ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ
ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ

September 26, 2021

ಮೈಸೂರು, ಸೆ.25(ಆರ್‍ಕೆಬಿ)- ಮೈಸೂರಿನ 19 ಮತ್ತು 21ನೇ ವಾರ್ಡ್ ವ್ಯಾಪ್ತಿಯ ಒಟ್ಟು 28.75 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕರ ಸ್ಥಳೀಯ ಪ್ರದೇಶಾ ಭಿವೃದ್ಧಿ ಅನುದಾನ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 19ನೇ ವಾರ್ಡ್‍ನ ಪ್ರೀಮಿಯರ್ ಸ್ಟುಡಿಯೋ ಸಿಗ್ನಲ್ ಬಳಿ 3.75 ಲಕ್ಷ ರೂ.ಗಳಲ್ಲಿ ಅನ್ನಪೂರ್ಣೇಶ್ವರಿ ಆಟೋ ನಿಲ್ದಾಣದ ಛಾವಣಿ ನಿರ್ಮಾಣ, 21ನೇ ವಾರ್ಡ್‍ನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಕುಕ್ಕರಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಮೊದಲನೇ ಮಹಡಿಯ ಮುಂದುವರಿದ ಕಟ್ಟಡ ನಿರ್ಮಾಣ, 5 ಲಕ್ಷ ರೂ. ವೆಚ್ಚದಲ್ಲಿ ಕುಕ್ಕರಹಳ್ಳಿಯ ಜೈಭೀಮ್ ಕ್ಷೇಮಾ ಭಿವೃದ್ಧಿ ಸಂಘಕ್ಕೆ ಸೇರಿದ ಮಾರಮ್ಮನ ದೇವಾಲಯ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ವೇದಾ ವತಿ, ಚಾಮರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡ ರಾದ ಶಿವಶಂಕರ್, ದಿನೇಶ್‍ಗೌಡ, ಗುಣಶೇಖರ, ಸೋಮ ಶೇಖರ್, ರಾಜು ಅರಸ್, ಅಂದಾನಿ, ಮಹದೇವು, ಪುರು ಷೋತ್ತಮ್, ನಾರಾಯಣಪ್ಪ, 19ನೇ ವಾರ್ಡ್ ಅಧ್ಯಕ್ಷ ಮಲ್ಲಿಕಾರ್ಜುನ, ಶಿವಲಿಂಗೇಗೌಡ, ಶ್ರೀನಿವಾಸ್, ನವೀನ್, ಚಲುವ, ಶಿವಪ್ರಕಾಶ್, ಮದನ್, ಕಾರ್ತಿಕ್, ಜಯಣ್ಣ, ಕೆಆರ್‍ಐಡಿಎಲ್ ಇಂಜಿನಿಯರ್ ಅರ್ಚನಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಲವ ಇನ್ನಿತರರು ಉಪಸ್ಥಿತರಿದ್ದರು.

Translate »