ವಿವಿಧ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

ವಿವಿಧ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ

May 23, 2020

ಮೈಸೂರು, ಮೇ 22ಪಿಎಂ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 42ರಲ್ಲಿ `ಎಸ್‍ಎಫ್‍ಸಿ ಅನುದಾನ’ದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಬಸ್ ತಂಗು ದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. 25 ಲಕ್ಷ ರೂ. ವೆಚ್ಚದಲ್ಲಿ ಕೆಜಿ ಕೊಪ್ಪಲಿನ 1 ಮತ್ತು 4ನೇ ಕ್ರಾಸ್‍ಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಪಾದಚಾರಿ ಮಾರ್ಗದಲ್ಲಿ ಡೆಕ್‍ಸ್ಲ್ಯಾಬ್ ಅಳವಡಿಕೆ ಕಾಮಗಾರಿ ಹಾಗೂ 15 ಲಕ್ಷ ರೂ. ವೆಚ್ಚದಲ್ಲಿ ಕಾಂತರಾಜು ಅರಸು ರಸ್ತೆಯಲ್ಲಿ (ಅಗ್ನಿ ಶಾಮಕ ಠಾಣೆ ಮುಂಭಾಗ) ಬಸ್  ತಂಗು ದಾಣ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ವಾರ್ಡ್ 42ರ ಮೈಸೂರು ಮಹಾ ನಗರಪಾಲಿಕೆ ಸದಸ್ಯ ಶಿವಕುಮಾರ್, ಬಿಜೆಪಿ ಚಾಮರಾಜ ಕ್ಷೇತ್ರ ಪ್ರಧಾನ ಕಾರ್ಯ ದರ್ಶಿ ಪುನೀತ್, ಪಕ್ಷದ ಮುಖಂಡರಾದ ಬಲರಾಮ್, ದೇವರಾಜ್, ರವಿ, ರವಿಗೌಡ, ಬಸವಣ್ಣ, ಕೃಷ್ಣಪ್ಪ, ಚನ್ನಪ್ಪ, ಶಂಭಣ್ಣ, ಜ್ಯೋತಿ, ಮಮತಾ ಮತ್ತಿತರರಿದ್ದರು.

 

 

Translate »