ಸಾವಿಗೆ ಆಹ್ವಾನಿಸಿದ ಮೊಬೈಲ್ ಸಂಭಾಷಣೆ
ಮಂಡ್ಯ

ಸಾವಿಗೆ ಆಹ್ವಾನಿಸಿದ ಮೊಬೈಲ್ ಸಂಭಾಷಣೆ

October 29, 2018

ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಡಿಕ್ಕಿ: ನಿವೃತ್ತ ಶಿಕ್ಷಕ ಸಾವು
ಮಳವಳ್ಳಿ: ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದಿದೆ. ಪಟ್ಟಣದ ಎನ್‍ಇಎಸ್ ಬಡಾವಣೆಯ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ಮರಿಸ್ವಾಮಿ(65) ಮೃತಪಟ್ಟವರು.

ಘಟನೆಯ ವಿವರ: ಮರಿಸ್ವಾಮಿ ಅವರು ತಮ್ಮ ಪತ್ನಿಯೊಂದಿಗೆ ತಾಲೂಕಿನ ತೆಂಕಹಳ್ಳಿ ದೇವಸ್ಥಾನಕ್ಕೆ ಬೈಕ್‍ನಲ್ಲಿ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಅವರಿಗೆ ಮೊಬೈಲ್ ಕರೆ ಬಂದಿತು. ಕೂಡಲೇ ಅವರು ಬೈಕ್‍ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಪತ್ನಿಯನ್ನು ಬೈಕ್‍ನಿಂದ ಕೆಳಗಿಳಿಸಿ ಬೈಕ್ ಮೇಲೆಯೇ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ನಿಯಂತ್ರಣ ತಪ್ಪಿ ಮರಿಸ್ವಾಮಿ ಅವರು ಕುಳಿತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರಿಸ್ವಾಮಿ ಅವರ ತಲೆಗೆ ಗಂಭೀರ ಗಾಯ ವಾಗಿದೆ. ಕೂಡಲೇ ಅವರನ್ನು ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೆÇಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Translate »