ಮೈಸೂರು, ಜೂ.18(ಆರ್‍ಕೆಬಿ)- ವೀರವನಿತೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ 162ನೇ ಪುಣ್ಯಸ್ಮರಣೆ ಅಂಗವಾಗಿ ಹಿಂದೂಪರ ಮಹಿಳಾ ವೇದಿಕೆ ಕಾರ್ಯ ಕರ್ತೆಯರು ಮೈಸೂರಿನ ಮಾತೃಮಂಡಳಿ ವೃತ್ತದಲ್ಲಿ ಲಕ್ಷ್ಮಿಬಾಯಿ ಭಾವಚಿತ್ರ ಪ್ರದರ್ಶಿಸಿ ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ವೇದಿಕೆ ಅಧ್ಯಕ್ಷೆ ಲಕ್ಷ್ಮೀದೇವಿ, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಹೆಸರು ಯಾರೂ ಮರೆಯಲು ಸಾಧ್ಯವಿಲ್ಲ. ಆಕೆ ಭಾರತೀಯ ಮಹಿಳೆಯರಿಗೆ ಸ್ಫೂರ್ತಿ. ಧೀರೆ, ಯುದ್ಧ ಕೌಶಲ ಚತುರೆ, ಬ್ರಿಟಿಷ್ ಗೌರ್ನರ್ ಜನರಲ್ ಡಾಲ್‍ಹೌಸಿಯ ಪಿತೂರಿಯಿಂದ ಲಕ್ಷ್ಮೀಬಾಯಿ ಹಾಗೂ ದತ್ತು ಪುತ್ರ ದಾಮೋದರ್‍ರಾವ್ ರಾಜ್ಯ ಕಳೆದುಕೊಳ್ಳುವಂತಾಯಿತು. ಆದರೂ ಲಕ್ಷ್ಮಿಬಾಯಿ ಅವರು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿ ಅಮರರಾದರು ಎಂದು ನೆನಪಿಸಿಕೊಂಡರು. ಈ ಸಂದರ್ಭ ವೇದಿಕೆಯ ಮುಖಂಡರಾದ ಪ್ರೇಮ, ಸ್ವಾತಿ, ರಾಜೇಶ್ವರಿ, ರೇಣುಕಾ, ಮಹದೇವಮ್ಮ, ಬಾಲಕ-ಬಾಲಕಿಯರು ಇದ್ದರು.
