ಎಂಎಂಕೆ-ಎಸ್‍ಡಿಎಂ ಕಾಲೇಜಿನಲ್ಲಿ ಸಿ.ವಿ.ರಾಮನ್ ಜನ್ಮ ದಿನೋತ್ಸವ
ಮೈಸೂರು

ಎಂಎಂಕೆ-ಎಸ್‍ಡಿಎಂ ಕಾಲೇಜಿನಲ್ಲಿ ಸಿ.ವಿ.ರಾಮನ್ ಜನ್ಮ ದಿನೋತ್ಸವ

March 9, 2021

ಮೈಸೂರು,ಮಾ.8-ಮೈಸೂರಿನ ಎಂಎಂ.ಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯದಲ್ಲಿ ಡಾ.ಸಿ.ವಿ.ರಾಮನ್ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನೆನಪಿಗಾಗಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ಉಮೇಶ್, ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ – ಶಿಕ್ಷಣ, ಕೌಶಲ್ಯ ಮತ್ತು ಕೆಲಸದ ಮೇಲೆ ಪರಿಣಾಮ’’ ಕುರಿತು ಮಾತನಾಡಿದರು. ತಂತ್ರಜ್ಞಾನವನ್ನು ಚಾಲನೆ ಮಾಡುವ ಮತ್ತು ಯುವ ಮನಸ್ಸುಗಳನ್ನು ಬೆಳಗಿಸುವ ಮೂಲ ವಿಜ್ಞಾನಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ ನಾವು ವಿಜ್ಞಾನ ದಿನವನ್ನು ಆಚರಿಸುತ್ತೇವೆ. ವಿಜ್ಞಾನ ಸತ್ಯದ ನಿಲುವನ್ನು ಪ್ರತಿಪಾದಿಸುತ್ತದೆ. ಭಾರತವು ವಿಶ್ವದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದೆ. ಆದರೆ ನಮ್ಮ ದೇಶದಲ್ಲಿ ವಿಜ್ಞಾನದ ಸಂಶೋಧನೆಗಳು ಅಗಾಧ ಪ್ರಮಾಣದಲ್ಲಿ ಆಗದಿರುವುದು ವಿಪರ್ಯಾಸ ಎಂದರು.

ಡಾ.ಸಿ.ವಿ.ರಾಮನ್ ಅವರು ಭೌತ ವಿಜ್ಞಾನಕ್ಕೆ ನೀಡಿದ ಸಂಶೋಧನೆ ಮತ್ತು ಸಿದ್ಧಾಂತದ ಪರಿಣಾಮವಾಗಿ ವಿಜ್ಞಾನದ ಹೊಸ ಓದು ಆರಂಭವಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಆಗಮನದಿಂದಾಗಿ ವೈದ್ಯ ವಿಜ್ಞಾನವು ಹೆಮ್ಮರವಾಗಿ ಬೆಳೆದು ಸಮಾಜದಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗ ಹಾಗೂ ಪ್ರಸಕ್ತ ಕೋವಿಡ್ ಆತಂಕದ ಸಂದರ್ಭಗಳನ್ನು ನಿವಾ ರಿಸಲು ಹೊಸ ವೈಜ್ಞಾನಿಕ ಸಂಶೋಧನೆಗಳು ನಿತ್ಯವೂ ಸಾಗುತ್ತಿದೆ. ವಿಜ್ಞಾನದ ಅಭಿವೃದ್ಧಿ ಯಿಂದ ಇಂದು ಮಾನವನ ಅನಂತ ಶಕ್ತಿ ಅನಾವರಣವಾಗಿದ್ದು, ಇಂದಿನ ವಿದ್ಯಾರ್ಥಿ ಗಳು ವಿಜ್ಞಾನದ ಮೂಲ ಸತ್ವವನ್ನು ಇತರರಿಗೆ ಸಂಶೋಧನೆ ಮೂಲಕ ತಿಳಿಸುವುದು ಅವಶ್ಯಕವಾಗಿದೆ ಎಂದರು. ಕಾಲೇಜು ಪ್ರಾಂಶುಪಾಲ ಪೆÇ್ರ.ಸಾಯಿನಾಥ್ ಮಲ್ಲಿಗೆ ಮಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೆÇ್ರ.ಭಾರತಿ, ಉಪನ್ಯಾಸಕಿ ಪೆÇ್ರ ಚಾಂದಿನಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Translate »