ಲಲಿತಾದ್ರಿಪುರದಿಂದ ತಾಯಿ-ಮಗು ನಾಪತ್ತೆ
ಮೈಸೂರು

ಲಲಿತಾದ್ರಿಪುರದಿಂದ ತಾಯಿ-ಮಗು ನಾಪತ್ತೆ

March 9, 2021

ಮೈಸೂರು, ಮಾ.8(ಎಂಟಿವೈ)- ಮೈಸೂರು ತಾಲೂಕಿನ ಲಲಿತಾದ್ರಿಪುರದಿಂದ 6 ವರ್ಷದ ಮಗಳೊಂದಿಗೆ ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಲಲಿತಾದ್ರಿಪುರದ ನಿವಾಸಿ ಶಂಕರ್ ಎಂಬು ವರ ಪತ್ನಿ ಜ್ಯೋತಿ(26) ತನ್ನ 6 ವರ್ಷದ ಪುತ್ರಿ ಪೂಜಾಳೊಂ ದಿಗೆ ನಾಪತ್ತೆಯಾಗಿದ್ದಾರೆ. ಶಂಕರ್ 12 ವರ್ಷಗಳ ಹಿಂದೆ ಲಲಿತಾದ್ರಿಪುರದ ಜ್ಯೋತಿಯನ್ನು ವಿವಾಹವಾಗಿದ್ದು, ದಂಪತಿಗೆ 7 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಭಾನುವಾರ (ಮಾ.7) ಮಧ್ಯಾಹ್ನ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಚಿಕ್ಕ ಮಗಳು ಪೂಜಾಳನ್ನು ಕರೆದು ಕೊಂಡು ಮೈಸೂರು ನಗರಕ್ಕೆ ಹೋಗಿ ಬರುವುದಾಗಿ ತನ್ನ ತಾಯಿಗೆ ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಶಂಕರ್ ಮೈಸೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಜ್ಯೋತಿ ಕನ್ನಡ ಮಾತನಾಡುತ್ತಾರೆ. ಬಾಲಕಿ ಪೂಜಾ 3 ಅಡಿ ಎತ್ತರವಿದ್ದು, ಕನ್ನಡ ಮಾತನಾಡುತ್ತಾಳೆ. ಈ ಇಬ್ಬರ ಸುಳಿವು ದೊರೆತವರು ದಕ್ಷಿಣ ಗ್ರಾಮಾಂತರ ಠಾಣೆ ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿಗೆ ಸಂಖ್ಯೆ 0821-2520040/ 2444800 ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

Translate »