ಮನ್ ಕಿ ಬಾತ್‍ನಲ್ಲಿ ಯುವ ಬ್ರಿಗೇಡ್ ಪ್ರಶಂಸಿಸಿದ ಮೋದಿ
ಮೈಸೂರು

ಮನ್ ಕಿ ಬಾತ್‍ನಲ್ಲಿ ಯುವ ಬ್ರಿಗೇಡ್ ಪ್ರಶಂಸಿಸಿದ ಮೋದಿ

December 28, 2020

ನವದೆಹಲಿ,ಡಿ.27-ಪ್ರಧಾನಿ ನರೇಂದ್ರ ಮೋದಿ ಭಾನು ವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ಬ್ರಿಗೇಡ್ ಬಗ್ಗೆಯೂ ಮಾತ ನಾಡಿದ್ದಾರೆ. ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ಚಕ್ರ ವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡ ಶಿಥಿಲ ಗೊಂಡಿದ್ದ, ಅವ್ಯವಸ್ಥೆಗೀಡಾಗಿದ್ದ ವೀರಭದ್ರಸ್ವಾಮಿ ದೇವಾ ಲಯದ ಜೀರ್ಣೋದ್ಧಾರ ಮಾಡಿತ್ತು. ಈ ಜೀರ್ಣೋದ್ಧಾರ ಕಾಮಗಾರಿಯ ಫೆÇೀಟೋಗಳು ಸಹ ವೈರಲ್ ಆಗಿತ್ತು. ಅದೇ ಫೆÇೀಟೋಗಳ ಬಗ್ಗೆ ಪ್ರಧಾನಿ ಮನ್ ಕಿ ಬಾತ್ ಕಾರ್ಯ ಕ್ರಮದಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇಚ್ಛಾಶಕ್ತಿ, ಬದ್ಧತೆ ಇದ್ದಲ್ಲಿ ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಯುವ ಬ್ರಿಗೇಡ್ ತಂಡ ಉದಾಹರಣೆ ಎಂದು ಹೇಳಿದ್ದಾರೆ.

“ಸಾಧಿಸುವ ಛಲ, ಚೈತನ್ಯ, ಮಾಡಬೇಕೆಂಬ ಹುಮ್ಮಸ್ಸು ಕಂಡಾಗ ದೇಶದ ಯುವಕರ ಬಗ್ಗೆ ಸಂತೋಷ ಮತ್ತು ಭರ ವಸೆ” ಮೂಡುತ್ತದೆ, ಇಂತಹ ಇಚ್ಛಾಶಕ್ತಿ ಹೊಂದಿದ ಯುವಕ ರಿಗೆ ಯಾವುದೂ ಸಹ ದೊಡ್ಡ ಸವಾಲಲ್ಲ ಹಾಗೂ ಅಂತಹ ಯುವ ಶಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಯುವ ಬ್ರಿಗೇಡ್‍ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಪ್ರಧಾನಿ ಗಳ ಮೆಚ್ಚುಗೆಯ ಮಾತುಗಳಿಂದ ಈಗ ನಮ್ಮ ಶಕ್ತಿ ನೂರ್ಮಡಿ ಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಕುಂದಾ ಪುರದ ಬೈಂದೂರಿನ ನವದಂಪತಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಳೆದ ತಿಂಗಳು ನವೆಂಬರ್ 18ರಂದು ಕುಂದಾ ಪುರದ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ಮದುವೆ ಯಾಗಿದ್ದರು. ಮದುವೆಯಾದ ನವ ದಂಪತಿ ಸಾಮಾನ್ಯವಾಗಿ ತಮ್ಮದೇ ಲೋಕದಲ್ಲಿ ವಿಹರಿಸು ತ್ತಿರುತ್ತಾರೆ, ಹನಿಮೂನ್‍ಗೆ ಹೋಗುತ್ತಾರೆ. ಆದರೆ ಈ ದಂಪತಿ ಮಾಡಿದ ಕೆಲಸ ಸೋಮೇಶ್ವರ ಬೀಚ್‍ನ್ನು ಸ್ವಚ್ಛಗೊಳಿಸಿದ್ದು. ಅನುದೀಪ್‍ಗೆ ಹಿಂದಿನಿಂದಲೂ ತಮ್ಮ ಮನೆಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛಗೊಳಿಸುವುದು ಅಭ್ಯಾಸ. ಅದಕ್ಕೀಗ ಅವರ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ. ಲಕ್ಷದ್ವೀಪ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿ ಸ್ವಚ್ಛ ಮಾಡಬೇಕೆಂದು ಅಂದುಕೊಂಡಿದ್ದರು ಇವರು, ಆದರೆ ಕೊರೊನಾ ದಿಂದಾಗಿ ಹೋಗದೆ ತಮ್ಮ ಮನೆ ಹತ್ತಿರವೇ ಸ್ವಚ್ಛ ಮಾಡಿದ್ದಾರೆ. ಸಮುದ್ರ ತೀರದಲ್ಲಿ ಚಪ್ಪಲ್‍ಗಳು, ಆಲ್ಕೋಹಾಲ್ ಬಾಟಲ್‍ಗಳು, ವೈದ್ಯಕೀಯ ಬಾಟಲ್‍ಗಳು, ಕಸಗಳು, ಪ್ಲಾಸ್ಟಿಕ್‍ಗಳು ಬಿದ್ದುಕೊಂಡಿರುತ್ತವೆ. ಅವುಗಳನ್ನೆಲ್ಲಾ ಸ್ವಚ್ಛಗೊಳಿಸಿದ್ದೇವೆ ಎನ್ನುತ್ತಾರೆ ಅನುದೀಪ್. 31 ವರ್ಷದ ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ನ.27ರಿಂದ ಡಿ05ರವರೆಗೆ ಇವರು ಸುಮಾರು 600 ಕಿಲೋ ತ್ಯಾಜ್ಯಗಳನ್ನು ಈ ದಂಪತಿ ಸೋಮೇಶ್ವರ ಬೀಚ್ ತೀರದಿಂದ ಹೊರತೆಗೆದಿದ್ದಾರಂತೆ. ಇವರ ಕೆಲಸ ಹಲವರ ಪ್ರಶಂಸೆಗೆ ಪಾತ್ರವಾಗಿದೆ.ಇದೀಗ ಪ್ರಧಾನಿಯೇ ಗುರುತಿಸಿ ಮನ್ ಕಿ ಬಾತ್‍ನಲ್ಲಿ ಇಂದಿನ ಯುವ ಪೀಳಿಗೆಗೆ ದಂಪತಿ ದಾರಿದೀಪ ಎಂದಿದ್ದಾರೆ.

 

 

Translate »