ಸಿಕ್ಕಿ ಬಿದ್ದ ಮೊಬೈಲ್ ಕಳ್ಳ
ಕೊಡಗು

ಸಿಕ್ಕಿ ಬಿದ್ದ ಮೊಬೈಲ್ ಕಳ್ಳ

December 21, 2018

ಮಡಿಕೇರಿ:  ಮಗುವಿಗೆ ರಕ್ತ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡು ಜಿಲ್ಲಾಸ್ಪತ್ರೆಯ ರೋಗಿಗಳಿಂದ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬ, ರಾತ್ರಿ ವೇಳೆಯಲ್ಲಿ ಮೊಬೈಲ್ ಕದಿಯುತ್ತಿದ್ದ ಸಂದರ್ಭ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.

ಪಾಲೆಬೆಟ್ಟದ ದಿನೇಶ್ ಎಂಬಾತ ಕುಂಟು ನೆಪ ಹೇಳಿಕೊಂಡು ರೋಗಿಗಳಿಂದ 1500 ರೂ. ಹಣವನ್ನೂ ಸಂಗ್ರಹಿಸಿ ಚಾರ್ಜ್‍ಗೆ ಇಡಲಾಗಿದ್ದ ಮೊಬೈಲ್ ಕದ್ದಿದ್ದಾನೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಐಸಿಯು ಮತ್ತು ಶಸ್ತ್ರಚಿಕಿತ್ಸೆ ಕೊಠಡಿಯ ಹೊರಗೆ ನಿನ್ನೆ ರಾತ್ರಿ 10.30 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತೆಕ್ಕೇರಾ ಜೀವನ್ ಕುಶಾಲಪ್ಪ ಎಂಬುವರು ಮಡಿಕೇರಿ ನಗರ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಜಿಲ್ಲಾಸ್ಪತ್ರೆಯ ಒಳಭಾಗ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಇಂತಹ ಕೃತ್ಯಗಳು ನಡೆಯುವಂತಾಗಿದೆ ಎಂದು ಮೊಬೈಲ್ ಕಳೆದುಕೊಂಡವರು ಆರೋಪಿಸಿದ್ದಾರೆ.

Translate »