ಮಳೆ ಹಾನಿ ಪ್ರದೇಶಗಳಿಗೆ ಶಾಸಕ ರಾಮದಾಸ್ ಭೇಟಿ
ಮೈಸೂರು

ಮಳೆ ಹಾನಿ ಪ್ರದೇಶಗಳಿಗೆ ಶಾಸಕ ರಾಮದಾಸ್ ಭೇಟಿ

October 29, 2021

ಮೈಸೂರು, ಅ.28(ಆರ್‍ಕೆಬಿ)-ಕಳೆದ ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಪರಿಶೀಲಿಸಿದರು.

ಕುವೆಂಪುನಗರ, ಜಯನಗರ, ಅಗ್ರಹಾರ, ಇಟ್ಟಿಗೆಗೂಡು, ಕುವೆಂಪು ನಗರ ಎಂ.ಬ್ಲಾಕ್, ವಿಶ್ವೇಶ್ವರನಗರ, ಜೆ.ಪಿ.ನಗರ ಶ್ರೀರಾಂಪುರ ವಾರ್ಡ್ ಗಳಲ್ಲಿ ಮಳೆಯಿಂದ ತೀವ್ರ ಹಾನಿಯಾಗಿದ್ದು, ಆಯಾಯ ನಗರಪಾಲಿಕೆ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ವಿಭಾಗದ ಇಂಜಿನಿಯರುಗಳು, ಮುಡಾ ಇಂಜಿನಿಯರುಗಳು ಹಾಗೂ ಆರೋಗ್ಯಾಧಿಕಾರಿಗಳು, ವಲಯ ಇಂಜಿನಿಯರುಗಳೊಂದಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮದಾಸ್, ಮೊದಲಿದ್ದ ಸಮಸ್ಯೆ ಗಳನ್ನು ಈಗಾಗಲೇ ಬಗೆಹರಿಸಲಾಗಿದೆ. ಆದರೆ ಈಗ ಭಾರೀ ಮಳೆ ಯಿಂದಾಗಿ 15 ಕಡೆ ಸಮಸ್ಯೆ ಉಂಟಾಗಿದೆ. ಒಳಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ಹೀಗಾಗಿದೆ. ಇವೆಲ್ಲವನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭ ದಲ್ಲಿ ಮೇಯರ್ ಸುನಂದಾ ಪಾಲನೇತ್ರ, ನಗರಪಾಲಿಕೆ ಸದಸ್ಯರಾದ ರೂಪಾ, ಛಾಯಾದೇವಿ, ಬಿ.ವಿ.ಮಂಜುನಾಥ್, ಚಂಪಕ, ಗೀತಾಶ್ರೀ ಯೋಗಾ ನಂದ್, ಶಾಂತಮ್ಮ ವಡಿವೇಲು, ಶಿವಕುಮಾರ್, ಬಿಜೆಪಿ ಮುಖಂಡರಾದ ಎಂ.ವಡಿವೇಲು, ಎಂ.ಆರ್.ಬಾಲಕೃಷ್ಣ, ಓಂ.ಶ್ರೀನಿವಾಸ್, ಪ್ರಸಾದ್ ಬಾಬು, ಯೋಗೇಶ್‍ಬಾಬು, ಯೋಗಾನಂದ್, ನಾಗರಾಜ್, ಆಶ್ರಯ ಸಮಿತಿ ಸದಸ್ಯ ಹೇಮಂತ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು

Translate »