ಡಾ.ಎನ್‍ಎಸ್‍ಎಲ್ ಭಟ್ಟರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಡಾ.ಎನ್‍ಎಸ್‍ಎಲ್ ಭಟ್ಟರಿಗೆ ಭಾವಪೂರ್ಣ ಶ್ರದ್ಧಾಂಜಲಿ

March 9, 2021

ಮೈಸೂರು, ಮಾ. 8- ಕನ್ನಡ ಸಾಹಿತ್ಯ ಲೋಕದಲ್ಲಿ ‘ಎನ್ನೆಸ್ಸೆಲ್’ ಎಂದೇ ಮನೆ ಮಾತಾಗಿರುವ ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು, ವಿಮರ್ಶೆ, ಅನು ವಾದ, ನವ್ಯಕವಿತೆ, ಭಾವಗೀತೆ, ಮಕ್ಕಳ ಗೀತೆಗಳ ರಚನೆ ಹೀಗೆ ಹಲವು ಪ್ರಕಾರ ಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

ಮೂಲತಃ ಶಿವಮೊಗ್ಗದವರಾದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ. ಆನರ್ಸ್ ಪದವಿ ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾ ಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಆರ್ಟ್ ಫ್ಯಾಕಲ್ಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿಯಾಗಿದ್ದ ಲಕ್ಷ್ಮೀ ನಾರಾಯಣ ಭಟ್ಟರು ಆಂಗ್ಲ ಸಾಹಿತ್ಯ ಲೋಕದಲ್ಲಿ ಜಗದ್ವಿಖ್ಯಾತರಾದ ವಿಲಿ ಯಮ್ ಏಟ್ಸ್, ಥಾಮಸ್ ಎಲಿಯಟ್, ಷೇಕ್‍ಸ್ಪಿಯರ್ ಅವರುಗಳ ಕಾವ್ಯಗಳನ್ನು ಕನ್ನಡ ಭಾಷೆಗೆ ತಂದಿದ್ದಾರೆ. ನವ್ಯ ಸಂಪ್ರ ದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು, ‘ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ’, ‘ಈ ಬಾನು ಈ ಚುಕ್ಕಿ ಈ ಹೂ ಈ ಹಕ್ಕಿ’, ಇಂತಹ ಹಲವಾರು ಜನಪ್ರಿಯ ಗೀತೆಗಳನ್ನು ರಚಿಸಿ ದ್ದಾರೆ. ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ ಮೊದಲಾದ ಅನೇಕ ಸುಗಮ ಸಂಗೀತ ಗಾಯಕರು ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಶಿಶು ಸಾಹಿತ್ಯ ಇವರಿಗೆ ಬಹುಪ್ರಿಯ ವಾದ ಪ್ರಕಾರಗಳಲ್ಲಿ ಒಂದು, ಎನ್.ಸಿ.ಇ. ಆರ್.ಟಿ. ಸಂಸ್ಥೆಯಿಂದ ಶಿಶುಸಾಹಿತ್ಯ ಕ್ಕಾಗಿ ‘ಬಾಲಸಾಹಿತ್ಯ ಪುರಸ್ಕಾರ’ ಪಡೆದ ಭಟ್ಟರು ಇಂದು ನಮ್ಮನ್ನು ಅಗಲಿರುವುದು ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್. ತಿಮ್ಮೇಗೌಡ ಹೇಳಿದರು.

Translate »