ನವದೆಹಲಿ,ಡಿ.27-ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್‍ನಿಂದ ಬೊಟಾನಿ ಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಅವರು ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಮೋದಿ ಅವರು ಏರ್‍ಪೆÇೀರ್ಟ್ ಎಕ್ಸ್‍ಪ್ರೆಸ್ ಲೈನ್‍ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿ ಲಿಟಿ ಕಾರ್ಡ್‍ಅನ್ನು ಕೂಡ ಅದೇ ದಿನ ಪ್ರಾರಂಭಿಸಲಿದ್ದಾರೆ ಎಂದೂ ಮೆಟ್ರೋ ನಿಗಮ ಹೇಳಿದೆ. ಮೆಟ್ರೋ ನಿಲ್ದಾಣಗಳಲ್ಲಿ ಕೊರೊನಾ ಹಾವಳಿ ನಿಯಂತ್ರಿಸಲು ಪ್ರಯಾಣಿಕರಿಗೆ ಇನ್ನು ಟೋಕನ್ ಮಾರಾಟಕ್ಕೆ ಅನು ಮತಿ ನೀಡಲಾಗಿಲ್ಲ. ಸಾರ್ವಜನಿಕರು ಕ್ಯಾಶ್‍ಲೆಸ್ ವಿಧಾನ ಬಳಸಿ ಕೋವಿಡ್-19ರ ವಿರುದ್ಧ ರಕ್ಷಣೆ ಪಡೆಯಲು ಸಲಹೆ ನೀಡಲಾಗಿದೆ.