ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ
ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ

May 15, 2020

ಮೈಸೂರು, ಮೇ 14 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದ ನಡುವೆಯೂ ಶಾಸಕ ಎಲ್.ನಾಗೇಂದ್ರ ಗುರುವಾರ ಚಾಮರಾಜ ವಿಧಾನಸಭಾ ಕ್ಷೇತ್ರ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ಮೈಸೂರಿನ ಇರ್ವಿನ್ ರಸ್ತೆಯ ಸೋಮ ವಂಶ ಕ್ಷತ್ರಿಯ ಸೇವಾ ಸಂಘದ ಶ್ರೀ ಸೀತಾ ರಾಮಮಂದಿರದ ಮಹಡಿ ಮೇಲೆ ಮೆಟಲ್ ಟ್ರೆಸ್ ನಿರ್ಮಾಣ ಮಾಡುವ 10 ಲಕ್ಷ ರೂ. ಕಾಮಗಾರಿ, ಮೇದರ ಬ್ಲಾಕಿನ ಗಣಪತಿ ಹಾಗೂ ಮಾರಮ್ಮ ದೇವಸ್ಥಾನಗಳ ಜೀರ್ಣೋ ದ್ಧಾರ ಕಾಮಗಾರಿ (3 ಲಕ್ಷ ರೂ.), ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಕ್ರೀಡಾಂಗಣದ ಪೂರ್ವ ಭಾಗದಲ್ಲಿ ಮೆಟ್ಟಿಲು ಮತ್ತು ವೇದಿಕೆ ನಿರ್ಮಾಣ (5 ಲಕ್ಷ ರೂ.) ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ವಿಜಯನಗರ 2ನೇ ಹಂತದ ವೀರಶೈವ ಸಮಿತಿ ಭವನಕ್ಕೆ ಗೋಡೆ ನಿರ್ಮಿಸುವ 10 ಲಕ್ಷ ರೂ. ಸೇರಿ ಒಟ್ಟು 33 ಲಕ್ಷ ರೂ. ಕಾಮ ಗಾರಿಗಳಿಗೆ ನಾಗೇಂದ್ರ ಭೂಮಿಪೂಜೆ ನೆರವೇರಿ ಸಿದರು. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮ ಶೇಖರರಾಜು, ಶ್ರೀ ಹರ್ಷ, ಪುನೀತ್ ಕುಮಾರ್, ಷಣ್ಮುಗಂ, ನಿತಿನ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Translate »