಾಮ ರಾಜ ಕ್ಷೇತ್ರ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪುನೀತ್, ಮುಖಂಡ ರಾದ ಬಸವಣ್ಣ, ಸಂಜೀವ, ರಾಕೇಶ್, ಜ್ಯೋತಿ, ಮಮತಾ ಮತ್ತಿತರರಿದ್ದರು.

 

Translate »